ಪವನ್ ಕಲ್ಯಾಣ್ ಪ್ಯಾನ್ ಇಂಡಿಯಾ ಸಿನಿಮಾದ ಶೀರ್ಷಿಕೆ ಮತ್ತು ಮೊದಲ ನೋಟ ಬಿಡುಗಡೆ

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾದ ಶೀರ್ಷಿಕೆ ಮತ್ತು ಮೊದಲ ನೋಟ ಬಿಡುಗಡೆಯಾಗಿದೆ. ಬಹುನಿರೀಕ್ಷೆಯ ಸಿನಿಮಾಗೆ 'ಹರಿ ಹರ ವೀರ ಮಲ್ಲು' ಎಂದು ಹೆಸರಿಡಲಾಗಿದೆ. ಶಿವರಾತ್ರಿ ಹಬ್ಬದ ವಿಶೇಷವಾಗಿ ಸಿನಿಮಾತಂಡ ಚಿತ್ರದ ಶೀರ್ಷಿಕೆ ಬಿಡುಗೆ ಮತ್ತು ಮೊದಲ ನೋಟ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ನಿರ್ದೇಶಕ ಕ್ರಿಶ್ ಮತ್ತು ಪವನ್ ಕಲ್ಯಾಣ್ ಪ್ಯಾನ್ ಇಂಡಿಯಾ ಸಿನಿಮಾ ಕಳೆದ ವರ್ಷದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದರೆ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದರು. ಇದೀಗ ಹರಿ ಹರ ವೀರ ಮಲ್ಲು ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಹರಿ ಹರ ಮಲ್ಲು ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ತಿಂಗಳ ಮೇಲಾಗಿದೆ. ಇತ್ತೀಚಿಗಷ್ಟೆ ಪವನ್ ಕಲ್ಯಾಣ್ ಚಿತ್ರೀಕರಣ ಸೆಟ್ ನಿಂದ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. 17ನೇ ಶತಮಾನದ ವಾಸ್ತುಶಿಲ್ಪ ಹೋಲುವ ಸೆಟ್ ಗಳನ್ನು ನಿರ್ಮಿಸಲಾಗಿದ್ದು, ಚಿತ್ರೀಕರಣ ಮಾಡಲಾಗುತ್ತಿದೆ.

Pawan Kalyan next movie titled Hari Hara Veera Mallu

ಈ ಐತಿಹಾಸಿಕ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ಚಿತ್ರದಲ್ಲಿ ಪವನ್ ಕಲ್ಯಾಣ್ ಗೆ ನಾಯಕಿಯಾಗಿ ನಿಧಿ ಅಗರ್ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ನಿಧಿ ಅಗರ್ವಾಲ್ ಬಹಿರಂಗ ಪಡಿಸಿದ್ದರು. 'ನಾನು ಪವನ್ ಕಲ್ಯಾಣ್ ಜೊತೆ ಸಿನಿಮಾ ಮಾಡುತ್ತಿದ್ದೇನೆ. ನನ್ನ ಕನಸು ನನಸಾಗಿದೆ. ಇದು ನನ್ನ 9ನೇ ಸಿನಿಮಾ. ಇದನ್ನ ನಾನು ಗೋಲ್ಡನ್ ಸಿನಿಮಾವಾಗಿ ನೋಡುತ್ತೇನೆ' ಎಂದು ಹೇಳುವ ಮೂಲಕ ಪವನ್ ಕಲ್ಯಾಣ್ ಜೊತೆ ನಟಿಸುತ್ತಿರುವ ಮಾಹಿತಿ ಬಿಚ್ಚಿಟ್ಟಿದ್ದರು.

ಸದ್ಯ 40ರಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಜುಲೈನಲ್ಲಿ ಚಿತ್ರೀಕರಣ ಮುಗಿಸುವ ನಿರ್ಧಾರ ಮಾಡಿದ್ದಾರೆ. ಇನ್ನು ಚಿತ್ರದ ವಿ ಎಫ್ ಎಕ್ಸ್ ಕೆಲಗಳು ಜಾಸ್ತಿ ಇರುವ ಕಾರಣ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಹಾಲಿವುಡ್ ನ ಖ್ಯಾತ ಗ್ರಾಫಿಕ್ಸ್ ಡಿಸೈನರ್ಸ್ ಹರಿ ಹರ ಮಲ್ಲು ಸಿನಿಮಾಗೆ ಗ್ರಾಫಿಕ್ಸ್ ಕೆಲಸ ಮಾಡುತ್ತಿದ್ದಾರೆ.

Recommended Video

Roberrt Box Office Collection : ಅಭಿಮಾನಿಗಳ ಆರ್ಭಟಕ್ಕೆ ಬಾಕ್ಸ್ ಆಫೀಸ್ ಲೂಟಿ | Filmibeat Kannada

More from Filmibeat

English summary
Pawan Kalyan next movie titled Hari Hara Veera Mallu. First glimpse shows Pawan Kalyan in a fierce warrior avatar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X