20 ವರ್ಷಗಳ ಬಳಿಕ ಮರು ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ ದೂಳೆಬ್ಬಿಸಿದ 'ಖುಷಿ'

ಕೋವಿಡ್ ಸಮಯದಲ್ಲಿ ಚಿತ್ರಮಂದಿರಗಳ ಮೇಲೆ ನಿಯಮಗಳನ್ನು ಹೇರಲಾಗಿದ್ದ ಕಾರಣ ಹಳೆಯ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಆಂಧ್ರ-ತೆಲಂಗಾಣಗಳಲ್ಲಿ ಇದೇ ಟ್ರೆಂಡ್ ಆಗಿಬಿಟ್ಟಿದ್ದು, ಸ್ಟಾರ್ ನಟರುಗಳು ಸೂಪರ್ ಹಿಟ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

ಮಹೇಶ್ ಬಾಬು ನಟನೆಯ 'ಪೋಕಿರಿ' ಸಿನಿಮಾ ಮರು ಬಿಡುಗಡೆ ಆಗಿ ಕೋಟ್ಯಂತರ ರುಪಾಯಿ ಗೆದ್ದ ಬೆನ್ನಲ್ಲೆ, ಪ್ರಭಾಸ್, ಬಾಲಕೃಷ್ಣ ಅವರುಗಳ ಸಿನಿಮಾಗಳು ಮರು ಬಿಡುಗಡೆ ಆಗಿ ಸೂಪರ್ ಹಿಟ್ ಆದವು. ಇದೀಗ ನಟ ಪವನ್ ಕಲ್ಯಾಣ್‌ರ ಹಳೆಯ ಸಿನಿಮಾ ಒಂದು ಮರು ಬಿಡುಗಡೆ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ದೂಳೆಭ್ಬಿಸಿದೆ.

ಇಪ್ಪತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ 'ಖುಷಿ' ಸಿನಿಮಾ ಇದೀಗ ಮರು ಬಿಡುಗಡೆ ಆಗಿದ್ದು ಸಿನಿಮಾ ಮರು ಬಿಡುಗಡೆಯಲ್ಲಿಯೂ ಸೂಪರ್ ಹಿಟ್ ಆಗಿದೆ. 'ಖುಷಿ' ಸಿನಿಮಾ ಬಿಡುಗಡೆ ಆದ ಮೊದಲ ದಿನವೇ 3.15 ಕೋಟಿ ರುಪಾಯಿ ಹಣ ಗಳಿಸಿದೆ. ಮರು ಬಿಡುಗಡೆಯಲ್ಲಿ ಮೊದಲ ದಿನ ಇಷ್ಟೋಂದು ಮೊತ್ತ ಗಳಿಸಿದ ಮತ್ತೊಂದು ಸಿನಿಮಾ ಇಲ್ಲ.

Pawan Kalyans Khusi Movie Collects 3.17 Crore Rs on First Day Of Its Re Release After 20 Years

ಕೆಲವು ದಿನಗಳ ಹಿಂದೆ ಪವನ್ ಕಲ್ಯಾಣ್ ನಟನೆಯ 'ಜಲ್ಸಾ' ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾ ಮೊದಲ ದಿನ ಸುಮಾರು 2.57 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ಈ ದಾಖಲೆಯನ್ನು 'ಖುಷಿ' ಅಳಿಸಿ ಹಾಕಿದೆ.

ಇದರ ಹಿಂದೆ ಬಿಡುಗಡೆ ಆಗಿದ್ದ 'ಜಲ್ಸಾ' ಸಿನಿಮಾ 2.57 ಕೋಟಿ ಹಣ ಗಳಿಸಿತ್ತು. ಅದರ ಹಿಂದೆ ಬಿಡುಗಡೆ ಆಗಿದ್ದ ಮಹೇಶ್ ಬಾಬು ನಟನೆಯ 'ಪೋಕಿರಿ' ಸಿನಿಮಾ 1.52 ಕೋಟಿ ಗಳಿಸಿತ್ತು. ಬಾಲಕೃಷ್ಣರ ಚೆನ್ನಕೇಶವರೆಡ್ಡಿ ಸಿನಿಮಾ 64 ಲಕ್ಷ ರುಪಾಯಿ ಗಳಿಸಿತ್ತು. ಪ್ರಭಾಸ್‌ರ 'ಬಿಲ್ಲ' 84 ಲಕ್ಷ ಗಳಿಸಿದ್ದರೆ, 'ವರ್ಷಂ' ಸಿನಿಮಾ 15 ಲಕ್ಷ ಹಣ ಗಳಿಸಿತ್ತು.

ಪವನ್ ಕಲ್ಯಾಣ್, ಭೂಮಿಕಾ ಚಾವ್ಲಾ ನಟನೆಯ 'ಖುಷಿ' ಸಿನಿಮಾ 2001 ರಲ್ಲಿ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ತೆಲುಗಿನ ಕಲ್ಟ್ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾಗಿ ಇಂದಿಗೂ ನೆಲೆ ನಿಂತಿದೆ 'ಖುಷಿ'. ಕಾಲೇಜು ಪ್ರೇಮಕತೆಯ ಈ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಈಗಲೂ ಸೂಪರ್-ಡೂಪರ್ ಹಿಟ್ ಆಗಿದೆ.

More from Filmibeat

English summary
Pawan Kalyan-Bhumika Chawla's Khushi movie collects 3.17 crore rs on first day of its re release after 20 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X