ಇನ್ಸ್ಟಾಗ್ರಾಮ್ ಪ್ರವೇಶಿಸಿದ ಪವನ್ ಕಲ್ಯಾಣ್; ಪ್ರಭಾಸ್ ದಾಖಲೆ ಧೂಳೀಪಟ!
ತೆಲುಗು ಚಿತ್ರರಂಗದಲ್ಲಿ ಅತಿಹೆಚ್ಚು ಕ್ರೇಜ್ ಹೊಂದಿರುವ ಹಾಗೂ ಅಭಿಮಾನಿ ಬಳಗವನ್ನು ಹೊಂದಿರುವ ನಟನೆಂದರೆ ಅದು ಪವರ್ ಸ್ಟಾರ್ ಪವನ್ ಕಲ್ಯಾಣ್. ಬಾಕ್ಸ್ ಆಫೀಸ್‌ನಲ್ಲಿ ಸತತವಾಗಿ ಅಬ್ಬರಿಸುತ್ತಾ ಬಂದಿರುವ ಪವನ್ ಕಲ್ಯಾಣ್ ಹಲವಾರು ದಾಖಲೆಗಳನ್ನು ಹೊಂದಿದ್ದು, ತೆಲುಗಿನ ಆಲ್‌ಟೈಮ್ ಲೆಜೆಂಡರಿ ನಟ ಎನಿಸಿಕೊಂಡಿದ್ದಾರೆ.
ಇನ್ನು ಪವನ್ ಕಲ್ಯಾಣ್ ಸಾಮಾಜಿಕ ಜಾಲತಾಣಕ್ಕೆ ತಡವಾಗಿ ಎಂಟ್ರಿ ಕೊಟ್ಟಿದ್ದರು. ಕೇವಲ ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಮಾತ್ರ ಖಾತೆಗಳನ್ನು ಹೊಂದಿದ್ದ ಪವನ್ ಕಲ್ಯಾಣ್ ಇದೀಗ ಇನ್ಸ್ಟಾಗ್ರಾಮ್‌ಗೂ ಸಹ ಲಗ್ಗೆ ಇಟ್ಟಿದ್ದಾರೆ. ಹೌದು, ಇಂದು ( ಜುಲೈ 4 ) ಪವನ್ ಕಲ್ಯಾಣ್ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಅಧಿಕೃತ ಖಾತೆಯನ್ನು ತೆರೆದಿದ್ದಾರೆ.

ಪವನ್ ಕಲ್ಯಾಣ್ ಇನ್ಸ್ಟಾಗ್ರಾಮ್‌ಗೆ ಕಾಲಿಡುತ್ತಿದ್ದಂತೆಯೇ ಪವನ್ ಕಲ್ಯಾಣ್ ಫ್ಯಾನ್ಸ್ ಹಾಗೂ ಟಾಲಿವುಡ್ ಸೆಲೆಬ್ರಿಟಿಗಳು ಪವನ್ ಕಲ್ಯಾಣ್ ಇನ್ಸ್ಟಾಗ್ರಾಮ್ ಖಾತೆಯನ್ನು ಅನುಸರಿಸಲು ಆರಂಭಿಸಿದ್ದಾರೆ. ಇಂದು ಮಧ್ಯಾಹ್ನ ಇನ್ಸ್ಟಾಗ್ರಾಮ್ ಖಾತೆ ತೆರೆದ ಪವನ್ ಕಲ್ಯಾಣ್ ಸಂಜೆ 4.30ರ ಸಮಯಕ್ಕೆ ಒಂದು ಮಿಲಿಯನ್ ಫಾಲೋವರ್ಸ್ ಅನ್ನು ಪೂರೈಸಿದ್ದಾರೆ.
ಹೌದು, ಪವನ್ ಕಲ್ಯಾಣ್ ಹತ್ತು ಲಕ್ಷ ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಕೇವಲ ಆರು ಗಂಟೆಯಲ್ಲಿ ಪೂರೈಸಿದ್ದು, ಅತಿ ವೇಗವಾಗಿ ಒಂದು ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ ತೆಲುಗು ನಟ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದೆ ತೆಲುಗು ನಟ ಪ್ರಭಾಸ್ 23 ದಿನಗಳಲ್ಲಿ ಒಂದು ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದರು. ಇದು ತೆಲುಗು ಚಿತ್ರರಂಗದ ಪಾಲಿಗೆ ದಾಖಲೆಯಾಗಿತ್ತು.
ಈ ದಾಖಲೆಯನ್ನು ಈಗ ಪವನ್ ಕಲ್ಯಾಣ್ ಮುರಿದು ಹಾಕಿದ್ದು, ನೂತನ ದಾಖಲೆ ನಿರ್ಮಿಸಿದ್ದಾರೆ. ಆದರೆ ಪವನ್ ಕಲ್ಯಾಣ್ ತಮಿಳು ನಟ ವಿಜಯ್ ನಿರ್ಮಿಸಿದ್ದ ದಾಖಲೆಯನ್ನು ಮುರಿಯುವಲ್ಲಿ ವಿಫಲರಾಗಿದ್ದಾರೆ. ಹೌದು, ದಳಪತಿ ವಿಜಯ್ 99 ನಿಮಿಷಗಳಲ್ಲಿಯೇ ಒಂದು ಮಿಲಿಯನ್ ಫಾಲೋವರ್ಸ್ ಸಂಪಾದಿಸಿ ದಾಖಲೆ ನಿರ್ಮಿಸಿದ್ದರು. ಇದು ಭಾರತದ ಸೆಲೆಬ್ರಿಟಿ ಅತಿ ವೇಗವಾಗಿ ಒಂದು ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಪಡೆದ ದಾಖಲೆಯಾಗಿದೆ. ಅಲ್ಲದೇ ವಿಶ್ವದಲ್ಲಿ ಮೂರನೇ ವೇಗದ ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಗಳಿಕೆಯೂ ಸಹ ಆಗಿದೆ.


Click it and Unblock the Notifications











