twitter
    For Quick Alerts
    ALLOW NOTIFICATIONS  
    For Daily Alerts

    ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿದ್ದ ಪವನ್ ಕಲ್ಯಾಣ್: ಕಾರಣವೇನು?

    |

    ನಟ ಪವನ್ ಕಲ್ಯಾಣ್ ಇಂದು ಭಾರತದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪ್ರಮುಖರು. ತೆರೆಯ ಮೇಲೆ ಅವರ ಸಣ್ಣ ಕದಲಿಕೆಗೆ, ಒಂದು ಪಂಚ್ ಡೈಲಾಗ್‌ಗೆ ಚಿತ್ರಮಂದಿರದ ತಾರಸಿ ಕಿತ್ತು ಹೋಗುವಂತೆ ಚಪ್ಪಾಳೆಗಳು, ಶಿಳ್ಳೆಗಳು ಬೀಳುತ್ತವೆ.

    ಭಾರಿ ದೊಡ್ಡ ಮಟ್ಟದ ಅಭಿಮಾನಿ ಬಳಕ ಹೊಂದಿರುವ ಪವನ್ ಕಲ್ಯಾಣ್‌ ಅನ್ನು ಕೋಟ್ಯಂತರ ಮಂದಿ ಆದರ್ಶವಾಗಿ ತೆಗೆದುಕೊಂಡಿದ್ದಾರೆ. ರಾಜಕೀಯದಲ್ಲಿಯೂ ಸಕ್ರಿಯರಾಗಿರುವ ಪವನ್ ಜನರಿಗೆ ಪ್ರೇರಣೆ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಇಂಥಹಾ ಪವನ್ ಕಲ್ಯಾಣ್ ಸಹ ಜೀವನದಲ್ಲಿ ನಿರಾಶರಾಗಿ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ನಿಶ್ಚಯಿಸಿದ್ದರು.

    ಇಂದು ಸೂಪರ್-ಡೂಪರ್ ನಟರಾಗಿರುವ ಪವನ್ ಕಲ್ಯಾಣ್ ಹಿಂದೊಮ್ಮೆ ತೀವ್ರ ಖಿನ್ನತೆಗೆ ಒಳಗಾಗಿದ್ದರಂತೆ. ಪವನ್ ಅವರೇ ಹೇಳಿಕೊಂಡಿರುವಂತೆ ಎರಡು ಬಾರಿ ಆತ್ಮಹತ್ಯೆ ನಿರ್ಣಯ ಮಾಡಿದ್ದರು. ಒಮ್ಮೆ ತೀವ್ರ ಖಿನ್ನತೆಗೆ ಒಳಗಾದರೂ ಅದರಿಂದ ಹೊರಗೆ ಬಂದರು.

    ಕಾಲೇಜು ಬಿಟ್ಟ ಮೇಲೆ ತೀವ್ರ ಖಿನ್ನತೆಗೆ ಗುರಿಯಾಗಿದ್ದೆ: ಪವನ್

    ಕಾಲೇಜು ಬಿಟ್ಟ ಮೇಲೆ ತೀವ್ರ ಖಿನ್ನತೆಗೆ ಗುರಿಯಾಗಿದ್ದೆ: ಪವನ್

    ಕಾಲೇಜು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅನುಭವ ಹಂಚಿಕೊಂಡ ಪವನ್, 'ನಾನು ಕಾಲೇಜು ದಿನಗಳಲ್ಲಿ ತೀವ್ರ ಖಿನ್ನತೆಗೆ ಒಳಗಾಗಿದ್ದೆ. ನನ್ನ ಸ್ನೇಹಿತರೆಲ್ಲರೂ ಕಲಿತು ಮುಂದೆ ಹೋಗಿಬಿಟ್ಟರು ಆದರೆ ಕಾಲೇಜು ಬಿಟ್ಟು ಮನೆಯಲ್ಲಿ ಕೂತಿದ್ದೆ. ಇದು ನನ್ನನ್ನು ತೀವ್ರ ಖಿನ್ನತೆಗೆ ಗುರಿ ಮಾಡಿತ್ತು' ಎಂದಿದ್ದಾರೆ ಪವನ್.

