ಪವನ್ ಕಲ್ಯಾಣ್ 2ನೇ ಪತ್ನಿ 2ನೇ ಮದುವೆ? ವೈರಲ್ ಆಯ್ತು ಪೋಸ್ಟ್!
ತೆಲುಗು ನಟ ಪವನ್ ಕಲ್ಯಾಣ್ ಹಾಗೂ ನಟಿ ರೇಣು ದೇಸಾಯಿ ಪ್ರೀತಿಸಿ ಮದುವೆ ಆಗಿದ್ದು, ನಂತರ ಡೈವೋರ್ಸ್ ತೆಗೆದುಕೊಂಡಿದ್ದು ಎಲ್ಲಾ ಹಳೇ ಸುದ್ದಿ. 2012ರಲ್ಲಿ ಡೈವೋರ್ಸ್ ತೆಗೆದುಕೊಂಡ ರೇಣು ಸದ್ಯ ಸಿಂಗಲ್ ಆಗಿಯೇ ಇದ್ದಾರೆ. ಸದ್ಯ ಪುಣೆಯಲ್ಲಿ ಮಕ್ಕಳ ಜೊತೆ ಸೆಟ್ಲ್ ಆಗಿರುವ ನಟಿ ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ತಿದ್ದಾರೆ. ಇದೀದ ರೇಣು ಮಾಡಿರುವ ಪೋಸ್ಟ್ ಮತ್ತೆ ಆಕೆಯ 2ನೇ ಮದುವೆ ಬಗ್ಗೆ ಚರ್ಚೆ ಹುಟ್ಟಾಕ್ಕಿದೆ.
'ಬದ್ರಿ' ಸಿನಿಮಾದಲ್ಲಿ ನಟಿಸುವ ಮೂಲಕ ರೇಣು ದೇಸಾಯಿ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದರು. ಸಿನಿಮಾ ಶೂಟಿಂಗ್ ವೇಳೆಯಲ್ಲಿ ಪವನ್ ಕಲ್ಯಾಣ್ ಪ್ರೀತಿಲಿ ಬಿದ್ದಿದ್ದ ಚೆಲುವೆ ಒಂದಷ್ಟು ದಿನ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು. ಮಗ ಅಕಿರಾಗೆ ಜನ್ಮ ನೀಡಿದ ನಂತರ ಪವನ್ ಕೈ ಹಿಡಿದಿದ್ದರು. ಅದಾಗಲೇ ಒಂದು ಮದುವೆಯಾಗಿ ಡೈವೋರ್ಸ್ ತೆಗೆದುಕೊಂಡಿದ್ದ ಪವನ್‌ಗೆ ಅದು 2ನೇ ಮದುವೆ. ಮಗಳು ಆದ್ಯಾ ಹುಟ್ಟಿದ ಮೇಲೆ ಕೆಲ ಭಿನ್ನಾಭಿಪ್ರಾಯಗಳಿಂದ ಪರಸ್ಪರ ಒಪ್ಪಿಗೆ ಮೇರೆಗೆ ಪವನ್- ರೇಣು ದೂರಾಗಿದ್ದರು. ಡೈವೋರ್ಸ್ ನಂತರ ಪವನ್ ಕಲ್ಯಾಣ್ 3ನೇ ಮದುವೆ ಕೂಡ ಆಗಿದ್ದಾರೆ. ರೇಣು ದೇಸಾಯಿ ಕೂಡ 2ನೇ ಮದುವೆ ಆಗಿದ್ದಾರೆ ಅನ್ನುವ ಗುಸುಗುಸು ಕೇಳಿಬಂದಿತ್ತು. ಎಂಗೇಜ್‌ಮೆಂಟ್ ರಿಂಗ್ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ರೇಣು ದೇಸಾಯಿ 2ನೇ ಮದುವೆ ಆಗುತ್ತಿದ್ದಾರೆ ಅನ್ನುವ ವಿಚಾರ ತಿಳಿದಾಗ ಪವನ್ ಕಲ್ಯಾಣ್ ಅಭಿಮಾನಿಗಳು ಸಾಕಷ್ಟು ಟ್ರೋಲ್ ಮಾಡಿದ್ದರು. ಇದೇ ಕಾರಣಕ್ಕೆ ಆಕೆ ಮದುವೆಯನ್ನು ಮುಂದೂಡಿದ್ದಾರೆ ಎನ್ನಲಾಗಿತ್ತು. ಮತ್ತೆ ಕೆಲವರ ಪ್ರಕಾರ ಈಗಾಗಲೇ ಆಕೆ 2ನೇ ಮದುವೆ ಆಗಿದ್ದಾರೆ ಅನ್ನುವ ಚರ್ಚೆ ಕೂಡ ನಡೀತಿದೆ.

