ಪವನ್ ಕಲ್ಯಾಣ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ನಟಿ ಅನುಪಮಾ ಪರಮೇಶ್ವರನ್

ನಟಿ ಅನುಪಮಾ ಪರಮೇಶ್ವರನ್ ತಾವಾಯಿತು ತಮ್ಮ ಕೆಲಸವಾಯಿತು ಎಂದು ಇರುವ ನಟಿ. ಆದರೆ ಆಕೆಯ ಮೇಲೆ ಪವನ್ ಕಲ್ಯಾಣ್ ಅಭಿಮಾನಿಗಳು ಸುಖಾ-ಸುಮ್ಮನೆ ಸಿಟ್ಟಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆಗಳ ಸುರಿಮಳೆ ಸುರಿಸಿದ್ದಾರೆ.

ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ 'ನಟಸಾರ್ವಭೌಮ' ಸಿನಿಮಾದಲ್ಲಿ ನಟಿಸಿರುವ ಅನುಪಮಾ ಪರಮೇಶ್ವರನ್, ತೆಲುಗಿನಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿಗಳಿಸಿದ್ದಾರೆ. ಆದರೆ ಈಗ ಆಕೆ ಮಾಡಿದ ಸಾಮಾನ್ಯ ಟ್ವೀಟ್‌ ಒಂದರಿಂದ ಪವನ್ ಕಲ್ಯಾಣ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ಅನುಪಮಾ ಪರಮೇಶ್ವರನ್ ಅವರು ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ನೋಡಿದ್ದಾರೆ. ಒಳ್ಳೆಯ ಸಿನಿಮಾ ಎನಿಸಿ ಆ ಸಿನಿಮಾ ಬಗ್ಗೆ ಒಳ್ಳೆಯದಾಗಿಯೇ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್‌ನಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯ ಮಾಡಿದ್ದಾರೆ ಪವನ್ ಅಭಿಮಾನಿಗಳು.

ವಕೀಲ್ ಸಾಬ್ ಬಗ್ಗೆ ಹೊಗಳಿ ಟ್ವೀಟ್ ಮಾಡಿದ ನಟಿ

ವಕೀಲ್ ಸಾಬ್ ಬಗ್ಗೆ ಹೊಗಳಿ ಟ್ವೀಟ್ ಮಾಡಿದ ನಟಿ

'ಪ್ರೈಂನಲ್ಲಿ 'ವಕೀಲ್ ಸಾಬ್' ನೋಡಿದೆ. ಅದ್ಭುತವಾದ ನಟನೆಯ ಮೂಲಕ ಗಟ್ಟಿಯಾದ ಸಂದೇಶ ಸಾರುವ ಸಿನಿಮಾ. ಪವನ್ ಕಲ್ಯಾಣ್ ಗಡಿಗಳನ್ನು ಒಡೆದು ಮೂರು ಮುಖ್ಯ ಮಹಿಳಾ ಪಾತ್ರಗಳೊಂದಿಗೆ ಅದ್ಭುತವಾಗಿ ಕತೆಯನ್ನು ಹೊತ್ತೊಯ್ದಿದ್ದಾರೆ. ಪ್ರಕಾಶ್ ರಾಜ್ ಸರ್ ನೀವಿಲ್ಲದೆ ಈ ಸಿನಿಮಾ ಅಪೂರ್ಣ' ಎಂದು ಟ್ವೀಟ್ ಮಾಡಿದ್ದಾರೆ ಅನುಪಮಾ ಪರಮೇಶ್ವರನ್.

'ಪ್ರಕಾಶ್‌ಗೆ 'ಸರ್' ಎಂದಿದ್ದೀರಾ, ಪವನ್‌ಗೆ ಯಾಕಿಲ್ಲ?'

'ಪ್ರಕಾಶ್‌ಗೆ 'ಸರ್' ಎಂದಿದ್ದೀರಾ, ಪವನ್‌ಗೆ ಯಾಕಿಲ್ಲ?'

