For Quick Alerts
  ALLOW NOTIFICATIONS  
  For Daily Alerts

  ವಿರೋಧದ ನಡುವೆಯೂ ಸಿನಿಮಾಗೆ ಮರಳಿದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ!

  |

  ಟಾಲಿವುಡ್‌ ಪವರ್‌ಸ್ಟಾರ್ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಮತ್ತೆ ಸಿನಿಮಾಗೆ ಮರಳುವುದಕ್ಕೆ ಎದುರು ನೋಡುತ್ತಲೇ ಇದ್ದರು. ರೇಣು ದೇಸಾಯಿ ಸಿನಿಮಾಗೆ ಕಮ್ ಬ್ಯಾಕ್ ಮಾಡುವ ಬಗ್ಗೆ ಮಾತಾಡಿದಾಗಲೇಲ್ಲಾ ಪವನ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದೇ ಹೆಚ್ಚು.

  ಪವನ್‌ ಕಲ್ಯಾಣ್ ಅಭಿಮಾನಿಗಳ ವಿರೋಧದ ನಡುವೆಯೂ ರೇಣು ದೇಸಾಯಿ ಮತ್ತೆ ಸಿನಿಮಾಗೆ ಮರಳಿದ್ದಾಗಿದೆ. ಬರೋಬ್ಬರಿ 18 ವರ್ಷಗಳ ಬಳಿಕ ರೇಣು ದೇಸಾಯಿ ಟಾಲಿವುಡ್‌ಗೆ ಕಮ್‌ ಬ್ಯಾಕ್ ಮಾಡಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಈಗಾಗಲೇ ಚಿಕ್ಕದೊಂದು ಝಲಕ್ ಅನ್ನೂ ರಿಲೀಸ್ ಮಾಡಲಾಗಿದೆ.

  ಮತ್ತೆ ಬಣ್ಣ ಹಚ್ಚಿ ಪವನ್ ಕಲ್ಯಾಣ್ ಮಾಜಿ ಪತ್ನಿ

  ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಮತ್ತೆ ಸಿನಿಮಾ ಮರಳಿರುವ ಬಗ್ಗೆನೇ ಚರ್ಚೆಯಾಗುತ್ತಿದೆ. 18 ವರ್ಷಗಳಿಂದ ತೆರೆಮರೆಯಲ್ಲಿದ್ದ ರೇಣು ದೇಸಾಯಿ 'ಟೈಗರ್ ನಾಗೇಶ್ವರ ರಾವ್' ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಅದೇ ಸಿನಿಮಾದ ಚಿಕ್ಕದೊಂದು ಝಲಕ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಟಾಲಿವುಡ್‌ನ ಮಾಸ್ ಮಹಾರಾಜ ರವಿತೇಜಾ ಈ ಸಿನಿಮಾ ಹೀರೊ. ಸದ್ಯ 'ಟೈಗರ್ ನಾಗೇಶ್ವರ ರಾವ್' ಚಿತ್ರತಂಡ ರೇಣು ದೇಸಾಯಿ ಪಾತ್ರದ ಇಂಟ್ರೂಡಕ್ಷನ್ ಟೀಸರ್ ಅನ್ನು ಹೊರಬಿಟ್ಟಿದೆ. ವಂಶಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

  ರೇಣು ದೇಸಾಯಿ ಪಾತ್ರದ ಹಿನ್ನೆಲೆ ಏನು?

  'ಟೈಗರ್ ನಾಗೇಶ್ವರ ರಾವ್' ಸಿನಿಮಾದಲ್ಲಿ ರೇಣು ದೇಸಾಯಿ ಪಾತ್ರ ಎಲ್ಲರ ಗಮನ ಸೆಳೆದಿದೆ. ಈ ಚಿತ್ರತಂಡ ರೇಣು ದೇಸಾಯಿಯನ್ನು ಹೇಮಲತಾ ಲವಣಂ ಎಂದು ಪರಿಚಯಿಸಿದೆ. ಬಿಳಿ ಸೀರೆಯುಟ್ಟು ಪವರ್‌ಫುಲ್ ಎಂಟ್ರಿ ಕೊಟ್ಟಿರುವ ರೇಣು ದೇಸಾಯಿ ಪಾತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

  ಅಂದ್ಹಾಗೆ ಹೇಮಲತಾ ಲವಣಂ ಭಾರತೀಯ ಸಾಮಾಜಿಕ ಕಾರ್ಯಕರ್ತೆ. ಇವರು ಲೇಖಕಿಯೂ ಕೂಡ ಹೌದು. ಅಸ್ಪೃಶತೆ ವಿರುದ್ಧದ ಹೋರಾಟದಲ್ಲಿ ಗುರುತಿಸಿಕೊಂಡಿದ್ದವರು. ಚಂಬಲ್ ಕಣಿವೆಯ ಡಕಾಯಿತರ ಶರಣಾಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಅಪರಾಧಿಗಳ ಪುನರ್ವಸತಿ ಕಲ್ಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಇದೇ ಹೇಮಲತಾ ಲವಣಂ ಪಾತ್ರದಲ್ಲಿ ರೇಣು ದೇಸಾಯಿ ಕಾಣಿಸಿಕೊಳ್ಳಿದ್ದಾರೆ.

  Pawan Kalyan First Wife Renu Desai Comeback Movie Tiger Nageswara Rao Look Out

  ಪ್ಯಾನ್ ಇಂಡಿಯಾ ಸಿನಿಮಾ

  'ಟೈಗರ್ ನಾಗೇಶ್ವರ ರಾವ್' ಸಿನಿಮಾ ಮೂಲಕ ಮಾಸ್ ಮಹಾರಾಜ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಈ ಸಿನಿಮಾವನ್ನು ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ಮಾಣ ಮಾಡಿ ದೊಡ್ಡ ಜನಪ್ರಿಯರಾಗಿರುವ ಅಭಿಷೇಕ್ ಅರ್ಗವಾಲ್ ತಮ್ಮದೇ 'ಅಭಿಷೇಕ್ ಅಗರ್ವಾಲ್ ಆರ್ಟ್ಸ್' ಮೂಲಕ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಕುತೂಹಲ ಮೂಡಿಸಿದೆ.

  ಈ ಸಿನಿಮಾದಲ್ಲಿ ರವಿತೇಜ ಸಂಪೂರ್ಣ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿತೇಜ ಜೊತೆ ನೂಪುರ್ ಸನೋನ್, ಗಾಯತ್ರಿ ಭಾರದ್ವಾಜ್ ನಟಿಸುತಿದ್ದಾರೆ. 70-80ರ ದಶಕದ ರೆಟ್ರೋ ಶೈಲಿಯಲ್ಲಿ ಈ ಸಿನಿಮಾ ಮೂಡಿಬರಲಿದೆ.

  English summary
  Pawan Kalyan First Wife Renu Desai Comeback Movie Tiger Nageswara Rao Look Out, Know More.
  Thursday, September 29, 2022, 20:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X