For Quick Alerts
  ALLOW NOTIFICATIONS  
  For Daily Alerts

  4 ಚಿತ್ರಗಳಲ್ಲಿ ಅಭಿನಯಿಸಿದ್ದ ಯುವ ನಟನಿಗೆ 'ಪವರ್ ಸ್ಟಾರ್' ಬಿರುದು, ಫ್ಯಾನ್ಸ್ ಗರಂ; ಸತ್ಯಾಂಶ ಬಹಿರಂಗ!

  |

  ನಟನೋರ್ವನಿಗೆ ನೀಡುವ ಬಿರುದನ್ನು ಉಳಿದ ನಟರಿಗೆ ನೀಡುವ ಹಾಗಿಲ್ಲ ಎಂಬ ರೂಢಿಯಿದೆ. ಅಪ್ಪತಪ್ಪಿ ಒಬ್ಬ ಹಿರೋನ ಬಿರುದನ್ನು ಇನ್ನೊಬ್ಬ ಹೀರೊಗೆ ಬಳಸಿದರೆ ಆ ನಟನ ಅಭಿಮಾನಿಗಳು ಸುಮ್ಮನೇ ಕೂರುತ್ತಾರೆಯೇ? ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ನಟನ ಸ್ಟಾರ್ ಟ್ಯಾಗ್ ಕದ್ದವರ ವಿರುದ್ಧ ಕಿಡಿಕಾರಿ ಬಿಡುತ್ತಾರೆ, ಸಾಲು ಸಾಲು ಟ್ರೋಲ್ ಮಾಡಿ ಆ ಚಿತ್ರವನ್ನು ಸೋಲಿಸುವುದಕ್ಕೂ ಕೂಡ ಹಿಂದೆ ಮುಂದೆ ನೋಡುವುದಿಲ್ಲ.

  ಹೀಗಾಗಿಯೇ, ಈ ಭಯದಿಂದಲೇ ಫ್ಯಾನ್ ಫಾಲೋಯಿಂಗ್ ಇರುವ ನಟನ ಬಿರುದಿಗೆ ಕೈಹಾಕುವ ದುಸ್ಸಾಹಸಕ್ಕೆ ಯಾರೂ ಸಹ ಕೈಹಾಕುವುದಿಲ್ಲ. ಕೋಟಿ ಕೋಟಿ ದುಡ್ಡು ಹೂಡಿ ಒಂದು ಸ್ಟಾರ್ ಟ್ಯಾಗ್‌ನಿಂದ ನಷ್ಟಕ್ಕೆ ಒಳಗಾಗುವ ದಡ್ಡ ಕೆಲ ಯಾರೂ ಸಹ ಮಾಡುವುದಿಲ್ಲ. ಇನ್ನು ಸ್ಟಾರ್ ನಟನೋರ್ವನ ಮಗ ಅಥವಾ ಕುಟುಂಬದ ಸದಸ್ಯ ನಟನಾದರೆ ಆ ನಟನಿಗೆ ತನ್ನ ತಂದೆಗೆ ಇದ್ದ ಸ್ಟಾರ್ ಟ್ಯಾಗ್ ಸುಲಭವಾಗಿ ಸಿಗಲಿದೆ ಅಥವಾ ಅದೇ ಸ್ಟಾರ್ ಟ್ಯಾಗ್ ಅನ್ನು ತುಸು ಬದಲಾವಣೆ ಮಾಡಿಕೊಂಡು ಬಳಸಲಾಗುತ್ತದೆ.

  ಇದಕ್ಕೆ ತಾಜಾ ಉದಾಹರಣೆಯೆಂದರೆ ನಮ್ಮದ್ದೇ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್‌ಗೆ ಯಂಗ್ ರೆಬೆಲ್ ಸ್ಟಾರ್ ಬಿರುದು ಸಿಕ್ಕದ್ದು ಹಾಗೂ ತೆಲುಗಿನ ಮೆಗಾ ಸ್ಟಾರ್ ಮಗ ರಾಮ್ ಚರಣ್‌ಗೆ ತಮ್ಮ ತಂದೆ ಹಾಗೂ ತಮ್ಮ ಚಿಕ್ಕಪ್ಪ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಬಿರುದಿನ ಮಿಶ್ರಣದ ಬಿರುದು ( ಮೆಗಾ ಪವರ್ ಸ್ಟಾರ್ ) ಬಿರುದು ಸಿಕ್ಕದ್ದು. ಹೀಗೆ ಸ್ಟಾರ್ ಟ್ಯಾಗ್ ಒಂದು ಗಂಭೀರ ವಿಷಯವಾಗಿದ್ದರೂ ಸಹ ಇಂದು ( ಸೆಪ್ಟೆಂಬರ್ 16 ) ಬಿಡುಗಡೆಯಾದ ತೆಲುಗು ಚಿತ್ರವೊಂದರಲ್ಲಿ ಯುವ ನಟನಿಗೆ ಪವರ್ ಸ್ಟಾರ್ ಬಿರುದು ನೀಡಲಾಗಿದೆ ಎಂಬ ಚಿತ್ರವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೂ ಇದು ಪವನ್ ಕಲ್ಯಾಣ್ ಅಭಿಮಾನಿಗಳ ಅಸಮಾಧಾನ ಉಂಟುಮಾಡಿದೆ. ಆದರೆ ಇದರ ಹಿಂದಿನ ಅಸಲಿಯತ್ತೇ ಬೇರೆ.