2ನೇ ಮದುವೆ ಚರ್ಚೆ ಹುಟ್ಟಾಕಿದ ಪೋಸ್ಟ್
ಸದ್ಯ ನಟಿ ರೇಣು ದೇಸಾಯಿ ಫಾರಿನ್‌ನಲ್ಲಿ ಮಕ್ಕಳ ಜೊತೆ ವಕೇಷನ್ ಎಂಜಾಯ್ ಮಾಡ್ತಿದ್ದಾರೆ. ಸ್ಕಾಟ್ಲೆಂಡ್‌ನಿಂದ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ. "ಜೀವನದಲ್ಲಿ ಅಗತ್ಯವಿದ್ದಾಗ ನಮ್ಮ ಕೈ ಹಿಡಿದು ನಡೆಸುವವಂತಹ ಸಂಗಾತಿ ಬೇಕು" ಎನ್ನುವ ಅರ್ಥದಲ್ಲಿ ರೇಣು ಬರೆದುಕೊಂಡಿದ್ದಾರೆ. "ನಿಮ್ಮ ಸೋಲ್‌ಮೇಟ್‌ನ ಹುಡುಕುವುದಕ್ಕಿಂತ ಮುನ್ನ ನಿಮ್ಮನ್ನು ನೀವು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು" ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಪವನ್ 2ನೇ ಪತ್ನಿ 2ನೇ ಮದುವೆ ನಿಜಾನಾ?
ರೇಣು ದೇಸಾಯಿ ಮಾಡಿರುವ ಪೋಸ್ಟ್ ಆಕೆಯ 2ನೇ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಹುಟ್ಟಾಕ್ಕಿದೆ. "ರೇಣು 2ನೇ ಮದುವೆ ಮಾಡಿಕೊಂಡಿಲ್ವಾ? ಅವರಿಬ್ಬರು ಮಾತನಾಡಿಕೊಳ್ಳುತ್ತಿಲ್ಲವಾ?" ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ. ಇನ್ನು ಕೆಲವರು "ನೀವು ಹೇಳುತ್ತಿರುವುದು ನಿಜ, ಪ್ರತಿಯೊಬ್ಬರಿಗೂ ಒಬ್ಬ ಸಂಗಾತಿ ಬೇಕು" ಎಂದರೆ ಸಾಕಷ್ಟು ಜನ "ಅಂತೂ ಇಂತೂ ರೇಣು 2ನೇ ಮದುವೆ ಬಗ್ಗೆ ಆಲೋಚಿಸುತ್ತಿದ್ದಾರೆ" ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಬರೀತಿದ್ದಾರೆ.

ಬಹುಮುಖ ಪ್ರತಿಭೆ ರೇಣು ದೇಸಾಯಿ
ಮಾಡೆಲಿಂಗ್‌ನಿಂದ ಚಿತ್ರರಂಗಕ್ಕೆ ಬಂದ ರೇಣು ದೇಸಾಯಿ 3 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. 'ಬದ್ರಿ', 'ಜೇಮ್ಸ್ ಪಂಡು' ಹಾಗೂ 'ಜಾನಿ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಚೆಲುವೆ ನಾಲ್ಕೈದು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ. 'ಖುಷಿ' ಹಾಗೂ 'ಬಾಲು' ಚಿತ್ರದ ಹಾಡುಗಳ ಎಡಿಟಿಂಗ್‌ನಲ್ಲಿ ಕೈ ಆಡಿಸಿದ್ದರು. ಮರಾಠಿಯ 'ಇಷ್ಕ್‌ವಾಲಾ ಲವ್' ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು.
Recommended Video

ಮರಾಠಿ ಚಿತ್ರರಂಗದಲ್ಲಿ ರೇಣು ಬ್ಯುಸಿ
ಸದ್ಯ ಪುಣೆಯಲ್ಲಿ ನೆಲೆಸಿರುವ ರೇಣು ದೇಸಾಯಿ ಹೆಚ್ಚು ಮರಾಠಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್‌ಗೆ ಡೈವೋರ್ಸ್ ಕೊಟ್ಟಿದ್ದರೂ ಮಕ್ಕಳಿಗಾಗಿ ತಂದೆ-ತಾಯಿಯಾಗಿ ಮುಂದುವರೆದಿದ್ದಾರೆ. ಕೆಲ ಸಂದರ್ಶನಗಳಲ್ಲಿ ಜೀವನದಲ್ಲಿ ಒಬ್ಬ ಸಂಗಾತಿ ಅವಶ್ಯಕ ಎಂದು ಹೇಳುತ್ತಾ ಬರ್ತಿದ್ದಾರೆ. ಇದೆಲ್ಲದರ ನಡುವೆಯ ಆಕೆಯ ಹೊಸ ಪೋಸ್ಟ್ ಸಖತ್ ವೈರಲ್ ಆಗ್ತಿದೆ.


Click it and Unblock the Notifications











