ಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಧೂಳಿಪಟ: ಪವನ್ ಫ್ಯಾನ್ಸ್ 'ಜಲ್ಸಾ' ಶುರು

ಮಹೇಶ್‌ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿ 'ಪೋಕಿರಿ' ಸಿನಿಮಾ ರೀ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಇದೀಗ ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ 'ಜಲ್ಸಾ' ಸಿನಿಮಾವನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಈಗಾಗಲೇ ಶೋಗಳ ವಿಚಾರದಲ್ಲೇ ಟಾಲಿವುಡ್ ಪ್ರಿನ್ಸ್ ಸಿನಿಮಾ ದಾಖಲೆಯಲ್ಲಿ ಪವರ್ ಸ್ಟಾರ್ ಸಿನಿಮಾ ಮುರಿದಿದೆ.

ಸ್ಟಾರ್‌ಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಹಳೇ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಹೊಸ ತಂತ್ರಜ್ಞಾನದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ತರುವ ಟ್ರೆಂಡ್ ಟಾಲಿವುಡ್‌ನಲ್ಲಿ ಜೋರಾಗಿದೆ. ಪುರಿ ಜಗನ್ನಾಥ್ ನಿರ್ದೇಶನದ 'ಪೋಕಿರಿ' ಸಿನಿಮಾ ಆಗಸ್ಟ್ 9ಕ್ಕೆ 4K ವರ್ಷನ್‌ನಲ್ಲಿ ರಿಲೀಸ್‌ ಆಗಿ ಅಭಿಮಾನಿಗಳನ್ನು ರಂಜಿಸಿತ್ತು. ಎಲ್ಲಾ ಶೋಗಳು ಹೌಸ್‌ಫುಲ್ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ಪವನ್ ಕಲ್ಯಾಣ್ ಹುಟ್ಟುಹಬ್ಬ(ಸೆಪ್ಟೆಂಬರ್ 2)ಕ್ಕೆ ತ್ರಿವಿಕ್ರಮ್ ನಿರ್ದೇಶನದಲ್ಲಿ ಪವರ್ ಸ್ಟಾರ್ ನಟನೆಯ 'ಜಲ್ಸಾ' ಚಿತ್ರವನ್ನು ಮತ್ತೆ ರಿಲೀಸ್ ಮಾಡಲಾಗುತ್ತಿದೆ.

ವಿಶ್ವದಾದ್ಯಂತ 'ಜಲ್ಸಾ' ಚಿತ್ರದ 500ಕ್ಕೂ ಅಧಿಕ ಶೋಗಳನ್ನು ಏರ್ಪಡಿಸಲಾಗಿದೆ. ಈಗಾಗಲೇ ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. 'ಪೋಕಿರಿ' ಸಿನಿಮಾ 380ಕ್ಕೂ ಅಧಿಕ ಶೋ ಕಂಡಿತ್ತು. ಆ ದಾಖಲೆಯನ್ನು ಈಗಾಗಲೇ ಪವನ್ ಸಿನಿಮಾ ಮುರಿದಿದೆ. ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್‌ಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಮತ್ತಷ್ಟು ಶೋಗಳನ್ನು ಹಾಕಲು ಅಭಿಮಾನಿಗಳು ಚಿಂತನೆ ನಡೆಸಿದ್ದಾರೆ.

'ಜಲ್ಸಾ' 4k ವರ್ಷನ್ ಟ್ರೈಲರ್ ರಿಲೀಸ್

'ಜಲ್ಸಾ' 4k ವರ್ಷನ್ ಟ್ರೈಲರ್ ರಿಲೀಸ್

2008ರಲ್ಲಿ 'ಜಲ್ಸಾ' ಸಿನಿಮಾ ಬಿಡುಗಡೆಯಾಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅವತ್ತಿನ ಕಾಲಕ್ಕೆ ಟ್ರೈಲರ್, ಟೀಸರ್ ಕಾನ್ಸೆಪ್ಟ್ ಇಷ್ಟು ಜೋರಾಗಿ ಇರಲಿಲ್ಲ. ಇದೀಗ ಚಿತ್ರವನ್ನ ರೀರಿಲೀಸ್ ಮಾಡುತ್ತಿರುವುದರಿಂದ ಜಬರ್ದಸ್ತ್‌ ಟ್ರೈಲರ್ ಕಟ್ ಮಾಡಿ ರಿಲೀಸ್ ಮಾಡಲಾಗಿದೆ. ದೇವಿಶ್ರೀ ಪ್ರಸಾದ್ ಬಿಜಿಎಂ ಹಿನ್ನೆಲೆಯಲ್ಲಿ 4k ಡಾಲ್ಬಿ ವರ್ಷನ್ ಟ್ರೈಲರ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಇಲಿಯಾನಾ, ಪಾರ್ವತಿ ಮೆಲ್ಟನ್ ನಾಯಕಿಯರಾಗಿ ಚಿತ್ರದಲ್ಲಿ ನಟಿಸಿದ್ದಾರೆ.

