ಪವನ್ ಕಲ್ಯಾಣ್ ಜೊತೆ ಲವ್, ಪ್ರಪೋಸ್ ಮಾಡಿದ್ದು ಯಾರು? ಸೀಕ್ರೆಟ್ ಬಿಚ್ಚಿಟ್ಟ ಅನ್ನಾ ಲೆಜ್ನೆವಾ
ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಒಂದಲ್ಲ ಎರಡಲ್ಲ ಮೂರು ಮದುವೆ ಮಾಡಿಕೊಂಡಿರುವುದು ಗೊತ್ತೇಯಿದೆ. 90ರ ದಶಕದಲ್ಲೇ ನಂದಿನಿ ಎಂಬುವವರನ್ನು ಮದುವೆಯಾಗಿದ್ದ ಪವನ್ ಬಳಿಕ ನಟಿ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆಕೆಗೂ ಡಿವೋರ್ಸ್ ಕೊಟ್ಟು ರಷ್ಯನ್ ಮಹಿಳೆ ಅನ್ನಾ ಲೆಜ್ನೆವಾ ಜೊತೆ 3ನೇ ಮದುವೆ ಆಗಿದ್ದಾರೆ.
ಪವನ್ ಹಾಗೂ ರೇಣು ದೇಸಾಯಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಅದೇ ರೀತಿ ಪವನ್, ಅನ್ನಾಗೂ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ಪವನ್ ಜೊತೆ ಮದುವೆ ಆಗಿ ಹೈದರಾಬಾದ್‌ನಲ್ಲೇ ಆಕೆ ಸೆಟ್ಲ್ ಆಗಿದ್ದಾರೆ. ಭಾರತೀಯ ಸಂಪ್ರದಾಯಗಳನ್ನು ಪಾಲಿಸುತ್ತಾ ಇಲ್ಲಿನವರೇ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಅನ್ನಾ ಇನ್‌ಸ್ಟಾಗ್ರಾಮ್‌ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಆಗಾಗ್ಗೆ ಅಭಿಮಾನಿಗಳು ಜೊತೆ ಚಿಟ್ ಚಾಟ್ ನಡೆಸುತ್ತಾರೆ.

ಪ್ರಶ್ನೋತ್ತರ ಸೆಷನ್ ವೇಳೆ ಅಭಿಮಾನಿಯೊಬ್ಬರು ಇಬ್ಬರಲ್ಲಿ ಯಾರು ಮೊದಲು ಪ್ರಪೋಸ್ ಮಾಡಿದ್ದು ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿಯೊಬ್ಬರು ಅತ್ತಿಗೆ ನಿಮ್ಮಬ್ಬರಲ್ಲಿ ಯಾರು ಮೊದಲು ಪ್ರಪೋಸ್ ಮಾಡಿದ್ದು? ಎನ್ನುವ ಪ್ರಶ್ನೆಗೆ "ನಿಮ್ಮ ಅಣ್ಣ" ಎಂದು ರಿಪ್ಲೇ ಮಾಡಿದ್ದಾರೆ. 1997ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾಗಿದ್ದ ಪವನ್ 2 ವರ್ಷಗಳ ಬಳಿಕ ದೂರಾಗಿದ್ದರು.
'ಬದ್ರಿ' ಸಿನಿಮಾ ಚಿತ್ರೀಕರಣದ ವೇಳೆ ನಟಿ ರೇಣು ದೇಸಾಯಿ ಜೊತೆ ಲವ್ ಆಗಿತ್ತು. ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದರು. 2004ರಲ್ಲಿ ಮಗ ಕೂಡ ಹುಟ್ಟಿದ್ದ. 2008ರಲ್ಲಿ ಅಧಿಕೃತವಾಗಿ ನಂದಿನಿ ಅವರಿಗೆ ಡಿವೋರ್ಸ್ ಕೊಟ್ಟು ರೇಣು ದೇಸಾಯಿ ಜೊತೆ ಪವನ್ ಹಸೆಮಣೆ ಏರಿದ್ದರು. 2012ರಲ್ಲಿ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. 'ತೀನ್‌ಮಾರ್' ಚಿತ್ರದಲ್ಲಿ ಪವನ್ ಜೊತೆ ಅನ್ನಾ ನಟಿಸಿದ್ದರು. ಚಿತ್ರೀಕರಣದ ವೇಳೆ ಆಕೆಯ ಪರಿಚಯವಾಗಿತ್ತು. ಅದಾಗಲೇ ಆಕೆಗೂ ಮದುವೆಯಾಗಿ ಒಂದು ಮಗುವಾಗಿತ್ತು. ಡಿವೋರ್ಸ್ ಆಗಿತ್ತು. ಅನ್ನಾ ಜೊತೆ 2 ವರ್ಷ ಪ್ರೇಮಾಯಣ ನಡೆಸಿದ 2013ರಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು.

