ಪವನ್ ಕಲ್ಯಾಣ್ ನೆನಪಿನ ಬುತ್ತಿಯಲ್ಲಿ ಕನ್ನಡಿಗರು: ಜನಸೇನಾನಿ ಮನದಲ್ಲಿ ದೊಡ್ಮನೆ ಯುವರಾಜ

ಟಾಲಿವುಡ್ ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಖಾತೆ ತೆರೆದಿದ್ದರು. ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ಜನ ಇನ್‌ಸ್ಟಾಗ್ರಾಮ್‌ನಲ್ಲಿ ಅವರನ್ನು ಹಿಂಬಾಲಿಸಲು ಆರಂಭಿಸಿದ್ದರು. ಇನ್ನು ಪವರ್ ಸ್ಟಾರ್ ಮೊದಲು ಯಾವ ರೀತಿಯ ಪೋಸ್ಟ್ ಮಾಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಮೊದಲಿಗೆ ಪವನ್ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.

ರಾಜಕೀಯ ವಿಚಾರಗಳಿಗೂ ದೂರವಾಗಿ ಎಲ್ಲರ ಊಹೆಗೂ ಮೀರಿದ ವಿಡಿಯೋ ಪೋಸ್ಟ್ ಮಾಡಿ ಚಿರು ಸಹೋದರ ಗಮನ ಸೆಳೆದಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಸಹ ನಟರೊಂದಿಗೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸುಶ್ರಾವ್ಯ ಸಂಗೀತ ಜೊತೆಗೆ ಪವನ್ ಸಿನಿಮಾ ಪಯಣಕ್ಕೆ ಸಂಬಂಧಿಸಿದ ಫೋಟೊಗಳ ಆಲ್ಬಮ್ ಪುಟಗಳು ಬದಲಾಗುತ್ತಾ ಹೋಗುತ್ತದೆ.

Pawan Kalyan First Instagram post, he also shares his memories with kannada actors

ಸಹೋದರ ಚಿರಂಜೀವಿ, ಪವನ್‌ಗೆ ಮುತ್ತು ಕೊಡುವ ಫೋಟೊದಿಂದ ಆರಂಭವಾಗುವ ಗ್ಯಾಲರಿ ಬಾಲಯ್ಯ, ವೆಂಕಟೇಶ್, ನಾಗಾರ್ಜುನ, ಪ್ರಭಾಸ್, ರಾಮ್‌ಚರಣ್, ಜ್ಯೂ. ಎನ್ಟಿಆರ್, ಅಲ್ಲು ಅರ್ಜುನ್, ಮಹೇಶ್ ಬಾಬು ಜೊತೆಗಿನ ಫೋಟೋಗಳ ಮೂಲಕ ಮುಂದುವರೆಯುತ್ತದೆ.

ಪವನ್ ಕಲ್ಯಾಣ್ ಶೂಟಿಂಗ್ ವೇಳೆ ಅಥವಾ ಹೊರಗಡೆ ಚಿತ್ರರಂಗ ಎನ್ನುವ ಕುಟುಂಬ ಸದಸ್ಯರನ್ನು ಭೇಟಿಯಾದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ನೋಡಬಹುದು. ಈ ಪೋಸ್ಟ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದಹಾಗೆ ಪವರ್ ಸ್ಟಾರ್ ಮೊದಲ ಇನ್‌ಸ್ಟಾ ಪೋಸ್ಟ್‌ಗೆ ಒಂದು ಗಂಟೆಯೊಳಗೆ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಇನ್ನು ಪವರ್ ಸ್ಟಾರ್ ಇನ್‌ಸ್ಟಾ ಪೋಸ್ಟ್‌ಗೆ ಸೆಲೆಬ್ರಿಟಿಗಳು ಸಹ ಪ್ರತಿಕ್ರಿಯಿಸುತ್ತಿದ್ದಾರೆ.

ಪವನ್ ನೆನಪಿನ ಬುತ್ತಿಯಲ್ಲಿ ಕನ್ನಡಿಗರು

"ಚಲನಚಿತ್ರ ಉದ್ಯಮದ ಭಾಗವಾಗಿರುವುದಕ್ಕೆ ಮತ್ತು ಹಲವಾರು ಪ್ರತಿಭಾವಂತ ಮತ್ತು ವಿನಮ್ರ ಜನರೊಂದಿಗೆ ಪ್ರಯಾಣಿಸುತ್ತಿರುವುದಕ್ಕೆ ಕೃತಜ್ಞರಾಗಿರುತ್ತೇನೆ" ಎಂದು ಪವನ್ ವೀಡಿಯೊ ಹೇಳಿದ್ದಾರೆ. "ಸದಾ ನೆನಪಿನಲ್ಲಿ ಉಳಿಯುವ ನೆನಪುಗಳು. ನಮ್ಮ ಬಾಂಧವ್ಯ ಹೀಗೆ ಮುಂದುವರೆಯಲಿ ಮತ್ತು ಇನ್ನೂ ಹಲವು ಸಿಹಿ ನೆನಪುಗಳನ್ನು ಹಂಚಿಕೊಳ್ಳಬೇಕು ಎಂದು ಆಶಿಸುತ್ತಾ" ಎನ್ನುವ ಕ್ಯಾಪ್ಷನ್ ಕೊಟ್ಟು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕನ್ನಡ ನಟರಾದ ಶಿವಣ್ಣ, ಸುದೀಪ್, ಗಿರೀಶ್ ಕಾರ್ನಾಡ್, ಪ್ರಕಾಶ್‌ ರೈ ಫೋಟೊಗಳಿವೆ.

