For Quick Alerts
  ALLOW NOTIFICATIONS  
  For Daily Alerts

  ನಾನು ಆ ಸ್ಟಾರ್ ನಟನ ಹುಚ್ಚು ಅಭಿಮಾನಿ, ಅವರಿಗಾಗಿ ಸಹೋದರರ ಜೊತೆ ಕಿತ್ತಾಡುತ್ತಿದ್ದೆ; ನಟ ಪವನ್ ಕಲ್ಯಾಣ್

  |

  ಟಾಲಿವುಡ್ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಸದ್ಯ ವಕೀಲ್ ಸಾಬ್ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಪವನ್ ಚಿತ್ರದ ಪ್ರಮೋಷನ್‌ನಲ್ಲಿ ತೊಡಗಿಕೊಂಡಿದ್ದಾರೆ. ಮೂರು ವರ್ಷಗಳ ಬಳಿಕ ತೆರೆಮೇಲೆ ಬರಲು ಸಿದ್ಧವಾಗಿರುವ ಪವನ್ ಕಲ್ಯಾಣ್ ನೋಡಲು ಅಭಿಮಾನಿಗಳು ಕಾರರಾಗಿದ್ದಾರೆ.

  ಅಂದಹಾಗೆ ಇತ್ತೀಚಿಗಷ್ಟೆ ಸಿನಿಮಾತಂಡ ವಕೀಲ್ ಸಾಬ್ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿದೆ. ವಕೀಲ್ ಸಾಬ್, ಬಿಗ್ ಬಿ ಅಮಿತಾಬ್ ಬಚ್ಚನ್ ನಟನೆಯ ಪಿಂಕ್ ಸಿನಿಮಾದ ರಿಮೇಕ್. ಹಿಂದಿಯಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಗ್ಗೆ ಪವನ್ ಕಲ್ಯಾಣ್ ಮಾಡಿದ್ದಾರೆ. ಜೊತೆಗೆ ನಟ ಅಮಿತಾಬ್ ಬಚ್ಚನ್ ಅವರ ಮೇಲಿಂದ ಹುಚ್ಚು ಅಭಿಮಾನವನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

  'ವಕೀಲ್ ಸಾಬ್' ಚಿತ್ರತಂಡದ ಯೋಜನೆಗೆ ತಣ್ಣೀರು ಸುರಿದ ಹೈದರಾಬಾದ್ ಪೊಲೀಸ್!'ವಕೀಲ್ ಸಾಬ್' ಚಿತ್ರತಂಡದ ಯೋಜನೆಗೆ ತಣ್ಣೀರು ಸುರಿದ ಹೈದರಾಬಾದ್ ಪೊಲೀಸ್!

  ಅಮಿತಾಬ್ ಅವರ ಹುಚ್ಚು ಅಭಿಮಾನಿ ಪವನ್ ಕಲ್ಯಾಣ್

  ಅಮಿತಾಬ್ ಅವರ ಹುಚ್ಚು ಅಭಿಮಾನಿ ಪವನ್ ಕಲ್ಯಾಣ್

  ತೆಲುಗಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಕಲಾವಿದರಲ್ಲಿ ಪವನ್ ಕಲ್ಯಾಣ್ ಕೂಡ ಒಬ್ಬರು. ತೆಲುಗು ಪವರ್ ಸ್ಟಾರ್ ಅಂದರೆ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಪವನ್, ತನ್ನ ನೆಚ್ಚಿನ ನಟನ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ ಎಂದು ಹೇಳಿದ್ದಾರೆ.

