For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ ಎರಡರ 'ಪವರ್ ಕ್ರಾಂತಿ'

  By ರವೀಂದ್ರ ಕೋಟಕಿ
  |

  ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ದಿನ (ಆಗಸ್ಟ್ 22) "ಭೋಲಾ ಶಂಕರ್", "ಗಾಡ್ ಫಾದರ್", "ಮೆಗಾ 154" ಚಿತ್ರಗಳ ಫೋಟೋಗಳು, ವಿಡಿಯೋಗಳು, ಶೀರ್ಷಿಕೆ ಜಾಹೀರಾತುಗಳ ಸದ್ದನ್ನು ನೋಡಿದ್ದೇವೆ.

  ಈಗ ಮುಂದಿನ ಸರದಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರದ್ದು. ಪವರ್ ಸ್ಟಾರ್ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ಅಲ್ಲದೆ, ಅವರ ಸಿನಿಮಾ ಅಪ್‌ಡೇಟ್‌ಗಳು ಅವರ ಹುಟ್ಟುಹಬ್ಬದಂದು ಅಂದರೆ ಸೆಪ್ಟೆಂಬರ್ 2 ರಂದು ಯಾವ ರೇಂಜ್‌ನಲ್ಲಿರುತ್ತವೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  ಈಗಾಗಲೇ, ನಿರ್ದೇಶಕ ಹರೀಶ್ ಶಂಕರ್ ತಮ್ಮ ಚಿತ್ರಕ್ಕಾಗಿ ಪವನ್ ಕಲ್ಯಾಣ್ ಜೊತೆ ಫೋಟೋಶೂಟ್ ಮುಗಿಸಿದ್ದಾರೆ. 'ಸೆಪ್ಟೆಂಬರ್ 2 ರಂದು (ಪವನ್ ಕಲ್ಯಾಣ್ ಹುಟ್ಟುಹಬ್ಬ) ಚಿತ್ರದ ಶೀರ್ಷಿಕೆಯ ಪೋಸ್ಟರ್ ಬಿಡುಗಡೆ ಮಾಡಲು ನಾವು ಎದುರುನೋಡುತ್ತಿದ್ದೇವೆ' ಅಂತ ನಿರ್ದೇಶಕ ಹರಿಶಂಕರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

  ಅಲ್ಲದೆ, ಕ್ರಿಶ್ ಅವರ 'ಹರಿ ಹರಿ ವೀರಮಲ್ಲು' ಸಿನಿಮಾ ಅಪ್‌ಡೇಟ್ ಸಿದ್ಧಪಡಿಸಿದ್ದಾರೆ. ನಿರ್ದೇಶಕ ಸುರೇಂದರ್ ರೆಡ್ಡಿ - ನಿರ್ಮಾಪಕ ರಾಮ್ ತಲ್ಲೂರಿ ಅವರು ಪವನ್ ಕಲ್ಯಾಣ್ ಜೊತೆ

  ನಿರ್ಮಿಸುತ್ತಿರುವ ಚಿತ್ರದ ಯಾವುದಾದರೂ ಮಾಹಿತಿ ಕೂಡ ಅಂದೆ ಸಿಗಬಹುದು ಅಂತ ಪವನ್ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

  ಅಪ್‌ಡೇಟ್ ನೀಡಲು ತಯಾರಾಗಿದ್ದಾರೆ

  ಅಪ್‌ಡೇಟ್ ನೀಡಲು ತಯಾರಾಗಿದ್ದಾರೆ

  ಆದರೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ಯಾವ ತರದ ಅಪ್ಡೇಟ್ ಆ ದಿನ ದೊರೆಯುತ್ತದೆ ಎಂದು ಖಾತ್ರಿಯಾಗಿಲ್ಲ. ಆದರೆ ಕ್ರಿಷ್ ಮತ್ತು ಹರೀಶ್ ಶಂಕರ್ ತಮ್ಮ-ತಮ್ಮ ಚಿತ್ರಗಳ ಅಪ್ಡೇಟ್ ನೀಡಲು ಸಿದ್ಧರಾಗಿದ್ದಾರೆ. ಆದರೆ ಅದಕ್ಕಾಗಿ ಅವರು ಮೊದಲು ಪವನ್ ಕಲ್ಯಾಣ್ ಅವರಿಂದ ಗ್ರೀನ್ ಸಿಗ್ನಲ್ ಪಡೆಯಬೇಕಾಗುತ್ತದೆ.

