ಆಂಧ್ರ ಸಿಎಂ ಮಾತಿನ ಮೇಲೆ ನಿಂತಿದೆ ಪವನ್ ಕಲ್ಯಾಣ್ ಸಿನಿಮಾ ಭವಿಷ್ಯ!

ಆಂಧ್ರ ಪ್ರದೇಶದಲ್ಲಿ ಪವನ್ ಕಲ್ಯಾಣ್ ಹಾಗೂ ಆಂಧ್ರ ಸಿಎಂ ಜಗನ್ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಯುದ್ಧವೇ ನಡೆಯುತ್ತಿದೆ.

Recommended Video

ಜಗನ್ ಆರ್ಭಟಕ್ಕೆ ಹೆದರಿಕೊಂಡ್ರ ಪವನ್ ಕಲ್ಯಾಣ್

ಜಗನ್ ಸರ್ಕಾರವನ್ನು ಟೀಕಿಸಿದ್ದ ಪವನ್ ಕಲ್ಯಾಣ್‌ರ 'ವಕೀಲ್ ಸಾಬ್' ಸಿನಿಮಾ ಬಿಡುಗಡೆಗೆ ಜಗನ್ ಸಿನಿಮಾ ಸಮಸ್ಯೆ ನೀಡಿತ್ತು. ಆಗ ಪವನ್ ಅಭಿಮಾನಿಗಳು ಜಗನ್ ಸರ್ಕಾರದ ವಿರುದ್ಧ ನಿಂದನೆ ಆರಂಭಿಸಿದರು. ಬಳಿಕ ಜಗನ್ ಸರ್ಕಾರ, ಚಿತ್ರಮಂದಿರಗಳ ಟಿಕೆಟ್ ಬೆಲೆ ತಗ್ಗಿಸಿ ಚಿತ್ರರಂಗಕ್ಕೆ ಮರ್ಮಾಘಾತ ನೀಡಿದರು.

ಜಗನ್ ಸರ್ಕಾರದ ನಿಲವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪವನ್ ಕಲ್ಯಾಣ್, ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಾ ಜಗನ್ ಅನ್ನು ಏಕ ವನಚದಲ್ಲಿ ಬೈದರು. ಇದು ಜಗನ್ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿತು. ಆದರೆ ಈಗ ಅಂತಿಮ ನಗೆ ಬೀರುವ ಸಮಯ ಜಗನ್‌ರದ್ದಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.

ಜಗನ್ ರೆಡ್ಡಿ ನಿರ್ಣಯದ ಮೇಲೆ ಪವನ್ ಸಿನಿಮಾ ಭವಿಷ್ಯ

ಜಗನ್ ರೆಡ್ಡಿ ನಿರ್ಣಯದ ಮೇಲೆ ಪವನ್ ಸಿನಿಮಾ ಭವಿಷ್ಯ

ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾ ಬಿಡುಗಡೆ ಅಗಬೇಕಿದೆ. ಸಿನಿಮಾದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಎಲ್ಲವೂ ಪೂರ್ಣವಾಗಿದೆ ಆದರೆ ನಿರ್ಮಾಪಕರು ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲು ಹಿಂದೇಟು ಹಾಕುತ್ತಿದ್ದಾರೆ. ಸಿನಿಮಾ ಬಿಡುಗಡೆ ನಿರ್ಣಯ ನಮ್ಮದಲ್ಲ ಸಿಎಂ ಜಗನ್ ಮೋಹನ್ ರೆಡ್ಡಿಯದ್ದು ಎಂದು ನಿರ್ಮಾಪಕ ಹೇಳಿದ್ದಾರೆ. ಪವನ್ ಹಾಗೂ ಜಗನ್ ನಡುವೆ ಈಗಾಗಲೇ ರಾಜಕೀಯ ಜಗಳ ಹದ್ದು ಮೀರಿದ್ದು, ಈ ನಡುವೆ ಪವನ್ ಸಿನಿಮಾ ಬಿಡುಗಡೆ ವಿಷಯದಲ್ಲಿ ಜಗನ್ ನಿರ್ಣಯ ಅಂತಿಮ ಎಂದು ಹೇಳುವ ಮೂಲಕ ಈ ಇಬ್ಬರು ಸೆಲೆಬ್ರಿಟಿಗಳ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣ ಯುದ್ಧಕ್ಕೆ ನಿರ್ಮಾಪಕರೆ ನಾಂದಿ ಹಾಡಿದಂತಾಗಿದೆ.

