ಈ ಮಲೆಯಾಳಂ ಸಿನಿಮಾ ರೀಮೇಕ್‌ನಲ್ಲಿ ನಟಿಸುವುದಿಲ್ಲವೆಂದ ಪವನ್ ಕಲ್ಯಾಣ್

ತೆಲುಗು ಖ್ಯಾತ ನಟ ಪವನ್ ಕಲ್ಯಾಣ್ ರಾಜಕೀಯಕ್ಕೆ ಬಂದಾಗಿನಿಂದಲೂ ವರ್ಷಕ್ಕೆ ಒಂದೇ ಸಿನಿಮಾ ಮಾಡುವುದು ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ.

Recommended Video

ಅಂಬಿಗೆ‌ ಸೋಶಿಯಲ್ ಮೀಡಿಯಾದಲ್ಲಿ ಬರ್ತ ಡೇ ಶುಭಾಶಯ | Ambareesh | FILMIBEAT KANNADA

ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣದಿಂದ ತಮ್ಮ ಸಿನಿಮಾ ಆಯ್ಕೆಯ ಬಗ್ಗೆ ಬಹು ಎಚ್ಚರಿಕೆಯನ್ನು ಪವನ್ ಕಲ್ಯಾಣ್ ವಹಿಸುತ್ತಾರೆ. ರಾಜಕೀಯಕ್ಕೆ ಬಂದ ನಂತರ ಸಾಮಾಜಿಕ ಸಂದೇಶ ಇರುವ ಚಿತ್ರಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ ಪವನ್.

ಒಳ್ಳೆಯ ಕತೆಯುಳ್ಳ ರೀಮೇಕ್‌ ಸಿನಿಮಾದಲ್ಲೂ ಪವನ್ ನಟಿಸುತ್ತಲೇ ಬಂದಿದ್ದಾರೆ. ಈಗ ನಟಿಸುತ್ತಿರುವ ವಕೀಲ್ ಸಾಬ್ ಸಹ ಹಿಂದಿಯ ಪಿಂಕ್ ಸಿನಿಮಾದ ರೀಮೇಕ್. ಆದರೆ ಮಲೆಯಾಳಂ ನ ಸಿನಿಮಾದ ರೀಮೇಕ್‌ನಲ್ಲಿ ನಟಿಸಲು ಒಲ್ಲೆ ಎಂದಿದ್ದಾರೆ ಪವನ್ ಕಲ್ಯಾಣ್.

ನಟಿಸುವುದಿಲ್ಲವೆಂದ ಪವನ್ ಕಲ್ಯಾಣ್

ನಟಿಸುವುದಿಲ್ಲವೆಂದ ಪವನ್ ಕಲ್ಯಾಣ್

ಮಲಯಾಳಂ ನ ಉತ್ತಮ ಚಿತ್ರ 'ಡ್ರೈವಿಂಗ್ ಲೈಸೆನ್ಸ್' ಸಿನಿಮಾದ ರೀಮೇಕ್‌ ನಲ್ಲಿ ನಟಿಸುವಂತೆ ಪವನ್ ಕಲ್ಯಾಣ್‌ ಗೆ ಆಫರ್ ನೀಡಲಾಗಿತ್ತು. ಆದರೆ ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಪವನ್ ಕಲ್ಯಾಣ್ ಹೇಳಿದ್ದಾರಂತೆ.

ವಿಶೇಷ ಶೋ ಏರ್ಪಡಿಸಿದ್ದರು

ವಿಶೇಷ ಶೋ ಏರ್ಪಡಿಸಿದ್ದರು

ತೆಲುಗು ನಿರ್ಮಾಪಕರೊಬ್ಬರು 'ಡ್ರೈವಿಂಗ್ ಲೈಸೆನ್ಸ್‌' ಸಿನಿಮಾದ ರೀಮೇಕ್ ಹಕ್ಕನ್ನು ಕೊಳ್ಳುವ ಬಗ್ಗೆ ಉತ್ಸುಕರಾಗಿದ್ದು, ನಾಯಕ ಪಾತ್ರದಲ್ಲಿ ನಟಿಸುವಂತೆ ಪವನ್ ಕಲ್ಯಾಣ್ ಅವರನ್ನು ಕೇಳಿದ್ದರು, ಪವನ್ ಗಾಗಿ 'ಡ್ರೈವಿಂಗ್ ಲೈಸೆನ್ಸ್' ಸಿನಿಮಾದ ವಿಶೇಷ ಶೋ ಸಹ ಏರ್ಪಡಿಸಿದ್ದರು.