  ಕಿರಣ್ ಅಬ್ಬಾವರಂಗೆ ಪವರ್ ಸ್ಟಾರ್ ಟ್ಯಾಗ್!

  ಕಿರಣ್ ಅಬ್ಬಾವರಂಗೆ ಪವರ್ ಸ್ಟಾರ್ ಟ್ಯಾಗ್!

  ತೆಲುಗಿನ ಯುವ ನಟ ಕಿರಣ್ ಅಬ್ಬಾವರಂ ಅಭಿನಯದ 'ನೇನು ಮೀಕು ಬಾಗಾ ಕಾವಾಲ್ಸಿನವಾಡಿನಿ' ಎಂಬ ಚಿತ್ರ ಇಂದು ( ಸೆಪ್ಟೆಂಬರ್ 16 ) ತೆರೆಕಂಡಿದೆ. ಈ ಚಿತ್ರದ ನಟನ ಇಂಟ್ರೊ ಸೀನ್‌ನಲ್ಲಿ 'ಪವರ್ ಸ್ಟಾರ್ ಅಬ್ಬಾವರಂ' ಎಂದು ಬಳಸಲಾಗಿದೆ ಎಂಬ ಚಿತ್ರಮಂದಿರದ ಫೋಟೊವೊಂದು ಹರಿದಾಡುತ್ತಿದೆ. ಇದು ಪವನ್ ಕಲ್ಯಾಣ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ, ಕೆಲ ಅಭಿಮಾನಿಗಳು ಚಿತ್ರತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ.

  ಸತ್ಯಾಂಶವೇನು?

  ಸತ್ಯಾಂಶವೇನು?

  ಇನ್ನು ಈ ಚಿತ್ರದಲ್ಲಿ ನಿಜವಾಗಿಯೂ ಪವರ್ ಸ್ಟಾರ್ ಟ್ಯಾಗ್ ಬಳಸಲಾಗಿದೆಯಾ ಎಂದು ಪರಿಶೀಲಿಸಿದಾಗ ನಮಗೆ ಸಿಕ್ಕ ಉತ್ತರ ಚಿತ್ರದಲ್ಲಿ ಕೇವಲ ನಾಯಕನ ಹೆಸರನ್ನು ಮಾತ್ರ ಬಳಸಲಾಗಿದೆ ಹೊರತು ಪವರ್ ಸ್ಟಾರ್ ಟ್ಯಾಗ್ ಬಳಸಿಲ್ಲ, ಬದಲಾಗಿ ಕಿಡಿಗೇಡಿಗಳು ಪವರ್ ಸ್ಟಾರ್ ಎಂದು ಎಡಿಟ್ ಮಾಡಿದ್ದಾರೆ ಎಂಬುದು. ಈ ಫೋಟೊವನ್ನು ಎಷ್ಟು ಸ್ಪಷ್ಟವಾಗಿ ಎಡಿಟ್ ಮಾಡಿದ್ದಾರೆಂದರೆ ಇದು ನಿಜವಾದ ಚಿತ್ರವೆಂದು ನಂಬುವ ಹಾಗಿದೆ.

  ಈ ವಿಷಯ ಸಿಲ್ಲಿಯಲ್ಲ

  ಈ ವಿಷಯ ಸಿಲ್ಲಿಯಲ್ಲ

  ಇನ್ನು ಈ ಸ್ಟಾರ್ ಟ್ಯಾಗ್ ಅನ್ನು ಎಡಿಟ್ ಮಾಡಿದ್ದು ದೊಡ್ಡ ವಿಷಯವೇನಲ್ಲ ಅದು ಸಿಲ್ಲಿ ಎಂದು ಕೆಲವರು ಭಾವಿಸಬಹುದು. ಆದರೆ ಈ ವಿಷಯ ನಿಜಕ್ಕೂ ಸಿಲ್ಲಿಯಲ್ಲ, ಏಕೆಂದರೆ ಈ ಒಂದು ಚಿಕ್ಕ ಹುಡುಗಾಟದ ಎಡಿಟ್ ಸಿನಿಮಾ ಮೇಲೆ ಪರಿಣಾಮ ಬೀರಬಹುದು, ಸಿನಿಮಾ ಚೆನ್ನಾಗಿದ್ದರೂ ಸಹ ಚಿತ್ರದ ವಿರುದ್ಧ ವಿರೋಧಗಳು ಹುಟ್ಟಿಕೊಂಡುಬಿಡಬಹುದು. ಇಂದೂ ಸಹ ಆಗಿದ್ದು ಅದೇ ಕೆಲ ಪವನ್ ಕಲ್ಯಾಣ್ ಅಭಿಮಾನಿಗಳು ಈ ಎಡಿಟ್ ಅನ್ನು ನಿಜವೆಂದು ನಂಬಿ ಚಿತ್ರವನ್ನು ಯಾರೂ ನೋಡಬೇಡಿ ಎಂದು ಕಿಡಿಕಾರಿದ್ದರು.

  English summary
  Pawan Kalyan fans got angry as Kiran abbavaram photo with powerstar text goes viral on internet. Read on.
  Friday, September 16, 2022, 17:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X