ಈ ಟ್ವೀಟ್‌ನಲ್ಲಿ ಹುಳುಕು ಹುಡುಕಿರುವ ಪವನ್ ಕಲ್ಯಾಣ್ ಅಭಿಮಾನಿಗಳು, 'ಪ್ರಕಾಶ್ ರಾಜ್‌ಗೆ 'ಸರ್' ಎಂದು ಸಂಭೋಧಿಸಿದ್ದೀರಾ ಪವನ್ ಕಲ್ಯಾಣ್‌ಗೆ ಸರ್ ಎಂದು ಏಕೆ ಕರದಿಲ್ಲ ಎಂದು ತಕರಾರು ತೆಗೆದಿದ್ದಾರೆ. ಅಷ್ಟೇ ಅಲ್ಲದೆ, ಪವನ್ ಕಲ್ಯಾಣ್‌ಗಿಂತಲೂ ಪ್ರಕಾಶ್ ರೈ ಶ್ರೇಷ್ಠ ಎಂದು ಹೇಳುತ್ತಿದ್ದೀರಾ? ಎಂದು ಸಹ ಪ್ರಶ್ನೆ ಮಾಡಿದ್ದಾರೆ.

ಕ್ಷಮಿಸಿ, 'ಪವನ್ ಕಲ್ಯಾಣ್ ಅವರೇ': ಅನುಪಮಾ ಟ್ವೀಟ್

ಕ್ಷಮಿಸಿ, 'ಪವನ್ ಕಲ್ಯಾಣ್ ಅವರೇ': ಅನುಪಮಾ ಟ್ವೀಟ್

ಪ್ರತಿಕ್ರಿಯೆಗಳನ್ನು ಗಮನಿಸಿ ಮತ್ತೊಂದು ಟ್ವೀಟ್‌ ಮಾಡಿದ ಅನುಪಮಾ ಪರಮೇಶ್ವರನ್, 'ಕ್ಷಮಿಸಿ, ಈಗ ಗೊತ್ತಾಯಿತು, 'ಪವನ್ ಕಲ್ಯಾಣ್ ರವರೇ' ಪ್ರೀತಿ ಮತ್ತು ಗೌರವದಿಂದ'' ಎಂದಿದ್ದಾರೆ. ಬಲವಂತದ ಗೌರವ ಕೊಟ್ಟು ಪವನ್ ಕಲ್ಯಾಣ್ ಅಭಿಮಾನಿಗಳ ಸಾಮಾಜಿಕ ಜಾಲತಾಣ ನಿಂದನೆಯಿಂದ ಬಚಾವಾಗಿದ್ದಾರೆ ನಟಿ ಅನುಪಮಾ ಪರಮೇಶ್ವರನ್.

Recommended Video

ನಟನೆ ಮಾತ್ರವಲ್ಲ ಕೃಷಿ ಮಾಡಿ ಇತರರಿಗೆ ಮಾದರಿಯಾದ ನಟಿ ಜೂಹಿ ಚಾವ್ಲಾ | Filmibeat Kannada
'ಪ್ರೇಮಂ'ನಿಂದ ನಟನೆ ಆರಂಭಿಸಿದ ಅನುಪಮಾ ಪರಮೇಶ್ವರನ್

'ಪ್ರೇಮಂ'ನಿಂದ ನಟನೆ ಆರಂಭಿಸಿದ ಅನುಪಮಾ ಪರಮೇಶ್ವರನ್

ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ ನಟನೆ ಆರಂಭಿಸಿದ ಅನುಪಮಾ ಪರಮೇಶ್ವರನ್, ಕಡಿಮೆ ಅವಧಿಯಲ್ಲಿಯೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಯವುಡೋ ಒಕ್ಕಡು', '18 ಪೇಜಸ್', 'ತಲ್ಲಿ ಪೋಗತ್ತೇಯ್' ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Pawan Kalyan fans angry on actress Anupama Parameshswaran for silly reason. Anupama said sorry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X