Pawan Kalyan: ಪವರ್ ಸ್ಟಾರ್ ಈಸ್ ಬ್ಯಾಕ್; ಫ್ಯಾನ್ಸ್‌ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಪವನ್ ಕಲ್ಯಾಣ್

ತೆಲುಗು ನಟ ಪವನ್ ಕಲ್ಯಾಣ್ ಈಗ ಆಂಧ್ರಪ್ರದೇಶದ ಉಪಮಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಜೆಪಿ, ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಪವನ್ ಬಳಿಕ ಟಿಡಿಪಿ ಜೊತೆ ಕೈಜೋಡಿಸಿದ್ದರು. ಎರಡು ವರ್ಷಗಳಿಂದ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಮಹತ್ವದ ಸ್ಥಾನ ಅಲಂಕರಿಸಿದ್ದಾರೆ. ಇದು ಸಹಜವಾಗಿಯೇ ಪವನ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಪವನ್ ರಾಜಕೀಯರಂಗದಲ್ಲಿ ಯಶಸ್ಸು ಕಂಡಿದ್ದು ಅಭಿಮಾನಿಗಳಿಗೆ ಖುಷಿ ತಂದಿತ್ತು. ಆದರೆ ಸಿನಿಮಾಗಳಲ್ಲಿ ನಟಿಸಲ್ಲ ಎನ್ನುವುದು ಬೇಸರ ಮೂಡಿಸಿತ್ತು. ಬಹಳ ಹಿಂದೆ ಆರಂಭಿಸಿದ್ದ 3 ಸಿನಿಮಾಗಳನ್ನು ಕಳೆದ ವರ್ಷ ಪೂರ್ಣಗೊಳಿಸಿ ಬಿಡುಗಡೆ ಮಾಡಿದ್ದರು. 'ಹರಿಹರ ವೀರಮಲ್ಲು', 'OG' ಹಾಗೂ 'ಉಸ್ತಾದ್ ಭಗತ್ ಸಿಂಗ್' ಆಗಿ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ದೊಡ್ಡಮಟ್ಟದಲ್ಲಿ ಯಾವುದೇ ಸಿನಿಮಾ ಗೆಲ್ಲಲಿಲ್ಲ. ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದರು. ಇದ್ದಿದ್ದರಲ್ಲಿ 'OG' ಸಿನಿಮಾ ಸಖತ್ ಸದ್ದು ಮಾಡಿತ್ತು. ಓಜಸ್ ಗಂಭೀರ ಆಗಿ ಪವನ್ ಸ್ಟೈಲ್, ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

Pawan Kalyan Confirms OG 2 Official Update Ends Sequel Uncertainty

'OG' ಸೀಕ್ವೆಲ್ ಬರುವುದಾಗಿ ಹೇಳಲಾಗಿತ್ತು. ಆದರೆ ಯಾವಾಗ ಎನ್ನುವುದು ಖಚಿತವಾಗಿರಲಿಲ್ಲ. ಡಿಸಿಎಂ ಆಗಿ ಬ್ಯುಸಿ ಇರುವ ಪವನ್ ಚಿತ್ರದಲ್ಲಿ ನಟಿಸೋಕೆ ಕಾಲ್‌ಶೀಟ್ ಕೊಡ್ತಾರಾ ಎನ್ನುವ ಅನುಮಾನ ಇತ್ತು. ಇದೀಗ ಸ್ವತಃ ಪವನ್ ಕಲ್ಯಾಣ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'OG'-2 ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ. Pawan Kalyan Creative Works ಅಧಿಕೃತ ಟ್ವಿಟರ್ ಖಾತೆಯಿಂದಲೇ ಅಪ್‌ಡೇಟ್ ಬಂದಿದೆ. "ಭರವಸೆ ನೀಡಿದಂತೆ, ಪವನ್ ಕಲ್ಯಾಣ್ ಸಿನಿಮಾ ಮಾಡ್ತಾರೆ. ಸಮಯ ಅವರು ನಮಗೆ ತಿಳಿಸುತ್ತಾರೆ. ನಿರ್ದೇಶಕ ಸುಜಿತ್ ವಿದೇಶದಿಂದ ಹಿಂದಿರುಗಿದ ನಂತರ, ನಾವು ಚರ್ಚಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ. #OG2 ಎನ್ನುವ ಹ್ಯಾಷ್‌ಟ್ಯಾಗ್ ಕೂಡ ಹಾಕಿದ್ದಾರೆ. ಅಲ್ಲಿಗೆ 'OG- 2' ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸುವುದು ಖಚಿತವಾಗಿದೆ.

