RRR: ಚಿತ್ರಕ್ಕೆ ಮೊದಲ ಆಯ್ಕೆ ಪವರ್ ಸ್ಟಾರ್ 'ಪವನ್ ಕಲ್ಯಾಣ್'!
'RRR' ಚಿತ್ರ ರಿಲೀಸ್ ಆಗಿ ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ಸಿನಿಮಾ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಕೋಟಿ, ಕೋಟಿ ಮೊತ್ತ ಕಲೆ ಹಾಕಿ ಹೊಸ ದಾಖಲೆಯನ್ನು ನಿರ್ಮಿಸುತ್ತಿದೆ.
ಈ ಚಿತ್ರದ ಕಥೆಗೆ ಪ್ರಮುಖವಾದ ಎರಡು ಪಾತ್ರಗಳು ಅಂದರೆ ಅದು ನಟ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್. ಇವರಿಬ್ಬರೂ ಪಾತ್ರಗಳ ಮೇಲೆಯೇ ಸಿನಿಮಾ ನಿಂತಿದೆ. ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಬರೆದಿರುವ ಕಥೆಗೆ ರಾಮ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಜೀವ ತುಂಬಿದ್ದಾರೆ.
ಚಿತ್ರದಲ್ಲಿ ಇಬ್ಬರೂ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ಹೊಸ ಪಾತ್ರಗಳಲ್ಲಿ ಇವರನ್ನು ನೋಡಿದ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಮಲ್ಟಿಸ್ಟಾರರ್ ಸಿನಿಮಾ ಬರುವುದೇ ಕಷ್ಟ ಅದರಲ್ಲೂ ಇಂತಹ ದೊಡ್ಡ ಸಿನಿಮಾವನ್ನು ಒಟ್ಟಾಗಿ ಮಾಡಿದಂತಹ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ಗೆದ್ದಿದ್ದಾರೆ. ಆದರೆ ಈ ಚಿತ್ರಕ್ಕೆ ಇವರಿಬ್ಬರಿಗಿಂತಲೂ ಮೊದಲು ಬೇರೆಯ ನಾಯಕ ನಟನ ಆಯ್ಕೆಯಾಗಿತ್ತು. ಅದು ಮತ್ಯಾರು ಅಲ್ಲ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್.

ಹೌದು 'RRR' ಚಿತ್ರಕ್ಕೆ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ಇಬ್ಬರಿಗಿಂತಲೂ ಮೊದಲು ಆಯ್ಕೆ ಆದಂತಹ ನಟ ಪವನ್ ಕಲ್ಯಾಣ್. ಹಾಗಂತ ಈ ಚಿತ್ರಕ್ಕೆ ಅವರು ನಾಯಕ ಎಂದು ಚಿತ್ರತಂಡ ಎಂದು ಅಂತಮವಾಗಿ ನಿರ್ಧರಿಸಿಲ್ಲ ಮತ್ತು ಅದನ್ನು ಪ್ರಕಟ ಮಾಡಿಲ್ಲ. ಆದರೆ ಕಥೆ ಬರೆಯುವಂತಹ ಸಂದರ್ಭದಲ್ಲಿ ಅಂದರೆ ಸಿನಿಮಾ ಸ್ಕ್ರಿಪ್ಟ್ ರೆಡಿಯಾಗುವಂತಹ ಸಂದರ್ಭದಲ್ಲಿ ಈ ಚಿತ್ರಕ್ಕೆ ನಾಯಕ ನಟನಾಗಿ ಪವನ್ ಕಲ್ಯಾಣ್ ಸೂಕ್ತ ಎಂದು ವಿಜಯೇಂದ್ರ ಪ್ರಸಾದ್ ಸೂಚಿಸಿದ್ದರಂತೆ. ನಿರ್ದೇಶಕ ರಾಜಮೌಳಿ ಕೂಡ ಈ ಕಥೆಗೆ ಪವನ್ ಕಲ್ಯಾಣ್ ಪರ್ಫೆಕ್ಟ್ ಎಂದಿದ್ದರಂತೆ.
ಈ ವಿಚಾರವನ್ನು ರಾಜಮೌಳಿಯ ತಂದೆ, 'RRR' ಸಿನಿಮಾದ ಕಥೆಗಾರ ವಿಜಯೇಂದ್ರ ಪ್ರಸಾದ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಆದರೆ ಪವನ್ ಕಲ್ಯಾಣ್ ಅವರಂತಹ ಬೇರೆ ನಟರು ಯಾರಿದ್ದಾರೆ ಎಂದು ಎಂದು ಹುಡುಕಿದಾಗ ಅವರ ಕಣ್ಣಿಗೆ ಬಿದ್ದದ್ದು ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್.

ಹಾಗಿದ್ದರೆ ಈ ಚಿತ್ರದಲ್ಲಿ ಪವನ್ ಕಲ್ಯಾಣ್ಗೆ ಯಾಕೆ ಜಾಗವಿಲ್ಲ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ 'RRR' ಚಿತ್ರದ ಸ್ಕ್ರಿಪ್ಟ್ ಹಂತದಲ್ಲಿ ಇಷ್ಟು ಪವರ್‌ಫುಲ್ ಪಾತ್ರಗಳಿಗೆ ಪವನ್ ಕಲ್ಯಾಣ್ ಸರಿ ಹೊಂದುತ್ತಾರೆ ಎಂದು ವಿಜಯೇಂದ್ರ ಪ್ರಸಾದ್ ಮತ್ತು ರಾಜಮೌಳಿ ಆಲೋಚನೆ ಮಾಡಿದ್ದು ಮಾತ್ರ ಸತ್ಯ.
ಮುಂದೆ ಪವನ್ ಕಲ್ಯಾಣ್ ಜೊತೆಗೆ ರಾಜಮೌಳಿ ಕೆಲಸ ಮಾಡಬಹುದು. ಪವನ್ ಕಲ್ಯಾಣ್ಗಾಗಿ ವಿಜಯೇಂದ್ರ ಪ್ರಸಾದ್ ಕಥೆಯನ್ನು ಬರೆಯಬಹುದು. ಹಾಗೇನಾದರು ರಾಜಮೌಳಿ ಪವನ್ ಕಲ್ಯಾಣ್ ಗೆ ಸಿನಿಮಾ ಮಾಡುತ್ತಾರೆ ಅಂತಾದರೆ ಅದು ನಿಜವಾಗಿಯೂ ಸೂಪರ್ ಡೂಪರ್ ಹಿಟ್ ಆಗಲಿದೆ ಜೊತೆಗೆ ಪವರ್ಫುಲ್ ಚಿತ್ರ ಆಗುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