100% ಆಕ್ಯುಪೆನ್ಸಿ ಕೊಟ್ಟರಷ್ಟೆ ಸಿನಿಮಾ ಬಿಡುಗಡೆ

100% ಆಕ್ಯುಪೆನ್ಸಿ ಕೊಟ್ಟರಷ್ಟೆ ಸಿನಿಮಾ ಬಿಡುಗಡೆ

'ಭೀಮ್ಲ ನಾಯಕ್' ಸಿನಿಮಾವನ್ನು ನಾಗವಂಶಿ ನಿರ್ಮಾಣ ಮಾಡಿದ್ದು, ಬೇರೆ ಸಿನಿಮಾದ ಪ್ರೆಸ್‌ ಮೀಟ್‌ನಲ್ಲಿ ಮಾಧ್ಯಮದವರು, 'ಭೀಮ್ಲ ನಾಯಕ್' ಬಿಡುಗಡೆ ಬಗ್ಗೆ ಪ್ರಶ್ನಿಸಿದಾಗ, ''ಈ ಪ್ರಶ್ನೆಯನ್ನು ನೀವು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಕೇಳಬೇಕು. ಆಂಧ್ರದಲ್ಲಿ ಯಾವಾಗ 50% ಆಕ್ಯುಪೆನ್ಸಿ ನಿರ್ಣಯವನ್ನು ಹಿಂತೆಗೆದುಕೊಂಡು 100% ಆಕ್ಯುಪೆನ್ಸಿಗೆ ಅವಕಾಶ ಕೊಡುತ್ತಾರೊ ಆವಾಗಲಷ್ಟೆ ಸಿನಿಮಾ ಬಿಡುಗಡೆ ಮಾಡುತ್ತೇವೆ. ಒಟ್ಟಾರೆ 50% ಆಕ್ಯುಪೆನ್ಸಿ ನಿರ್ಣಯ ಹಿಂಪಡೆಯುವವರೆಗೆ ನಾವು ಸಿನಿಮಾ ಬಿಡುಗಡೆ ಮಾಡುವುದಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ 1 ಕ್ಕೆ ಸಿನಿಮಾ ಬಿಡುಗಡೆ ಸಾಧ್ಯತೆ

ಏಪ್ರಿಲ್ 1 ಕ್ಕೆ ಸಿನಿಮಾ ಬಿಡುಗಡೆ ಸಾಧ್ಯತೆ

ಫೆಬ್ರವರಿ 25ಕ್ಕೆ ಚಿತ್ರಮಂದಿರಗಳ ಮೇಲೆ ಹೇರಲಾಗಿರುವ 50% ಆಕ್ಯುಪೆನ್ಸಿ ಆದೇಶವನ್ನು ಸರ್ಕಾರ ಹಿಂಪಡೆಯಲಿದೆ ಎಂಬ ಬಗ್ಗೆ ಮಾಹಿತಿ ಇದೆ. ಹಾಗೇನಾದರೂ ಆದರೆ ನಾವು ಏಪ್ರಿಲ್ 1 ಅಥವಾ ಏಪ್ರಿಲ್ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇನೆ ಎಂದು ನಿರ್ಮಾಪಕ ನಾಗವಂಶಿ ಹೇಳಿದ್ದಾರೆ. ಈ ಮೊದಲು ಜನವರಿ 12ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ 'ಆರ್‌ಆರ್‌ಆರ್' ಸಿನಿಮಾ ಬಿಡುಗಡೆ ಆಗುತ್ತಿದ್ದ ಕಾರಣಕ್ಕೆ ಸಿನಿಮಾ ಬಿಡುಗಡೆ ಮುಂದೂಡಲಾಯ್ತು. ಬಳಿಕ ಕೊರೊನಾ ಕಾರಣ ನೀಡಿ 'ಆರ್‌ಆರ್‌ಆರ್' ಸಿನಿಮಾ ಬಿಡುಗಡೆ ಸಹ ಮುಂದೂಡಲಾಯ್ತು.

'ಅಯ್ಯಪ್ಪುನಂ ಕೋಶಿಯುಂ' ಸಿನಿಮಾದ ರೀಮೇಕ್

'ಅಯ್ಯಪ್ಪುನಂ ಕೋಶಿಯುಂ' ಸಿನಿಮಾದ ರೀಮೇಕ್

ಪವನ್ ಕಲ್ಯಾಣ್ ನಟಿಸಿರುವ 'ಭೀಮ್ಲ ನಾಯಕ್' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದೆ. 'ಭೀಮ್ಲ ನಾಯಕ್' ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ರಾಣಾ ದಗ್ಗುಬಾಟಿ ಸಹ ನಟಿಸಿದ್ದಾರೆ. ಪವನ್ ಕಲ್ಯಾಣ್‌ ಎದುರು ನಾಯಕಿಯಾಗಿ ಕನ್ನಡಗಿ ನಿತ್ಯಾ ಮೆನನ್ ಇದ್ದಾರೆ. ರಾಣಾ ದಗ್ಗುಬಾಟಿ ಜೊತೆ ಸಂಯುಕ್ತಾ ಮೆನನ್, ಇತರೆ ಪಾತ್ರಗಳಲ್ಲಿ ಸಮುದ್ರಕಿಣಿ, ಬ್ರಹ್ಮಾನಂದಂ, ಮುರಳಿ ಶರ್ಮಾ, ರಘು ಬಾಬು ಇದ್ದಾರೆ. ಸಿನಿಮಾವನ್ನು ಹೊಸ ನಿರ್ದೇಶಕ ಸಾಗರ್ ಕೆ ಚಂದ್ರ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆ ಬರೆದಿರುವುದು ಹಿರಿಯ ಹಿಟ್ ನಿರ್ದೇಶಕ ತ್ರಿವಿಕ್ರಮ್.

More from Filmibeat

English summary
Pawan Kalyan starer Bheemla Nayak movie release is based on CM Jagan's decision said movie producer Nagavamsi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X