ನೋಡನೋಡುತ್ತಲೇ ಟ್ವೀಟ್ ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 'OG' ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 25ರಂದು ಕ್ರೈಂ ಆಕ್ಷನ್ ಥ್ರಿಲ್ಲರ್ 'OG' ಸಿನಿಮಾ ಬಿಡುಗಡೆ ಆಗಿತ್ತು. ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಗನ್ ಹಿಡಿದು ಮಾತ್ರವಲ್ಲ ಕತ್ತಿ ಹಿಡಿದು ಪವನ್ ಅಬ್ಬರಿಸಿದ್ದರು. ಬಜೆಟ್ ಹೆಚ್ಚಾಗಿದ್ದರಿಂದ ಸಿನಿಮಾ ನಷ್ಟ ಅನುಭವಿಸಿತು ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಆಗಿತ್ತು.

ಬಹುಬೇಡಿಕೆಯ ನಟನಾಗಿದ್ದಾಗಲೇ ಪವನ್ ಕಲ್ಯಾಣ್ ರಾಜಕೀಯರಂಗ ಪ್ರವೇಶಿಸಿದ್ದರು. ಇವತ್ತಿಗೂ ಪವರ್ ಸ್ಟಾರ್ ಕ್ರೇಜ್ ಕಮ್ಮಿ ಆಗಿಲ್ಲ. ಚುಣಾವಣೆಗೂ ಮುನ್ನ 'ಬ್ರೋ' ಎಂಬ ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ನಟಿಸಿದ್ದರು. ದಿನಕ್ಕೆ 2 ಕೋಟಿ ರೂ. ಲೆಕ್ಕದಲ್ಲಿ 22 ದಿನಕ್ಕೆ 45 ಕೋಟಿ ರೂ. ಸಂಭಾವನೆ ಪಡೆದಿದ್ದರು. ಬಹಿರಂಗವಾಗಿ ಈ ವಿಚಾರವನ್ನು ಪವನ್ ಕಲ್ಯಾಣ್ ಘೋಷಿಸಿದ್ದರು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿನಿಮಾಗಳನ್ನು ಬಿಟ್ಟು ಪಕ್ಷ ಸಂಘಟನೆ ಕಡೆ ಮುಖ ಮಾಡಿದ್ದರು. ಹಾಗಾಗಿ 3 ಸಿನಿಮಾಗಳ ಬಿಡುಗಡೆ ತಡವಾಗಿತ್ತು.

ಹೊಸದಾಗಿ ಅಧಿಕಾರ ಸ್ವೀಕರಿಸಿದ್ದಾಗ ಕೊಂಚ ಬ್ಯುಸಿಯಾಗಿದ್ದರು. ಈಗ ನಿರಾಳರಾಗಿದ್ದಾರೆ. ಹಾಗಾಗಿ ಅಭಿಮಾನಿಗಳನ್ನು ರಂಜಿಸಲು ಮತ್ತೆ ಬಣ್ಣ ಹಚ್ಚಲು ಪವನ್ ಮುಂದಾಗಿದ್ದಾರೆ. ಒಜಸ್ ಗಂಭೀರ ಪಾತ್ರವನ್ನು ಬಹಳ ಇಷ್ಟಪಟ್ಟಿದ್ದ ಕಾರಣ ಸೀಕ್ವೆಲ್ ಮಾಡಲು ಒಪ್ಪಿದ್ದಾರೆ. ಅದೆಲ್ಲಾ ಏನೇ ಇದ್ದರೂ ಪವನ್ ಸ್ಟಾರ್ ಮತ್ತೆ ನಟಿಸುತ್ತಾರೆ ಎನ್ನುವುದೇ ಅಭಿಮಾನಿಗಳಿಗೆ ಭಾರೀ ಖುಷಿ ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X