ವಾಟ್ಸಪ್ ಸ್ಟೇಟಸ್ ವಿಚಾರಕ್ಕೆ ಕಿರಿಕ್: ಪವನ್ ಅಭಿಮಾನಿಯನ್ನು ಹತ್ಯೆಗೈದ ಪ್ರಭಾಸ್ ಫ್ಯಾನ್

ಸ್ಟಾರ್ ನಟರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮ ಇದು ಫ್ಯಾನ್ಸ್‌ ವಾರ್‌ಗೂ ಕಾರಣವಾಗುತ್ತದೆ. ತೆಲುಗು, ತಮಿಳು ಚಿತ್ರರಂಗದಲ್ಲಿರುವ ಈ ಕೆಟ್ಟ ಸಂಸ್ಕೃತಿ ನಿಧಾನಕ್ಕೆ ಕನ್ನಡಕ್ಕೂ ಬಂದಿದೆ. ಆದರೆ ಅಭಿಮಾನಿಗಳ ನಡುವಿನ ಈ ಕಚ್ಚಾಟ ಕೆಲವೊಮ್ಮೆ ವಿಕೋಪಕ್ಕೆ ತಿರುಗಿಬಿಡುತ್ತದೆ. ಆಂಧ್ರಪ್ರದೇಶದಲ್ಲಿ ಇಂತದ್ದೇ ಘಟನೆ ನಡೆದಿದ್ದು ಯಡವಟ್ಟಾಗಿ ಒಂದು ಜೀವವೇ ಹೋಗಿದೆ.

ಟಾಲಿವುಡ್‌ನಲ್ಲಿ ಮಹೇಶ್, ಬನ್ನಿ ಫ್ಯಾನ್ಸ್ ಮಧ್ಯೆ ಹಾಗೂ ಅಲ್ಲು, ಮೆಗಾ ಫ್ಯಾನ್ಸ್ ಮಧ್ಯೆ, ಮೆಗಾ, ನಂದಮೂರಿ ಫ್ಯಾನ್ಸ್ ಮಧ್ಯೆ ವಾರ್ ನಡೆಯುತ್ತದೆ. ಕೆಲವೊಮ್ಮೆ ಪ್ರಭಾಸ್ ಫ್ಯಾನ್ಸ್ ಕೂಡ ಈ ಇದರಲ್ಲಿ ಇನ್ವಾಲ್ವ್ ಆಗುತ್ತಿರುತ್ತಾರೆ. ಈ ವೇಳೆ ಪವನ್ ಕಲ್ಯಾಣ್ ಫ್ಯಾನ್ಸ್ ಗಲಾಟೆ ಗದ್ದಲ ಅಷ್ಟಿಷ್ಟಲ್ಲ. ಒಟ್ಟಾರೆ ಇಂತಹ ಫ್ಯಾನ್ಸ್‌ ವಾರ್‌ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗುತ್ತಿರುತ್ತದೆ. ಕುತೂಹಲ ಹೆಚ್ಚಿಸುತ್ತದೆ. ಆನ್‌ಲೈನ್‌ನಲ್ಲಿ ಕೆಲವೊಮ್ಮೆ ವಿನೋದಕ್ಕೋ, ಟೈಂಪಾಸ್‌ಗೋ ಇದು ನಡೆಯುತ್ತಿರುತ್ತದೆ. ಹಾಗಾಗಿ ಯಾರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈಗ ಹಾಫ್‌ಲೈನ್‌ನಲ್ಲಿ ನಡೆದ ಘಟನೆಯಿಂದ ಯುವಕ ಹತ್ಯೆಯಾಗಿರೋದು ವಿಪರ್ಯಾಸ.

Pawan Kalyan fan Beaten to Death by a Prabhas fan in Andra Pradesh West Godavari Attil

ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ಅತ್ತಿಲಿಯಲ್ಲಿ ಫ್ಯಾನ್ ವಾರ್ ಕಾರಣಕ್ಕೆ ದುರಂತ ಸಂಭವಿಸಿದೆ. ತಮ್ಮ ನೆಚ್ಚಿನ ನಟರ ಬಗ್ಗೆ ಇಬ್ಬರು ಪೇಂಟರ್‌ಗಳ ನಡುವೆ ಘರ್ಷಣೆ ಉಂಟಾಗಿದೆ. ಅದು ಕೊನೆಗೆ ಒಬ್ಬನ ಹತ್ಯೆಗೆ ಕಾರಣವಾಗಿದೆ. ಏಲೂರು ಮೂಲದ ಪೇಂಟರ್‌ಗಳು ಅತ್ತಿಲಿಯ ಮಸೀದಿ ಬೀದಿಯಲ್ಲಿ ನಜೀರ್ ಎಂಬ ವ್ಯಕ್ತಿ ಮನೆಗೆ ಬಣ್ಣ ಬಳಿಯುತ್ತಿದ್ದರು. ಇದೇ ವೇಳೆ ಇಬ್ಬರು ನುಡವೆ ಸಂಘರ್ಷ ಏರ್ಪಟ್ಟಿದೆ. ಇದರಲ್ಲಿ ಒಬ್ಬರು ಸತ್ತು ಹೋಗಿದ್ದಾರೆ. 4 ದಿನಗಳ ಹಿಂದೆ ಹರಿಕುಮಾರ್, ಕಿಶೋರ್ ಅತ್ತಿಗೆ ಹೋಗಿದ್ದರು. ಹರಿಕುಮಾರ್ ಪ್ರಭಾಸ್ ಅಭಿಮಾನಿ. ಹಾಗಾಗಿ ಆತ ಪ್ರಭಾಸ್ ವಿಡಿಯೋ ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದ್ದ.