  ಅಮಿತಾಬ್ ಗಾಗಿ ಸಹೋದರರ ಜೊತೆ ಕಿತ್ತಾಡುತ್ತಿದ್ದೆ

  ಅಮಿತಾಬ್ ಗಾಗಿ ಸಹೋದರರ ಜೊತೆ ಕಿತ್ತಾಡುತ್ತಿದ್ದೆ

  ಅಮಿತಾಬ್ ನಟನೆಯ ಸಿನಿಮಾದ ರಿಮೇಕ್‌ನಲ್ಲಿ ನಾನು ನಟಿಸುತ್ತೇನೆ ಎಂದು ಯಾವತ್ತು ಕನಸು ಕೂಡ ಕಂಡಿರಲಿಲ್ಲ. 'ನೀವೀಗ ನನ್ನ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ಹೊಂದಿರುವ ಹಾಗೆ ನಾನು ಬಾಲ್ಯದಿಂದಲೂ ಅಮಿತಾಬ್ ಬಚ್ಚನ್ ಅವರ ಹುಚ್ಚು ಅಭಿಮಾನಿ. ನೀವು ನನಗಾಗಿ ಹೋರಾಡುವ ಹಾಗೆ ನಾನು ಅವರಿಗಾಗಿ ಹೋರಾಡುತ್ತಿದ್ದೆ. ಬಾಲ್ಯದಲ್ಲಿ ನಾನು ಅಮಿತಾಬ್‌ಗಾಗಿ ನನ್ನ ಸ್ವಂತ ಸಹೋದರರ ಜೊತೆ ಕಿತ್ತಾಡುತ್ತಿದ್ದೆ. ನಾನು ಎಂದಿಗೂ ಅವರ ಸಿನಿಮಾದ ರಿಮೇಕ್‌ನಲ್ಲಿ ನಟಿಸುತ್ತೇನೆ ಎಂದುಕೊಂಡಿರಲಿಲ್ಲ' ಎಂದಿದ್ದಾರೆ.

  ನನ್ನ ಹೃದಯ ದೇಶ ಮತ್ತು ಅಭಿಮಾನಿಗಳಿಗೆ ಮಿಡಿಯುತ್ತಿರುತ್ತೆ

  ನನ್ನ ಹೃದಯ ದೇಶ ಮತ್ತು ಅಭಿಮಾನಿಗಳಿಗೆ ಮಿಡಿಯುತ್ತಿರುತ್ತೆ

  ಅಭಿಮಾನಿಗಳ ಅಪಾರ ಪ್ರೀತಿ ಮತ್ತು ಬೆಂಬಲದ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, 'ನನ್ನ ಈ ಹೃದಯ ದೇಶ ಮತ್ತು ನನ್ನ ಅಭಿಮಾನಿಗಳಿಗೆ ಮಿಡಿಯುತ್ತೆ. ಮೂರು ವರ್ಷಗಳಿಂದ ನನ್ನ ಸಿನಿಮಾ ಬಿಡುಗಡೆಯಾಗಿಲ್ಲ. ನಾನು ಚಿತ್ರರಂಗ ಪ್ರವೇಶ ಮಾಡಿ 24 ವರ್ಷಗಳಾಗಿದೆ. ಈ ಎಲ್ಲಾ ವರ್ಷಗಳು ಹೇಗೆ ಕಳೆದವು ಎಂದು ನನಗೆ ಗೊತ್ತಿಲ್ಲ' ಎಂದಿದ್ದಾರೆ.

  ಪವನ್ ಕಲ್ಯಾಣ್ ಸಿನಿಮಾ ಚಿತ್ರೀಕರಣದ ವೇಳೆ ಅಪಘಾತ, ನಟ ಆಸ್ಪತ್ರೆಗೆ ದಾಖಲುಪವನ್ ಕಲ್ಯಾಣ್ ಸಿನಿಮಾ ಚಿತ್ರೀಕರಣದ ವೇಳೆ ಅಪಘಾತ, ನಟ ಆಸ್ಪತ್ರೆಗೆ ದಾಖಲು