ಪವನ್ ಕಲ್ಯಾಣ್ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ರೇಣು ದೇಸಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂದರ್ಶನಗಳಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ. "ಪವನ್ ಕಲ್ಯಾಣ್ ಅದಾಗಲೇ ಒಂದು ಮದುವೆ ಆಗಿದ್ದರು ಎನ್ನುವುದು ನಿಮಗೆ ಗೊತ್ತಿತ್ತಾ?" ಎನ್ನುವ ಪ್ರಶ್ನೆಗೆ "ಆಗ ನನಗೆ ಆ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಆಗ ನನಗೆ ಇನ್ನು 18 ವರ್ಷ. ಆ ಮದುವೆಯ ಬಗ್ಗೆ ಗೊತ್ತಾದ ಬಳಿಕ ಕೂಡ ನಾನು ತೆಗೆದುಕೊಳ್ಳುತ್ತಿರುವ ನಿರ್ಧಾರ ಸರಿನಾ, ತಪ್ಪಾ ಎಂದು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ" ಎಂದಿದ್ದರು.
ಆ ಸಮಯದಲ್ಲಿ ನನಗೆ ಪವನ್ ಕಲ್ಯಾಣ್ ಮೇಲೆ ಮಾತ್ರ ಪ್ರೀತಿ ಕಾಣಿಸುತ್ತಿತ್ತು. ಬೇರೆ ವಿಚಾರಗಳ ಬಗ್ಗೆ ಗಮನ ಇರಲಿಲ್ಲ ಎಂದು ರೇಣು ದೇಸಾಯಿ ಹೇಳಿದ್ದರು. "ಪ್ರೀತಿ ಶುರುವಾದ ಬಳಿಕ ಬುದ್ಧಿ ಎಲ್ಲಿ ಕೆಲಸ ಮಾಡುತ್ತೆ? ಪ್ರೀತಿ ಕುರುಡು ಅಂತಾರೆ, ಆದರೆ, ನನ್ನ ವಿಷಯದಲ್ಲಿ ಪ್ರೀತಿ ಕುರುಡು ಮಾತ್ರವಲ್ಲ ಕಿವುಡಾಗಿತ್ತು. ಆ ಸಮಯದಲ್ಲಿ ಯಾರು ಏನು ಹೇಳಿದ್ರು ನನಗೆ ಕೇಳಿಸುತ್ತಿರಲಿಲ್ಲ, ಕಾಣಿಸುತ್ತಿರಲಿಲ್ಲ. ನಾನು ಸಂಪೂರ್ಣವಾಗಿ ಪ್ರೇಮಪಾಶದಲ್ಲಿ ಸಿಲುಕಿದ್ದೆ" ಎಂದಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ತಮ್ಮ ಮಗ ಮಾರ್ಕ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ಸಿಂಗಾಪುರದ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಸಮ್ಮರ್ ಕ್ಯಾಂಪ್‌ಗಾಗಿ ಪವನ್ ಪುತ್ರ ಮಾರ್ಕ್ ಅದೇ ಶಾಲೆಯಲ್ಲಿ ಇದ್ದ. ಅಂದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಾರ್ಕ್ ಪಾರಾಗಿದ್ದ. ಅದು ಆತನಿಗೆ ಪುನರ್ಜನ್ಮ ಎಂದು ಅನ್ನಾ ನೆನಪಿಸಿಕೊಂಡು ಪೋಸ್ಟ್ ಮಾಡಿದ್ದಾರೆ.


Click it and Unblock the Notifications