ಮತ್ತೊಬ್ಬ ಪೇಂಟರ್ ಕಿಶೋರ್, ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿ. ನಾನು ಪವನ್ ಅಭಿಮಾನಿ, ನೀನು ಕೂಡ ಪ್ರಭಾಸ್ ವಿಡಿಯೋ ತೆಗೆದು ಪವನ್ ವೀಡಿಯೋ ಸ್ಟೇಟಸ್‌ನಲ್ಲಿ ಹಾಕು ಎಂದು ಹರಿಕುಮಾರ್‌ಗೆ ಕಿಶೋರ್ ಹೇಳಿದ್ದಾನೆ. ಇದಕ್ಕೆ ಹರಿಕುಮಾರ್ ಒಪ್ಪದಿದ್ದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದಿದೆ. ಈ ಸಂಬಂಧ ಮಧ್ಯರಾತ್ರಿ ಇಬ್ಬರು ನಡುವೆ ಜಗಳವಾಗಿದೆ. ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಕೋಪದಲ್ಲಿ ಹರಿಕುಮಾರ್ ಸೆಂಟ್ರಿಂಗ್‌ ದೊಣ್ಣೆಯಿಂದ ಕಿಶೋರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅಷ್ಟೇ ಅಲ್ಲ ಸಿಮೆಂಟ್ ಇಟ್ಟಿಗೆಯಿಂದ ಮುಖಕ್ಕೆ ಹೊಡೆದಿದ್ದಾನೆ. ಗಂಭೀರ ಗಾಯಗಳಿಂದ ಕಿಶೋರ್ ಅಲ್ಲೇ ಸಾವನ್ನಪ್ಪಿದ್ಧಾನೆ.

ಈ ಘಟನೆ ನಂತರ ಹರಿಕುಮಾರ್ ಸ್ಥಳದಿಂದ ಪರಾರಿ ಆಗಿದ್ದಾನೆ. ಕೂಡಲೇ ತಣುಕು ಗ್ರಾಮೀಣ ಪೊಲೀಸರು ಕಾರ್ಯ ಪ್ರವೃತ್ತರಾಗಿ ಕೇಸ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಪರಾರಿಯಾಗಿದ್ದ ಹರಿಕುಮಾರ್ ಬಂಧನಕ್ಕೆ ಬಲೆ ಬೀಸಿದ್ದರು. ನಂತರ ಆತನನ್ನು ಬಂಧಿಸಿರುವುದಾಗಿ ವರದಿ ಆಗಿದೆ. ಯಾವುದು ಕೂಡ ಅತಿಯಾಗಬಾರದು. ಅಭಿಮಾನ ಇರಬೇಕು. ಆದರೆ ಅಂಧಾಭಿಮಾನ ಸರಿಯಲ್ಲ.

Pawan Kalyan fan Beaten to Death by a Prabhas fan in Andra Pradesh West Godavari Attil

ಈ ಹಿಂದೆ ಕೂಡ ನೆಚ್ಚಿನ ನಟನ ಸಿನಿಮಾ ರಿಲೀಸ್ ವೇಳೆ ಸಂಭ್ರಮಾಚರಣೆಯಲ್ಲಿ ಅಭಿಮಾನಿಗಳು ಜೀವಬಿಟ್ಟಿರುವ ಘಟನೆಗಳು ನಡೆದಿವೆ. ಬ್ಯಾನರ್ ಕಟ್ಟಲು ಹೋಗಿ ಬಿದ್ದು ಸತ್ತವರು, ಥಿಯೇಟರ್ ಮುಂದೆ ಚಲಿಸುತ್ತಿದ್ದ ವಾಹನದ ಮೇಲೆ ಡ್ಯಾನ್ಸ್ ಮಾಡಲು ಹೋಗಿ ಆಯತಪ್ಪಿ ಬಿದ್ದು ಅಭಿಮಾನಿಗಳು ಜೀವ ಚೆಲ್ಲಿರುವ ಘಟನೆಗಳು ವರದಿ ಆಗಿತ್ತು. ಇನ್ನು ಕೋಲಾರದಲ್ಲಿ ಇದೇ ರೀತಿ ಜ್ಯೂ. ಎನ್‌ಟಿಆರ್ ಅಭಿಮಾನಿ ಪವನ್ ಕಲ್ಯಾಣ್ ಅಭಿಯಾನಿಯನ್ನು ಇಂಥದ್ದೇ ಸಣ್ಣ ಕಾರಣಕ್ಕೆ ಹತ್ಯೆ ಮಾಡಿದ್ದ ಘಟನೆ ಕೂಡ ನಡಿದಿತ್ತು. ಇನ್ನಾದರೂ ಅಭಿಮಾನಿಗಳು ಇಂಥದ್ದನೆಲ್ಲಾ ಬಿಟ್ಟುಬಿಡಬೇಕು.

More from Filmibeat

English summary
Pawan Kalyan fan Beaten to Death by a Prabhas fan in Andra Pradesh West Godavari Attil. People are shocked to know that the fight over trivial matter ended in death. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X