  ಸೆಪ್ಟೆಂಬರ್ 2ಕ್ಕೆ ಭೀಮ್ಲ ನಾಯಕ್ ಮೊದಲ ಹಾಡು

  ಸೆಪ್ಟೆಂಬರ್ 2ಕ್ಕೆ ಭೀಮ್ಲ ನಾಯಕ್ ಮೊದಲ ಹಾಡು

  ಖ್ಯಾತ ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕತೆ, ಡೈಲಾಗ್ಸ್ ಬರೆದ "ಭೀಮ್ಲಾ ನಾಯಕ್" ಚಿತ್ರದಿಂದ ಮೊದಲ ಹಾಡು ಅಂದೆ ಬಿಡುಗಡೆಯಾಗುತ್ತಿದೆ. ತಮನ್ ಸಂಯೋಜಿಸಿದ ಮೊದಲ ಹಾಡನ್ನು ಸೆಪ್ಟೆಂಬರ್ 2 ರಂದು ಬಿಡುಗಡೆ ಮಾಡುವುದಾಗಿ ಆ ಚಿತ್ರದ ತಯಾರಕರು ಈಗಾಗಲೇ ಘೋಷಿಸಿದ್ದಾರೆ. ಒಟ್ಟಾರೆ ಸೆಪ್ಟೆಂಬರ್ 2ರ ದಿನಕ್ಕಾಗಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

  ಅಯ್ಯಪ್ಪನುಂ ಕೋಶಿಯುಂ ರೀಮೇಕ್

  ಅಯ್ಯಪ್ಪನುಂ ಕೋಶಿಯುಂ ರೀಮೇಕ್

  ಪವನ್ ಕಲ್ಯಾನ್ ನಟನೆಯ 'ಭೀಮ್ಲಾ ನಾಯಕ್' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದ್ದು ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ರಾಣಾ ದಗ್ಗುಬಾಟಿ ಸಹ ನಟಿಸುತ್ತಿದ್ದಾರೆ. ಸಿನಿಮಾವನ್ನು ಸಾಗರ್ ಕೆ ಚಂದ್ರ ನಿರ್ದೇಶನ ಮಾಡುತ್ತಿದ್ದು, ನಿರ್ಮಾಣವನ್ನು ಸೂರ್ಯ ದೇವರ ನಾಗ ವಂಶಿ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರಕತೆ ಬರೆದಿರುವುದು ತೆಲುಗಿನ ಖ್ಯಾತ ನಿರ್ದೇಶಕ ತ್ರಿವಿಕ್ರಮ್. ಈ ಸಿನಿಮಾದ ಸಣ್ಣ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆದಿ ಸಾಕಷ್ಟು ವೈರಲ್ ಆಗಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್‌ಗೆ ನಾಯಕಿಯಾಗಿ ಐಶ್ವರ್ಯಾ ರಾಜೇಶ್ ಮತ್ತು ರಾಣಾ ದಗ್ಗುಬಾಟಿ ನಾಯಕಿಯಾಗಿ ನಿತ್ಯಾ ಮೆನನ್ ನಟಿಸುತ್ತಿದ್ದಾರೆ.

  ಹೊಸ ಸಿನಿಮಾಗಳ ಮಾಹಿತಿ

  ಹೊಸ ಸಿನಿಮಾಗಳ ಮಾಹಿತಿ

  'ಭೀಮ್ಲ ನಾಯಕ್' ಬಳಿಕ ಇನ್ನೂ ಎರಡು ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ಬ್ಯುಸಿಯಾಗಿದ್ದಾರೆ. ಕ್ರಿಶ್ ನಿರ್ದೇಶನದ ಐತಿಹಾಸಿಕ ಕತೆ ಹೊಂದಿರುವ 'ಹರಿಹರ ವೀರಮಲ್ಲು' ಸಿನಿಮಾದಲ್ಲಿ ಪವನ್ ನಟಿಸುತ್ತಿದ್ದಾರೆ. ಅದಾದ ಬಳಿಕ ಹ್ಯಾರಿಸ್ ಶಂಕರ್ ನಿರ್ದೇಶನದ ಒಂದು ಸಿನಿಮಾ ಹಾಗೂ ಸುರೇಂದ್ರ ರೆಡ್ಡಿ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಎರಡೂ ಸಿನಿಮಾಗಳಿಗೆ ಹೆಸರಿಟ್ಟಿಲ್ಲ. ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನದಂದು ಈ ಎರಡೂ ಸಿನಿಮಾಗಳ ಹೆಸರು ಘೋಷಿಸುವ ಸಾಧ್ಯತೆ ಇದೆ.

  English summary
  September 2 is Pawan Kalyan's birthday. On that day many movies which feature Pawan Kalyan will give update.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X