For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ ತೆರೆಯ ಮೇಲೆ ಪವನ್ ಕಲ್ಯಾಣ್ ಪುತ್ರಿ

  |

  ನಟ ಪವನ್ ಕಲ್ಯಾಣ್ ತೆಲುಗು ಸಿನಿಮಾರಂಗದ ದೊಡ್ಡ ಸ್ಟಾರ್ ನಟ. ಇದೀಗ ಪವನ್ ಕಲ್ಯಾಣ್ ಮಗಳು ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದಾಳೆ.

  ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಪುತ್ರಿ ಆದ್ಯ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆದ್ಯ ಟಿವಿ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಂಡಿದ್ದಾರೆ.

  ಜೀ ತೆಲುಗು ಚಾನೆಲ್‌ನಲ್ಲಿ ಪ್ರಸಾರವಾಗುವ 'ಡ್ರಾಮಾ ಜೂನಿಯರ್ಸ್' ರಿಯಾಲಿಟಿ ಶೋನಲ್ಲಿ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಜಡ್ಜ್ ಆಗಿದ್ದಾರೆ. ಇದೇ ಶೋಗೆ ಮಗಳು ಆದ್ಯ ಅನ್ನು ವಿಶೇಷ ಎಪಿಸೋಡ್‌ಗೆ ಕರೆತರಲಾಗಿದೆ.

  ರಿಯಾಲಿಟಿ ಶೋನಲ್ಲಿ ಆದ್ಯ

  ರಿಯಾಲಿಟಿ ಶೋನಲ್ಲಿ ಆದ್ಯ

  ರಿಯಾಲಿಟಿ ಶೋನ ಮುಂದಿನ ಎಪಿಸೋಡ್‌ನ ಪ್ರೋಮೋಗಳು ಹರಿದಾಡುತ್ತಿದ್ದು, ಪುಟಾಣಿ ಆದ್ಯ ಸ್ಟೇಜ್‌ ಮೇಲೆ ಬರುವ ವಿಡಿಯೋ ಹರಿದಾಡುತ್ತಿದೆ. ಜೊತೆಗೆ ರೇಣು ದೇಸಾಯಿ ಅವರು, 'ಆಕೆ ನನ್ನ ಮೆಚ್ಚಿನ ಮಗಳು' ಎಂದು ಭಾವುಕವಾಗುವ ದೃಶ್ಯಗಳು ಸಹ ಪ್ರೋಮೋನಲ್ಲಿ ಇವೆ.

  ಸಿನಿಮಾಗಳಲ್ಲಿ ನಟಿಸಿದ್ದ ರೇಣು ದೇಸಾಯಿ

  ಸಿನಿಮಾಗಳಲ್ಲಿ ನಟಿಸಿದ್ದ ರೇಣು ದೇಸಾಯಿ

  ರೇಣು ದೇಸಾಯಿ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು ಪವನ್ ಕಲ್ಯಾಣ್ ಜೊತೆಗೆ 'ಬದ್ರಿ', 'ಜಾನಿ' ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಪವನ್ ಅವರ ಹಲವು ಸಿನಿಮಾಗಳಿಗೆ ವಸ್ತ್ರ ವಿನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಪವನ್‌ಗೆ ಮೂರು ಮದುವೆ ನಾಲ್ವರು ಮಕ್ಕಳು

  ಪವನ್‌ಗೆ ಮೂರು ಮದುವೆ ನಾಲ್ವರು ಮಕ್ಕಳು

  ಪವನ್ ಕಲ್ಯಾಣ್‌ಗೆ ಮೂರು ಮದುವೆಗಳಾಗಿವೆ. ಮೊದಲನೇ ಬಾರಿಗೆ 1997 ರಲ್ಲಿ ನಂದಿನಿ ಜೊತೆಗೆ ವಿವಾಹವಾದರು ನಂತರ 2007 ರಲ್ಲಿ ವಿಚ್ಛೇಧನ ಪಡೆದರು. ನಂತರ ರೇಣು ದೇಸಾಯಿ ಅವರನ್ನು ವಿವಾಹವಾದರು. ರೇಣು-ಪವನ್‌ಗೆ ಇಬ್ಬರು ಮಕ್ಕಳಿದ್ದಾರೆ. ನಂತರ ರಷ್ಯದ ಅನ್ನ ಲೆಜ್ನೇವಾ ಅವರನ್ನು ಪವನ್ ಮದುವೆ ಆದರು ಅವರೊಟ್ಟಿಗೆ ಇಬ್ಬರು ಮಕ್ಕಳಿವೆ. ಪ್ರಸ್ತುತ ಅನ್ನ ಲೆಜ್ನೇವಾ ಜೊತೆ ದಾಂಪತ್ಯ ಸಾಗಿಸುತ್ತಿದ್ದಾರೆ ಪವನ್.

  ಸುಳ್ಳು ಸುದ್ದಿಯನ್ನು ನಂಬಬೇಡಿ ನನಗೇನೂ ಆಗಿಲ್ಲ ಎಂದ ನಟ ಅನಿರುದ್ಧ್ | Filmibeat Kannada
  ಆದ್ಯ ಮೇಲೆ ಪವನ್‌ಗೆ ವಿಶೇಷ ಪ್ರೀತಿ

  ಆದ್ಯ ಮೇಲೆ ಪವನ್‌ಗೆ ವಿಶೇಷ ಪ್ರೀತಿ

  ವಿಚ್ಛೇಧನ ಆದ ನಂತರ ಪವನ್ ಹಾಗೂ ರೇಣು ದೇಸಾಯಿ ಉತ್ತಮ ಸ್ನೇಹಿತರಾಗಿದ್ದಾರೆ. ಈ ಬಗ್ಗೆ ಸ್ವತಃ ರೇಣು ದೇಸಾಯಿ ಒಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ರೇಣು ಮಕ್ಕಳಾದ ಆದ್ಯ ಹಾಗೂ ಮಗ ಅಖಿರ ನಂದನ್ ಪವನ್ ಅವರನ್ನು ನೋಡಲು ಹೊಗುತ್ತಿರುತ್ತಾರೆ. ಪವನ್‌ಗೆ ಸಹ ಆದ್ಯ ಮೇಲೆ ವಿಶೇಷ ಪ್ರೀತಿ ಎಂದು ಪವನ್ ಜೊತೆಗೆ ವಕೀಲ್ ಸಾಬ್ ಸಿನಿಮಾದಲ್ಲಿ ನಟಿಸಿದ್ದ ನಟಿ ಅನನ್ಯಾ ನಾಗಲ್ಲ ಹೇಳಿದ್ದರು.

  English summary
  Pawan Kalyan-Renu Desai daughter Aadya seen on tv first time. She participated in a Telugu reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X