For Quick Alerts
  ALLOW NOTIFICATIONS  
  For Daily Alerts

  ರಾಮ ಮಂದಿರ ನಿರ್ಮಾಣ: ಪವನ್ ಕಲ್ಯಾಣ್ ಭಾರಿ ಮೊತ್ತ ದೇಣಿಗೆ

  |

  ತೆಲುಗಿನ ಖ್ಯಾತ ನಟ, ರಾಜಕಾರಣಿ ಪವನ್ ಕಲ್ಯಾಣ್ ರಾಮ ಮಂದಿರ ನಿರ್ಮಾಣಕ್ಕೆ ಭಾರಿ ಮೊತ್ತದ ದೇಣಿಗೆ ನೀಡಿದ್ದಾರೆ.

  ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಣೆ ಅಭಿಯಾನ ನಡೆಯುತ್ತಿದ್ದು, ಪವನ್ ಕಲ್ಯಾಣ್ ಅವರು 30 ಲಕ್ಷ ರೂಪಾಯಿ ಹಣವನ್ನು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲಿದ್ದಾರೆ.

  ತಿರುಪತಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಪವನ್ ಕಲ್ಯಾಣ್, ರಾಮ ಮಂದಿರ ನಿರ್ಮಾಣಕ್ಕೆ 30 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

  ಜನಸೇನಾ ಪಕ್ಷದ ಸಂಸ್ಥಾಪಕರಾಗಿರುವ ಪವನ್ ಕಲ್ಯಾಣ್, ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ತಿರುಪತಿ ಲೋಕಸಭೆ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪ್ರಚಾರಕ್ಕಾಗಿ ಇಂದು ತಿರುಪತಿಗೆ ಭೇಟಿ ನೀಡಿದ್ದರು.

  ಹಲವಾರು ಸೆಲೆಬ್ರಿಟಿಗಳು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಕನ್ನಡದ ನಟಿ ಪ್ರಣಿತಾ ಸಹ ಒಂದು ಲಕ್ಷ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.

  ರಚಿತಾ ರಾಮ್ ಅಭಿಮಾನಿಗಳಿಗೆ ಸಿಹಿಸುದ್ದಿ | Filmibeat Kannada

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತ ದೇಣಿಗೆ ನೀಡಿದ್ದು, 'ರಾಮ ಮಂದಿರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ' ಎಂದು ಮನವಿ ಸಹ ಮಾಡಿದ್ದಾರೆ.

  English summary
  Actor, politician Pawan Kalyan said he will donate 30 lakh rs to build Ram Mandir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X