ವಿಡಿಯೋದಲ್ಲಿ ಖ್ಯಾತನಾಮರು

ಪವನ್ ಕಲ್ಯಾಣ್ ಹಂಚಿಕೊಂಡಿರುವ ಫೋಟೊಗಳಲ್ಲಿ ತೆಲುಗು ಚಿತ್ರರಂಗದ ಖ್ಯಾತನಾಮರನ್ನು ನೋಡಬಹುದು. ಖ್ಯಾತ ನಿರ್ದೇಶಕರು, ನಟರು, ನಟಿಯರು, ಹಾಸ್ಯ ಕಲಾವಿದರು, ಸಂಗೀತ ನಿರ್ದೇಶಕರು, ಗಾಯಕರು, ಪೋಷಕ ಕಲಾವಿದರು, ತಂತ್ರಜ್ಞರು ಹೀಗೆ ಹಲವರ ಜೊತೆ ಪವನ್ ಆತ್ಮೀಯವಾಗಿ ಕ್ಲಿಕ್ಕಿಸಿರುವ ಫೋಟೊಗಳಿವೆ. 'ಸೈರಾ' ಶೂಟಿಂಗ್ ವೇಳೆ ಅಮಿತಾಬ್ ಬಚ್ಚನ್ ಜೊತೆ ತೆಗೆದ ಫೋಟೊ, ಇತ್ತೀಚೆಗೆ ಸುದೀಪ್ ಭೇಟಿ ವೇಳೆ ಸೆರೆ ಹಿಡಿದ ಫೋಟೊ ಗಮನ ಸೆಳೆಯುವಂತಿವೆ.

ವಿಡಿಯೋದಲ್ಲಿ ಮಾಜಿ ಪತ್ನಿ ರೇಣು ದೇಸಾಯಿ

ಚಿತ್ರರಂಗದಲ್ಲಿ ತಮ್ಮ ಜೊತೆ ಒಡನಾಟ ಇಟ್ಟುಕೊಂಡಿರುವ ಎಲ್ಲರ ನೆನಪುಗಳನ್ನು ಪವನ್ ಕಲ್ಯಾಣ್ ಈ ವಿಡಿಯೋದಲ್ಲಿ ಸೇರಿಸಿದ್ದಾರೆ. ಅಚ್ಚರಿ ಅಂದ್ರೆ ಇದರಲ್ಲಿ ಮಾಜಿ ಪತ್ನಿ ರೇಣಿ ದೇಸಾಯಿ ಜೊತೆಗಿನ ಫೋಟೊ ಕೂಡ ಇದೆ. 'ಬದ್ರಿ' ಸಿನಿಮಾದಲ್ಲಿ ಪವನ್- ರೇಣು ಒಟ್ಟಿಗೆ ನಟಿಸಿದ್ದರು. ಇದೇ ಸಮಯದಲ್ಲಿ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಅದಕ್ಕೂ ಮುನ್ನ ಪವನ್ ಒಂದು ಮದುವೆ ಆಗಿ ಡಿವೋರ್ಸ್ ಪಡೆದಿದ್ದರು. ಇನ್ನು ರೇಣು ಜೊತೆ ಮದುವೆಯಾದ 4 ವರ್ಷಕ್ಕೆ ಮತ್ತೆ ಡಿವೋರ್ಸ್ ಪಡೆದಿದ್ದರು. ಇತ್ತೀಚೆಗೆ ಮಾಜಿ ಪತಿಯ ವಿರುದ್ಧ ರೇಣು ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡಿದ್ದರು.

ಮುಂದಿನ ಪೋಸ್ಟ್ ಏನಾಗಿರುತ್ತದೆ?

ಸಾಮಾನ್ಯವಾಗಿ ಯಾರೇ ಸೋಶಿಯಲ್ ಮೀಡಿಯಾ ಖಾತೆ ತೆರೆದರೂ ಮೊದಲಿಗೆ ತಮ್ಮ ಫೋಟೊಗಳನ್ನು ಶೇರ್ ಮಾಡುತ್ತಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್, ಪ್ರಭಾಸ್ ಕೂಡ ಇದೇ ಮಾಡಿದ್ದರು. ಆದರೆ ಪವನ್ ಕಲ್ಯಾಣ್ ಮಾತ್ರ ಈ ರೀತಿ ತಮ್ಮ ಸಿನಿಕರಿಯರ್‌ನ ಒಮ್ಮೆ ತಿರುವಿ ಹಾಕಿ ನೋಡುವ ಪ್ರಯತ್ನ ಮಾಡಿದ್ದಾರೆ. ಚಿತ್ರರಂಗದಲ್ಲಿ ತಾವು ಭೇಟಿಯಾಗ ಪ್ರತಿಭಾನ್ವಿತರನ್ನು, ಅವರೊಟ್ಟಿಗಿನ ನೆನಪುಗಳನ್ನು ಮೆಲುಕು ಹಾಕಿದ್ಧಾರೆ. ಹಾಗಾಗಿ ಪವರ್ ಸ್ಟಾರ್ ಮುಂದಿನ ಇನ್‌ಸ್ಟಾ ಪೋಸ್ಟ್ ಏನಾಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

More from Filmibeat

English summary
Pawan Kalyan First Instagram post, he also shares his memories with kannada actors. Shivarajkumar, Sudeep, Prakash Raj, Girish Karnad was featured in the video. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X