ಪವನ್ ಕಲ್ಯಾಣ್ ಧರಿಸಿರುವ ವಾಚಿನ ಬೆಲೆ ಎಷ್ಟು ಗೊತ್ತಾ?

ನಟ ಪವನ್ ಕಲ್ಯಾಣ್ ಏನು ಮಾಡಿದರೂ ಸುದ್ದಿಯೇ. ಸುಮ್ಮನಿದ್ದರೂ ಸಹ ಸುದ್ದಿಯೇ. ಪವನ್ ಕಲ್ಯಾಣ್ ಎರಡು ದಿನದ ಹಿಂದಷ್ಟೆ ಹೈದರಾಬಾದ್‌ನಲ್ಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು. ಇದು ಬಹು ದೊಡ್ಡ ಸುದ್ದಿಯಾಗಿತ್ತು.

ಆದರೆ ಈಗ ಅದೇ ಮೆಟ್ರೋ ಪ್ರಯಾಣದ ಬಗ್ಗೆ ಕೆಲವು ಟೀಕೆಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಮೆಟ್ರೊ ಪ್ರಯಾಣದ ವೇಳೆ ಪವನ್ ಕಲ್ಯಾಣ್ ಧರಿಸಿದ್ದ ಕೈಗಡಿಯಾರ.

ಹೌದು, ಪವನ್ ಕಲ್ಯಾಣ್ ಮೆಟ್ರೊ ರೈಲಿನಲ್ಲಿ ಸುತ್ತಾಡಿದ ಹತ್ತಾರು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆ ಚಿತ್ರಗಳಲ್ಲಿ ಪವನ್ ಕಲ್ಯಾಣ್ ಕೈಗೆ ಕಟ್ಟಿದ್ದ ವಾಚ್ ಹಲವರ ಗಮನ ಸೆಳೆದಿದೆ. ಆ ವಾಚ್ ಸಾಮಾನ್ಯವಾದ ವಾಚ್ ಅಲ್ಲ ಲಕ್ಷಾಂತರ ಮೌಲ್ಯದ ದುಬಾರಿ ವಾಚ್ ಎಂಬ ಸುದ್ದಿ ಈಗ ಹರಿದಾಡುತ್ತಿದೆ.

40 ಲಕ್ಷ ಬೆಲೆಯ ದುಬಾರಿ ವಾಚ್?

40 ಲಕ್ಷ ಬೆಲೆಯ ದುಬಾರಿ ವಾಚ್?

ಮೆಟ್ರೊದಲ್ಲಿ ಪ್ರಯಾಣಿಸಬೇಕಾದರೆ ಪವನ್ ಕಲ್ಯಾಣ್ ಕೈಲಿದ್ದ ವಾಚ್ ರೋಲೆಕ್ಸ್ ವಾಚ್ ಎನ್ನಲಾಗುತ್ತಿದ್ದು, ಆ ವಾಚಿನ ಮೌಲ್ಯ ಬರೋಬ್ಬರಿ 40 ಲಕ್ಷ ಎಂದು ಹೇಳಲಾಗುತ್ತಿದೆ. ಭಾರಿ ದುಬಾರಿಯಾದ ವಾಚನ್ನು ಪವನ್ ಕಟ್ಟಿಕೊಂಡಿದ್ದರು ಎನ್ನಲಾಗಿದೆ.

ಪವನ್ ಕಲ್ಯಾಣ್ ವಾಚ್‌ನದ್ದೇ ಸುದ್ದಿ

ಪವನ್ ಕಲ್ಯಾಣ್ ವಾಚ್‌ನದ್ದೇ ಸುದ್ದಿ

ಪವನ್ ಕಲ್ಯಾಣ್ ಅವರ ದುಬಾರಿ ವಾಚ್‌ ಈಗ ದೊಡ್ಡ ಸುದ್ದಿಯಾಗಿ ಹೊರಹೊಮ್ಮಿದೆ. ಪವನ್ ಕಲ್ಯಾಣ್ ತಮ್ಮನ್ನು ತಾವು ಸರಳವಾಗಿ ಜೀವಿಸುವ ವ್ಯಕ್ತಿ ಎಂದು ಕರೆದುಕೊಳ್ಳುತ್ತಾರೆ ಹಾಗಿದ್ದರೆ ದುಬಾರಿ ವಾಚ್ ಏಕೆ ಬಳಸುತ್ತಾರೆ ಎಂದು ಪ್ರಶ್ನೆಗಳು ಎದ್ದಿವೆ.

ಸರಳ ವ್ಯಕ್ತಿ ಎಂದು ಬಿಂಬಿಸುವ ಚಿತ್ರಗಳು

ಸರಳ ವ್ಯಕ್ತಿ ಎಂದು ಬಿಂಬಿಸುವ ಚಿತ್ರಗಳು

ಪವನ್ ಕಲ್ಯಾಣ್ ತಮ್ಮ ತೋಟದಲ್ಲಿ ಜಾನುವಾರುಗಳಿಗೆ ಸೇವೆ ಮಾಡುವ, ಖಾವಿ ಬಟ್ಟೆ, ಶಾಲು ಧರಿಸಿ ಕಾರ್ಯಕ್ರಮಗಳಿಗೆ ಓಡಾಡುವ, ಪುಸ್ತಕ ಓದುವ ಚಿತ್ರಗಳನ್ನು ಅವರೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಾವೊಬ್ಬ ಸರಳ ವ್ಯಕ್ತಿ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ಆದರೆ ಈಗ ಎಲ್ಲಾ ಉಲ್ಟಾ ಆಗಿದೆ.

ಚಿತ್ರೀಕರಣಕ್ಕಾಗಿ ಧರಿಸಿದ್ದ ವಾಚ್?

ಚಿತ್ರೀಕರಣಕ್ಕಾಗಿ ಧರಿಸಿದ್ದ ವಾಚ್?

ಆ ವಾಚನ್ನು ಚಿತ್ರೀಕರಣ ಉದ್ದೇಶಕ್ಕೆ ಬಳಸಿದ್ದಾರೆ ಎಂಬುದು ಕೆಲವರ ವಾದ. ಆದರೆ ವಕೀಲ್ ಸಾಬ್ ಸಿನಿಮಾ ಪಿಂಕ್ ಸಿನಿಮಾದ ರೀಮೇಕ್. ಆ ಸಿನಿಮಾ ನೋಡಿರುವವರಿಗೆ ಗೊತ್ತಿರುತ್ತದೆ, ಸಿನಿಮಾದ ನಾಯಕ ಮಧ್ಯಮ ಕುಟುಂಬದ ವಕೀಲ, ಶ್ರೀಮಂತ ಕುಟುಂಬದವನಲ್ಲ ಎಂದು.

More from Filmibeat

English summary
Pawan Kalyan pictures traveling in Metro went viral. Netizen now talking about the watch which Pawan Kalyan wearing while traveling in Metro.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X