'ಭೀಮ್ಲಾ ನಾಯಕ್' ಮೊದಲ ದಿನ ಗಳಿಸಿದ್ದೆಷ್ಟು: ಕರ್ನಾಟಕದಲ್ಲಿ ಬಾಚಿದ್ದೆಷ್ಟು?

ಪವನ್ ಕಲ್ಯಾಣ್ ಅಭಿನಯದ ಚಿತ್ರ 'ಭೀಮ್ಲಾ ನಾಯಕ್' ಫೆ.25 ರಂದು ರಿಲೀಸ್ ಆಗಿದೆ. ಈ ಚಿತ್ರ ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿದೆ. ಆದರೆ ಸಿನಿಮಾ ರಿಲೀಸ್ ಬಳಿಕ ಗಳಿಕೆ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮನೆ ಮಾಡಿದ್ದವು. ಇದೀಗ ಚಿತ್ರದ ಮೊದಲ ದಿನದ ಗಳಿಕೆಯ ಲೆಕ್ಕಾಚಾರ ಹೊರ ಬಿದ್ದಿದೆ.

'ಭೀಮ್ಲಾ ನಾಯಕ್' ಬಿಗ್ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನವೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಅಂತೆಯೇ ಬಾಕ್ಸಾಫೀಸ್ ಗಳಿಕೆಯಲ್ಲೂ ಸಿನಿಮಾ ದಾಖಲೆ ಮಾಡುತ್ತಿದೆ. ನಟ ಪವನ್ ಕಲ್ಯಾಣ್ 'ವಕೀಲ್ ಸಾಬ್' ಸಿನಿಮಾದ ಬಳಿಕ ಕೈಗೆತ್ತಿಕೊಂಡಿರುವ ಸಿನಿಮಾ ಇದು.

'ಭೀಮ್ಲಾ ನಾಯಕ್' ರಿಮೇಕ್ ಸಿನಿಮಾ ಆದರೂ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಈ ಚಿತ್ರದ ಮೂಲಕ ಪವನ್ ಕಲ್ಯಾಣ್ ಅವರ ಹಿಂದಿನ ಸಿನಿಮಾ 'ವಕೀಲ್ ಸಾಬ್' ಚಿತ್ರದ ದಾಖಲೆಯನ್ನು ಮುರಿದಿದ್ದಾರೆ.

'ಭೀಮ್ಲಾ ನಾಯಕ್' ಆಂಧ್ರ, ತೆಲಂಗಾಣದಲ್ಲಿ ದಾಖಲೆಯ ಮೊತ್ತ!

'ಭೀಮ್ಲಾ ನಾಯಕ್' ಆಂಧ್ರ, ತೆಲಂಗಾಣದಲ್ಲಿ ದಾಖಲೆಯ ಮೊತ್ತ!

ಆಕ್ಷನ್ ಥ್ರಿಲ್ಲರ್ 'ಭೀಮ್ಲಾ ನಾಯಕ್' ಚಿತ್ರ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಬಾಕ್ಸಾಫೀಸ್ ಚಿಂದಿ ಮಾಡಿದೆ. ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಚಿತ್ರ ಉತ್ತಮ ಗಳಿಕೆ ಕಂಡಿದೆ. ವಿಶ್ವಾದಾದ್ಯಂತ ರಿಲೀಸ್ ಆದ 'ಭೀಮ್ಲಾ ನಾಯಕ್' ಸಿನಿಮಾ ಆಂಧ್ರ ಮತ್ತು ತೆಲಂಗಾಣ ಸೇರಿ ಒಟ್ಟು ಮೊದಲ ದಿನ 26.42 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಮಾಡಿದೆ. ಮೊದಲ ದಿನದ ಗಳಿಕೆಯ ಬಗ್ಗೆ ಚಿತ್ರ ತಂಡ ಸಂತಸ ವ್ಯಕ್ತ ಪಡಿಸಿದೆ.

ವಿಶ್ವದಾದ್ಯಂತ 'ಭೀಮ್ಲಾ ನಾಯಕ್' ಗಳಿಸಿದ್ದು ಎಷ್ಟು?

ವಿಶ್ವದಾದ್ಯಂತ 'ಭೀಮ್ಲಾ ನಾಯಕ್' ಗಳಿಸಿದ್ದು ಎಷ್ಟು?