  ನಟ ಪ್ರಕಾಶ್ ರಾಜ್‌ರನ್ನು ಹೊಗಳಿದ ಪವನ್

  ನಟ ಪ್ರಕಾಶ್ ರಾಜ್‌ರನ್ನು ಹೊಗಳಿದ ಪವನ್

  ನಾನು 3 ವರ್ಷಗಳ ಕಾಲ ಬೆಳ್ಳಿ ಪರದೆಯಿಂದ ದೂರ ಆಗಿದ್ದೀನಿ ಎಂದು ಭಾವಿಸಿಲ್ಲ ಎಂದು ಹೇಳಿದ್ದಾರೆ. ಈ ಚಿತ್ರಕ್ಕಾಗಿ ಹೆಚ್ಚು ಶ್ರಮಿಸಿದ್ದೇನೆ. ಇತರ ಎಲ್ಲಾ ಸಿನಿಮಾಗಳಿಂತ ವಿಭಿನ್ನವಾಗಿದೆ ಎಂದಿದ್ದಾರೆ. ಜೊತೆ ನಟ ಪ್ರಕಾಶ್ ರಾಜ್ ಬಗ್ಗೆಯೂ ಮಾತನಾಡಿ, ಪ್ರಕಾಶ್ ರಾಜ್ ಎದುರು ವಕೀಲನಾಗಿ ನಟಿಸಿದ್ದು ಗೌರವವಿದೆ, ರಾಜಕೀಯವಾಗಿ ಅವರ ಬಗ್ಗೆ ನನಗೆ ವಿಭಿನ್ನ ಅಭಿಪ್ರಾಯ ಇರಬಹುದು ಆದರೆ ಸಿನಿಮಾ ವಿಚಾರಕ್ಕೆ ಬಂದರೆ ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ' ಎಂದು ಪ್ರಕಾಶ್ ರಾಜ್ ಅವರನ್ನು ಹೊಗಳಿದ್ದಾರೆ.

  ಅಂತೂ ಇಂತೂ ದೊಡ್ಡ ನಿರ್ಧಾರ ತೆಗೆದುಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್ | Filmibeat Kannada
  ಪ್ರತಿಯೊಬ್ಬ ಮಹಿಳೆಯರಿಗೆ 'ವಕೀಲ್ ಸಾಬ್' ಚಿತ್ರ ಅರ್ಪಿಸಿದ ಪವನ್

  ಪ್ರತಿಯೊಬ್ಬ ಮಹಿಳೆಯರಿಗೆ 'ವಕೀಲ್ ಸಾಬ್' ಚಿತ್ರ ಅರ್ಪಿಸಿದ ಪವನ್

  ದೇಶದ ಪ್ರತಿಯೊಬ್ಬ ಮಹಿಳೆಯರಿಗೂ ಈ ಸಿನಿಮಾವನ್ನು ಅರ್ಪಿಸುವುದಾಗಿ ಹೇಳಿದ್ದಾರೆ. 'ನಾನು ನನ್ನ ಸಹೋದರಿಯರು, ನನ್ನ ಅತ್ತಿಗೆ, ತಾಯಿಯೊಂದಿಗೆ ಬೆಳೆದಿದ್ದೀನಿ. ನಾನು ಮಹಿಳೆಯರ ಮಧ್ಯೆಯೆ ಬೆಳೆದಿದ್ದು. ನನ್ನ ಮಹಿಳಾ ಸಹನಟರ ಬಗ್ಗೆ ನಾನು ಯಾವಾಗಲು ಗೌರವದಿಂದ ಇರುತ್ತೇನೆ. ಹಾಗಾಗಿ ಈ ಸಿನಿಮಾವನ್ನು ಪ್ರತಿಯೊಬ್ಬ ಮಹಿಳೆಯರಿಗೆ ಸಮರ್ಪಿತವಾಗಿದೆ' ಎಂದು ಹೇಳಿದ್ದಾರೆ.

  English summary
  Telugu Actor Pawan Kalyan says I have been crazy fan of Amitabh Bachchan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X