    ಬಂದೂಕಿನಿಂದ ಶೂಟ್ ಮಾಡಿಕೊಳ್ಳಲು ನಿಶ್ಚಯಿಸಿದ್ದೆ: ಪವನ್ ಕಲ್ಯಾಣ್

    ಬಂದೂಕಿನಿಂದ ಶೂಟ್ ಮಾಡಿಕೊಳ್ಳಲು ನಿಶ್ಚಯಿಸಿದ್ದೆ: ಪವನ್ ಕಲ್ಯಾಣ್

    'ಒಮ್ಮೆ ಮನೆಯವರೆಲ್ಲೂ ಹೊರಗೆ ಹೋಗಿದ್ದಾಗ ನಾನು ಬಂದೂಕು ತೆಗೆದುಕೊಂಡು ಶೂಟ್ ಮಾಡಿಕೊಳ್ಳಲು ನಿರ್ಣಯಿಸಿದೆ. ನನ್ನ ಕುಟುಂಬದವರಿಗೆ ಸಹ ಹೇಳಿದ್ದೆ, 'ಇನ್ನೊಂದು ಗಂಟೆ ನನ್ನನ್ನು ನೋಡುತ್ತೀರ ಆಮೇಲೆ ನೋಡುವುದಿಲ್ಲ ಎಂದು' ಅದು ನನ್ನ ಅಣ್ಣ ಹಾಗೂ ಅತ್ತಿಗೆಗೆ ಹೇಗೋ ಗೊತ್ತಾಗಿ ನನ್ನ ರೂಮಿಗೆ ಬಂದು ನನ್ನ ಮುಂದೆ ಇಟ್ಟಿದ್ದ ಬಂದೂಕು ತೆಗೆದುಕೊಂಡು ಬಿಟ್ಟರು' ಎಂದಿದ್ದಾರೆ ಪವನ್.

    'ಸಂಬಂಧಿಕರಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದೆ'

    'ಸಂಬಂಧಿಕರಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದೆ'

    ಆ ನಂತರ ನನ್ನ ಎರಡನೇ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇದೇ ಸಮಸ್ಯೆ ಎದುರಾಯಿತು. ಆ ಸಿನಿಮಾಕ್ಕಾಗಿ ವಿಶಾಖಪಟ್ಟಣಂನಲ್ಲಿ ನಾವು ಚಿತ್ರೀಕರಣ ಮಾಡಬೇಕಿತ್ತು. ಬಹಳ ಜನರ ಮಧ್ಯದಲ್ಲಿ ನಾನು ಡ್ಯಾನ್ಸ್ ಮಾಡಬೇಕಿತ್ತು. ಸಂಕೋಚದ ಸ್ವಭಾವದವನಾದ ನನಗೆ ಡ್ಯಾನ್ಸ್ ಮಾಡಲಾಗಲಿಲ್ಲ. ನನಗೆ ಅಂದು ಸೋತಂತೆ ಭಾಸವಾಯಿತು. ನಾನು ಯಾವುದಕ್ಕೂ ಕೆಲಸಕ್ಕೆ ಬಾರದವನು ಎನ್ನಿಸಿತು. ನನ್ನ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿಬಿಟ್ಟೆ. ಆದರೆ ಆಗಲೂ ನನ್ನ ಕುಟುಂಬದವರು ನನಗೆ ಧೈರ್ಯ ತುಂಬಿದರು ಎಂದರು ಪವನ್ ಕಲ್ಯಾಣ್.

    Recommended Video

    ಅಮಿತಾಬ್ ಬಚ್ಚನ್ ಎದುರು ರಘುವೀರ್ ಗೆದ್ದಿದ್ದು ಹೇಗೆ? | Filmibeat Kannada
    2011 ರಲ್ಲಿ ಖಿನ್ನತೆಗೆ ಗುರಿಯಾಗಿದ್ದೆ

    2011 ರಲ್ಲಿ ಖಿನ್ನತೆಗೆ ಗುರಿಯಾಗಿದ್ದೆ

    ಮತ್ತೊಮ್ಮೆ 2011 ರಲ್ಲಿ ನಾನು 'ಪಂಜಾ' ಸಿನಿಮಾದ ಚಿತ್ರೀಕರಣ ಮಾಡಬೇಕಾದರೆ ಅದೇ ಸ್ಥಿತಿ ಎದುರಾಯಿತು. ಬಹಳ ಖಿನ್ನತೆಗೆ ಗುರಿಯಾದೆ. ನನ್ನ ಖಿನ್ನತೆಯಿಂದಾಗಿ ನನ್ನ ಕೆಲಸದ ಗುಣಮಟ್ಟ ಕಡಿಮೆ ಆಗಿತ್ತು. ಆದರೆ ಈ ಬಾರಿ ಹಳೆಯ ಅನುಭವದಿಂದ ಪಾಠ ಕಲಿತಿದ್ದೆ ಖಿನ್ನತೆಯಿಂದ ಸ್ವಯಂ ಪ್ರಯತ್ನದಿಂದ ಹೊರಬಂದೆ ಎಂದಿದ್ದಾರೆ ಪವನ್ ಕಲ್ಯಾಣ್.

    English summary
    Actor Pawan Kalyan told he tried twice to end his life. He said he was rescued by his family members.
    Monday, May 17, 2021, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X