'ಜಲ್ಸಾ' ಚಿತ್ರಕ್ಕೆ ಮಹೇಶ್ ಬಾಬು ವಾಯ್ಸ್

'ಜಲ್ಸಾ' ಚಿತ್ರಕ್ಕೆ ಮಹೇಶ್ ಬಾಬು ವಾಯ್ಸ್

ಟಾಲಿವುಡ್‌ನಲ್ಲಿ ಕ್ರೇಜ್ ವಿಚಾರದಲ್ಲಿ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಇಬ್ಬರು ಸರಿ ಸಮಾನರು. ಸ್ಟಾರ್‌ಗಳ ನಡುವೆ ಆತ್ಮೀತ ಒಡನಾಟವಿದೆ. ಆದರೆ ಅಭಿಮಾನಿಗಳು ಮಾತ್ರ ಯಾರು ಹೆಚ್ಚು ಯಾರು ಕಮ್ಮಿ ಎಂದು ಕಿತ್ತಾಟ ನಡೆಸುತ್ತಲೇ ಇರುತ್ತಾರೆ. ಅಚ್ಚರಿ ಅಂದರೆ 'ಜಲ್ಸಾ' ಸ್ವತಃ ಮಹೇಶ್ ಬಾಬು ವಾಯ್ಸ್ ಓವರ್ ಕೊಟ್ಟಿದ್ದರು. ಶೇಖರ್ ಪಾತ್ರದಲ್ಲಿ ಮಹೇಶ್‌ ಬಾಬು ತಮ್ಮ ಧ್ವನಿಯ ಮೂಲಕ ಸಂಜಯ್ ಸಾಹು ಕಥೆಯನ್ನು ನಿರೂಪಿಸುತ್ತಾ ಹೋಗುತ್ತಾರೆ.

ಥಿಯೇಟರ್‌ ಅಂಗಳದಲ್ಲಿ ಸೆಲೆಬ್ರೇಷನ್‌ಗೆ ಸಿದ್ಧತೆ

ಥಿಯೇಟರ್‌ ಅಂಗಳದಲ್ಲಿ ಸೆಲೆಬ್ರೇಷನ್‌ಗೆ ಸಿದ್ಧತೆ

ಹೊಸ ಸಿನಿಮಾ ರಿಲೀಸ್ ಆದಾಗ ಹೇಗೆ ಥಿಯೇಟರ್‌ ಅಂಗಳಲ್ಲಿ ಸೆಲೆಬ್ರೇಷನ್ ಮಾಡಿ ಸಂಭ್ರಮಿಸುತ್ತಾರೋ ಅದೇ ರೀತಿ 'ಜಲ್ಸಾ' ರೀ ರಿಲೀಸ್‌ ಸೆಲೆಬ್ರೇಷನ್ ಪ್ಲ್ಯಾನ್ ನಡೀತಿದೆ. ಈಗಾಗಲೇ ಆನ್‌ಲೈನ್‌ ಟಿಕೆಟ್ ಬುಕ್ ಮಾಡಿಕೊಂಡಿರುವ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ.

ಪ್ರಭಾಸ್ ಬರ್ತ್‌ಡೇಗೆ ಯಾವ ಸಿನಿಮಾ ರೀರಿಲೀಸ್?

ಪ್ರಭಾಸ್ ಬರ್ತ್‌ಡೇಗೆ ಯಾವ ಸಿನಿಮಾ ರೀರಿಲೀಸ್?

ಮಹೇಶ್‌ ಬಾಬು ಹುಟ್ಟುಹಬ್ಬಕ್ಕೆ 'ಪೋಕಿರಿ' ಸಿನಿಮಾ ಹೊಸ ರೂಪದಲ್ಲಿ ಅಭಿಮಾನಿಗಳ ಮುಂದೆ ಬಂದರೆ ಚಿರಂಜೀವಿ ಹುಟ್ಟುಹಬ್ಬಕ್ಕೆ 'ಘರಾನಾ ಮೊಗುಡು' ಸಿನಿಮಾ ಮತ್ತೊಮ್ಮೆ ತೆರೆಕಂಡಿತ್ತು. ಇದೀಗ 'ಜಲ್ಸಾ' ಸಿನಿಮಾ ರೀ ರಿಲೀಸ್‌ಗೆ ಸಿದ್ಧತೆ ಜೋರಾಗಿದೆ. ಮತ್ತೊಂದ್ಕಡೆ ಅಕ್ಟೋಬರ್ 23ಕ್ಕೆ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಬಿಲ್ಲಾ' ಅಥವಾ 'ಛತ್ರಪತಿ' ಚಿತ್ರವನ್ನು ರೀರಿಲೀಸ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಶೋ ಹಾಗೂ ಕಲೆಕ್ಷನ್ ವಿಚಾರದಲ್ಲಿ 'ಜಲ್ಸಾ' ದಾಖಲೆಯನ್ನು ಪ್ರಭಾಸ್ ಸಿನಿಮಾ ಮುರಿಯುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

More from Filmibeat

English summary
Pawan Kalyan's Jalsa Beats Mahesh Babu's Pokiri Special Screening Record. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X