ಕರೀ ಕೋಟು ಧರಿಸಲು ಪವನ್ ಕಲ್ಯಾಣ್ ತಯಾರು
ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯದಿಂದ ಬಿಡುವು ಪಡೆದುಕೊಂಡು ಮತ್ತೆ ಬೆಳ್ಳಿತೆರೆಗೆ ಬರಲು ಸರ್ವ ಸಜ್ಜಾಗಿದ್ದಾರೆ.
ಬಿಜೆಪಿಯೊಂದಿಗೆ ಕೈ ಮಿಲಾಯಿಸಿ ಹೊಸ ಆಂಧ್ರ-ತೆಲಂಗಾಣ ರಾಜಕೀಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹೆಣಗಾಡುತ್ತಿರುವ ಪವನ್ ಕಲ್ಯಾಣ್ ತಮ್ಮ ಸಿನಿ ಅಭಿಮಾನಿಗಳಿಂದ ಕೊಂಚ ದೂರವೇ ಆಗಿದ್ದರು. ಆದರೆ ಈಗ ಮತ್ತೆ ಬಣ್ಣ ಹಚ್ಚಿ ಬೆಳ್ಳಿ ತೆರೆಯ ಮೇಲೆ ಬರುತ್ತಿದ್ದಾರೆ.
ಪವನ್ ಕಲ್ಯಾಣ್ ಹೊಸ ಚಿತ್ರ 'ವಕೀಲ್ ಸಾಬ್' ಚಿತ್ರೀಕರಣ ಭರದಿಂದ ಸಾಗಿದ್ದು, ಅದರ ಪೋಸ್ಟರ್ ಇಂದು ಬಿಡುಗಡೆ ಆಗಿದೆ. ಅಸ್ತವ್ಯಸ್ಥ ಪರಿಸ್ಥಿತಿಯಲ್ಲಿ ಮಲಗಿ ಪುಸ್ತಕ ಓದುತ್ತಿರುವ ಪವನ್ ಕಲ್ಯಾಣ್ ಲುಕ್ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.

ವಕೀಲನ ಪಾತ್ರದಲ್ಲಿ ಪವನ್ ಕಲ್ಯಾಣ್
ವೆಂಕಟೇಶ್ವರ ಕ್ರಿಯೇಶನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ವಕೀಲನ ಪಾತ್ರ ನಿರ್ವಹಿಸಲಿದ್ದಾರೆ. ಅಮಿತಾಬ್ ಬಚ್ಚನ್ ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಪಿಂಕ್' ನ ರೀಮೇಕ್ ಇದಾಗಿರಲಿದೆ.

ರಗಡ್ ಲುಕ್ ಮುಂದುವರೆಯಲಿದೆ
ಆದರೆ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅವರು ಗಂಭೀರ ವಕೀಲನ ಪಾತ್ರ ನಿರ್ವಹಿಸಿದ್ದರೆ 'ವಕೀಲ್ ಸಾಬ್' ನಲ್ಲಿ ಪವನ್ ಲೇಜಿ, ತಮಾಷೆಯ ಜೊತೆಗೆ ಆಕ್ಷನ್ ವಕೀಲನ ಪಾತ್ರ ನಿರ್ವಹಿಸಲಿದ್ದಾರೆ. ಆದರೆ ಕತೆ ಒಂದೇ ಆಗಿರಲಿದೆ.

ಸಾಮಾಜಿಕ ಕಥಾಹಂದರದ ಚಿತ್ರಗಳೇ ಪವನ್ ಆಯ್ಕೆ
ರಾಜಕೀಯದಲ್ಲಿ ಅವಕಾಶ ಹುಡುಕುತ್ತಿರುವ ಪವನ್ ಕಲ್ಯಾಣ್ ಸಾಮಾಜಿಕ ಕಥಾಹಂದರ ಇರುವ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿಯೂ ಸಹ ಅವರು ಮಹಿಳೆಯರ ಪರ ನಿಂತು, ಪುರುಷರಿಗೆ ಮಹಿಳೆಯರ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ಪ್ರಶ್ನೆ ಮಾಡಲಿದ್ದಾರೆ. ಮಹಿಳಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲಿದ್ದಾರೆ.

ಎರಡು ವರ್ಷದಿಂದ ಬಿಡುವು ಪಡೆದಿದ್ದ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ಎರಡು ವರ್ಷದಿಂದ ಚಿತ್ರರಂಗದಿಂದ ದೂರ ಉಳಿದು ಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಅವರ ಕೊನೆಯ ಚಿತ್ರ ಅಜ್ಞಾತವಾಸಿ 2008 ರಲ್ಲಿ ತೆರೆ ಕಂಡಿತ್ತು. ಈ ಚಿತ್ರ ಉತ್ತಮ ಪ್ರದರ್ಶನವನ್ನು ಕಾಣಲಿಲ್ಲ.


Click it and Unblock the Notifications











