For Quick Alerts
  ALLOW NOTIFICATIONS  
  For Daily Alerts

  ನಟ ಪವನ್ ಕಲ್ಯಾಣ್ ಸರಳತೆಗೆ ಈ ಚಿತ್ರಗಳು ಸಾಕ್ಷಿ

  |

  ರಾಜಕೀಯಕ್ಕೆ ಬಂದ ನಂತರ ಪವನ್ ಕಲ್ಯಾಣ್ ವರ್ತನೆಯಲ್ಲಿ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

  ಬಿಳಿ ಬಟ್ಟೆ ತೊಟ್ಟು, ಕೆಂಪು ಟವೆಲ್ ಸುತ್ತಿಕೊಂಡು ಹಸುಗಳ ಆರೈಕೆ ಮಾಡುತ್ತಿರುವ ಕೆಲವು ಚಿತ್ರಗಳು ಕೆಲವು ದಿನಗಳ ಹಿಂದೆ ಹರಿದಾಡಿದ್ದವು.

  ನಂತರ ಪೂರ್ತಿ ಗಡ್ಡ ಬಿಟ್ಟು ಪಂಚೆ ಖಾದಿ ಜುಬ್ಬಾ ತೊಟ್ಟು ಬಾಬಾ ಮಾದರಿಯಲ್ಲಿ ಆಪ್ತರೊಬ್ಬರ ಮದುವೆಯಲ್ಲಿ ಕಾಣಿಸಿಕೊಂಡಿದ್ದರು ಪವನ್ ಕಲ್ಯಾಣ್. ಇತ್ತೀಚೆಗೆ ಸಾಕಷ್ಟು ಅಧ್ಯಾತ್ಮದ ಕಡೆ ವಾಲುತ್ತಿರುವಂತೆಯೂ ಕಾಣುತ್ತಿದ್ದರು.

  ಇದೀಗ ಪವನ್ ಕಲ್ಯಾಣ್ ಅವರ ಕೆಲವು ಚಿತ್ರಗಳು ಹರಿದಾಡುತ್ತಿದ್ದು, ಪವನ್ ಕಲ್ಯಾಣ್‌ ಸರಳತೆಗೆ, ತಮ್ಮ ಅಭಿಮಾನಿಗಳ ಮೇಲೆ ಪವನ್ ಕಲ್ಯಾಣ್ ಗೆ ಇರುವ ಪ್ರೀತಿಗೆ ಈ ಚಿತ್ರಗಳು ಸಾಕ್ಷಿ ಎಂಬಂತೆ ಪವನ್ ಅಭಿಮಾನಿಗಳು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  ಅಭಿಮಾನಿಗಳೊಂದಿಗೆ ಮಂಡಿಯೂರಿದ ಪವನ್ ಕಲ್ಯಾಣ್

  ಅಭಿಮಾನಿಗಳೊಂದಿಗೆ ಮಂಡಿಯೂರಿದ ಪವನ್ ಕಲ್ಯಾಣ್

  ಮೊದಲ ಚಿತ್ರದಲ್ಲಿ ಪವನ್ ಕಲ್ಯಾಣ್ ತಮ್ಮ ಅಭಿಮಾನಿಗಳೊಂದಿಗೆ ಮಂಡಿಯೂರಿ ನೆಲದ ಮೇಲೆ ಕೂತು ಚಿತ್ರ ತೆಗೆಸಿಕೊಂಡಿದ್ದಾರೆ. ಚಿತ್ರದಲ್ಲಿ ಎಲ್ಲರೂ ಬರಬೇಕೆಂಬ ಕಾರಣಕ್ಕೆ ಪವನ್ ಕಲ್ಯಾಣ್ ಕೆಳಗೆ, ಅಭಿಮಾನಿಗಳೊಟ್ಟಿಗೆ ಕುಳಿತುಕೊಂಡಿದ್ದಾರೆ. ಈ ಚಿತ್ರ ತುಸು ಹಳೆಯದು ಎನ್ನಲಾಗುತ್ತಿದೆ.

  ರಸ್ತೆ ಮೇಲೆ ಕುಳಿತುಕೊಂಡ ಪವನ್ ಕಲ್ಯಾಣ್

  ರಸ್ತೆ ಮೇಲೆ ಕುಳಿತುಕೊಂಡ ಪವನ್ ಕಲ್ಯಾಣ್

  ಮತ್ತೊಂದು ಚಿತ್ರದಲ್ಲಿ ಪವನ್ ಕಲ್ಯಾಣ್ ರಸ್ತೆ ಬದಿಯಲ್ಲಿ ನೆಲದ ಮೇಲೆ ಕುಳಿತುಕೊಂಡಿದ್ದಾರೆ. ಅಭಿಮಾನಿಗಳು ಅವರ ಸುತ್ತ ಕುಳಿತುಕೊಂಡಿದ್ದಾರೆ. ಕೆಲವು ಯುವಕರು ಪವನ್ ಕಲ್ಯಾಣ್ ಕಾಲು ಮುಟ್ಟಿ ಆಶೀರ್ವಾದ ಸಹ ಪಡೆಯುತ್ತಿದ್ದಾರೆ. ಈ ಚಿತ್ರ ಬಹಳ ಇತ್ತೀಚಿನದ್ದಂತೆ.

  ಪಶ್ಚಿಮ ಬಂಗಾಳದಲ್ಲೂ ಇದ್ದಾರೆ ಅಭಿಮಾನಿಗಳು

  ಪಶ್ಚಿಮ ಬಂಗಾಳದಲ್ಲೂ ಇದ್ದಾರೆ ಅಭಿಮಾನಿಗಳು

  ತೆಲುಗಿನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟಾಪ್ ನಟರಲ್ಲಿ ಪವನ್ ಕಲ್ಯಾಣ್ ಸಹ ಒಬ್ಬರು. ತೆಲುಗು ರಾಷ್ಟ್ರಗಳು ಮಾತ್ರವಲ್ಲದೆ, ಕೇರಳ, ಕರ್ನಾಟಕ ಮಾತ್ರವಲ್ಲದೆ ತೆಲುಗು ಭಾಷಿಕರು ಅತ್ಯಂತ ಕಡಿಮೆ ಇರುವ ಪಶ್ಚಿಮ ಬಂಗಾಳದಲ್ಲಿಯೂ ಸಹ ಪವನ್ ಕಲ್ಯಾಣ್ ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

  ವಕೀಲ್ ಸಾಬ್ ಸಿನಿಮಾದ ಚಿತ್ರೀಕರಣ

  ವಕೀಲ್ ಸಾಬ್ ಸಿನಿಮಾದ ಚಿತ್ರೀಕರಣ

  ಪವನ್ ಕಲ್ಯಾಣ್ ಪ್ರಸ್ತುತ ವಕೀಲ್ ಸಾಬ್ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಇದರ ನಂತರ ಮಲಯಾಳಂ ನ ಅಯ್ಯಪ್ಪನುಂ-ಕೋಶಿಯುಂ ಸಿನಿಮಾದ ತೆಲುಗು ರೀಮೇಕ್‌ನಲ್ಲಿ ನಟಿಸಲಿದ್ದಾರೆ. ಕ್ರಿಶ್ ನಿರ್ದೇಶನದ ಐತಿಹಾಸಿಕ ಸಿನಿಮಾ ಸೇರಿ ಹೆಸರಿಡ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಪವನ್.

  English summary
  Actor Pawan Kalyan's photos with his fans went viral on social media. Photos showing Pawan Kalyan's simplicity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X