ಸಿನಿಮಾ ನೋಡಿದ ಪವನ್ ಕಲ್ಯಾಣ್

ಸಿನಿಮಾ ನೋಡಿದ ಪವನ್ ಕಲ್ಯಾಣ್

ಸಿನಿಮಾ ನೋಡಿದ ಪವನ್ ಕಲ್ಯಾಣ್ ಸಿನಿಮಾದಲ್ಲಿ ತಾವು ನಟಿಸುವುದಿಲ್ಲವೆಂದು ನಿರ್ಮಾಪಕರಿಗೆ ತಿಳಿಸಿದ್ದಾರೆ. ರೀಮೇಕ್ ಹಕ್ಕುಗಳಿಗೆ ತುಸು ಹೆಚ್ಚೇ ಹಣವನ್ನು ಮಲೆಯಾಳಂ ನ ನಿರ್ಮಾಪಕ ಕೇಳುತ್ತಿರುವ ಕಾರಣ ರೀಮೇಕ್‌ ಚಿತ್ರದಲ್ಲಿ ದೊಡ್ಡ ನಟರು ನಟಿಸಿದರಷ್ಟೆ ಹೆಚ್ಚು ಹಣ ಗಳಿಸಲು ಸಾಧ್ಯವೆಂಬುದು ನಿರ್ಮಾಪಕರ ಲೆಕ್ಕಾಚಾರ ಹಾಗಾಗಿ ದೊಡ್ಡ ನಟರಿಗಾಗಿಯೇ ಹುಡುಕಾಟ ನಡೆಸಲಾಗುತ್ತಿದೆ.

ನಟಿಸಲು ಏಕೆ ಒಪ್ಪಲಿಲ್ಲ ಪವನ್ ಕಲ್ಯಾಣ್

ನಟಿಸಲು ಏಕೆ ಒಪ್ಪಲಿಲ್ಲ ಪವನ್ ಕಲ್ಯಾಣ್

ಡ್ರೈವಿಂಗ್ ಲೈಸೆನ್ಸ್ ಸಿನಿಮಾ ಒಬ್ಬ ಖ್ಯಾತ ನಟ ಮತ್ತು ಆತನ ಅಭಿಮಾನಿಯಾಗಿರುವ ಒಬ್ಬ ಆರ್‌ಟಿಓ ಅಧಿಕಾರಿಯ ನಡುವೆ ನಡೆವ ಕತೆಯಾಗಿದೆ. ಮೂಲ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್, ಸೂರಜ್ ವೆಂಜರಮೋಡು ನಟಿಸಿದ್ದಾರೆ. ಕತೆಯಲ್ಲಿ ನಾಯಕ ಪಾತ್ರಧಾರಿ ಕೆಲವು ಸನ್ನಿವೇಶದಲ್ಲಿ ಅಹಂಕಾರದಿಂದ ವರ್ತಿಸುತ್ತಾನೆ ಹಾಗಾಗಿ ಪವನ್ ಕಲ್ಯಾಣ್ ಈ ಸಿನಿಮಾದ ರೀಮೇಕ್‌ನಲ್ಲಿ ನಟಿಸಲು ಒಪ್ಪಲಿಲ್ಲ ಎನ್ನಲಾಗುತ್ತಿದೆ.

More from Filmibeat

English summary
Actor Pawan Kalyan rejected offer of acting in remake of Malayalam movie Driving License.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X