ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ವಕೀಲ್ ಸಾಬ್ ಟೀಸರ್‌ಗೆ ದಿನಾಂಕ ನಿಗದಿ

ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು 'ವಕೀಲ್ ಸಾಬ್' ಚಿತ್ರತಂಡ ನೀಡಿದೆ. ವಕೀಲ್ ಸಾಬ್ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಮತ್ತು ಸಮಯವನ್ನು ಬಹಿರಂಗಗೊಳಿಸಿದೆ ಚಿತ್ರತಂಡ.

ಪವನ್ ಕಲ್ಯಾಣ್ ರೌಡಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ವಕೀಲ್ ಸಾಬ್' ಸಿನಿಮಾದ ಟೀಸರ್ ಅನ್ನು ಜನವರಿ 14 ರಂದು ಸಂಜೆ 6:03 ನಿಮಿಷಕ್ಕೆ ಬಿಡುಗಡೆ ಮಾಡಲಾಗುವುದಂತೆ.

ಮೂರು ವರ್ಷಗಳ ಗ್ಯಾಪ್ ಬಳಿಕ ಪವನ್ ಕಲ್ಯಾಣ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ 'ವಕೀಲ್ ಸಾಬ್' ಹಾಗಾಗಿ ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚು.

Pawan Kalyans Vakeel Saab Movie Teaser Will Release On January 14

ಹಿಂದಿಯ 'ಪಿಂಕ್' ಸಿನಿಮಾದ ರೀಮೇಕ್ ಆದ ವಕೀಲ್ ಸಾಬ್‌ ನಲ್ಲಿ ಹಿಂದಿಯ ಕತೆಗಿಂತಲೂ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಪ್ರೇಯಸಿಯಾಗಿ ಶ್ರುತಿ ಹಾಸನ್ ಸಹ ಕಾಣಿಸಿಕೊಂಡಿದ್ದಾರೆ.

ಮೂರು ವರ್ಷಗಳ ಹಿಂದೆ 2018 ರಲ್ಲಿ ಬಿಡುಗಡೆ ಆಗಿದ್ದ 'ಅಜ್ಞಾತವಾಸಿ' ಸಿನಿಮಾ, ಪವನ್ ಕಲ್ಯಾಣ್ ರ ಕೊನೆಯ ಸಿನಿಮಾ ಆಗಿತ್ತು. ಆ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿತು. ಇದೀಗ ಮೂರು ವರ್ಷಗಳ ಬಳಿಕ ಪವನ್ ಕಲ್ಯಾಣ್ ಮತ್ತೆ ಬಣ್ಣ ಹಚ್ಚಿದ್ದಾರೆ.

ಈ ಸಿನಿಮಾದ ಬಳಿಕ ಮಲಯಾಳಂ ನ ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ ಪವನ್ ಕಲ್ಯಾಣ್. ಅದಾದ ಬಳಿಕ ರಾಧಾಕೃಷ್ಣ ನಿರ್ದೇಶನದ ಐತಿಹಾಸಿಕ ಸಿನಿಮಾ. ಹರಿಶಂಕರ್ ನಿರ್ದೇಶನದ ಹೆಸರಿಡದ ಸಿನಿಮಾ ದಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Pawan Kalyan's Vakeel Saab movie teaser will release on January 14 evening 6 o'clock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X