'ಭೀಮ್ಲಾ ನಾಯಕ್' ವಿಶ್ವದಾದ್ಯಂತ ತೆರೆಕಂಡಿದೆ. ತೆಲುಗು ಅವತರಣಿಕೆಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಚಿತ್ರದ ಒಟ್ಟು ಮೊದಲ ದಿನದ ಗಳಿಕೆ 36.73 ಕೋಟಿ ರೂ. ಎಂದು ವರದಿ ಆಗಿದೆ. ಈ ಮೂಲಕ ನಟ ಪವನ್ ಕಲ್ಯಾಣ್ ಅವರ ಚಿತ್ರವು ಬೃಹತ್ ಕಲೆಕ್ಷನ್‌ನೊಂದಿಗೆ, ನಿಜಾಮ್‌ನಲ್ಲಿ ಸಾರ್ವಕಾಲಿಕ ದಾಖಲೆ ಮಾಡಿದೆ. ಮೊದಲನೇ ದಿನದಂದು ಚಿತ್ರ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಬೇಟೆಯ ಮೂಲಕ ಪ್ರದರ್ಶನ ಆರಂಭಿಸಿದೆ. ಹಾಗಾಗಿ ಈ ವಾರಾಂತ್ಯ ಮುಗಿಯುವಷ್ಟರಲ್ಲಿ ಸಿನಿಮಾದ ಗಳಿಕೆ ದುಪ್ಪಟ್ಟು ಆಗಲಿದೆ ಎನ್ನುವ ಸುಳಿವು ಕೊಟ್ಟಿದೆ.

ಕರ್ನಾಟಕದಲ್ಲಿ ಪವನ್ ಕಲ್ಯಾನ್ ಚಿತ್ರ ಬಾಕಿದ್ದು ಎಷ್ಟು?

ಕರ್ನಾಟಕದಲ್ಲಿ ಪವನ್ ಕಲ್ಯಾನ್ ಚಿತ್ರ ಬಾಕಿದ್ದು ಎಷ್ಟು?

ಪವನ್ ಕಲ್ಯಾಣ್ ಸಿನಿಮಾಗಳಿಗೆ ಕರ್ನಾಟಕದಲ್ಲೂ ಅಭಿಮಾನಿಗಳು ಇದ್ದಾರೆ. ಹಾಗಾಗಿ ಅವರ ಸಿನಿಮಾಗಳು ಕರ್ನಾಟಕದಲ್ಲೂ ಗಳಿಕೆ ಮಾಡುತ್ತವೆ. 'ಭೀಮ್ಲಾ ನಾಯಕ್' ಸಿನಿಮಾ ಕರ್ನಾಟದಲ್ಲಿ ಮೊದಲ ದಿನ 3 ಕೋಟಿಗೂ ಅಧಿಕ ಮೊತ್ತ ಕಲೆಹಾಕಿರೋದಾಗಿ ವರದಿ ಆಗಿದೆ. ಇನ್ನು ಓವರ್‌ಸೀಸ್‌ನಲ್ಲಿ ಚಿತ್ರ 6.85 ಕೋಟಿ ಗಳಿಕೆ ಮಾಡಿದೆ. ಹಾಗಾಗಿ ಒಟ್ಟಾರೆ ಕಲೆಕ್ಷನ್ 36.73 ಕೋಟಿ ಆಗಿದೆ.

'ವಲಿಮೈ', 'ಗಂಗೂಬಾಯಿ' ಜೊತೆ 'ಭೀಮ್ಲಾ ನಾಯಕ್' ಕಾದಾಟ!

'ವಲಿಮೈ', 'ಗಂಗೂಬಾಯಿ' ಜೊತೆ 'ಭೀಮ್ಲಾ ನಾಯಕ್' ಕಾದಾಟ!

ಇನ್ನು ಈ ಚಿತ್ರಕ್ಕೆ ತಮಿಳು, ತೆಲುಗಿನ ದೊಡ್ಡ, ದೊಡ್ಡ ಚಿತ್ರಗಳು ಎದುರಾಗಿವೆ. ಅಜಿತ್ ಅಭಿನಯದ ತಮಿಳಿನ 'ವಲಿಮೈ' ಮತ್ತು ಬಾಲಿವುಡ್‌ನಲ್ಲಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರ ಕೂಡ ರಿಲೀಸ್ ಆಗಿದ್ದು, ಈ ಚಿತ್ರಗಳ ಜೊತೆಗೆ ನಯವಾಗಿ ಕಾದಾಡುತ್ತಾ ಮೊದಲ ದಿನ ದಾಖಲೆಯ ಮೊತ್ತ ಕಲೆ ಹಾಕಿದೆ 'ಭೀಮ್ಲಾ ನಾಯಕ್' ಚಿತ್ರ. ಈ ಚಿತ್ರದಲ್ಲಿ ನಟ ಪವನ್ ಕಲ್ಯಾಣ್ ಜೊತೆಗೆ ರಾಣಾ ದಗ್ಗುಬಾಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Bheemla Nayak Movie 1 Day Boxoffice Collection Details Is Here, Pawan Kalyan Starrer New Record,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X