For Quick Alerts
  ALLOW NOTIFICATIONS  
  For Daily Alerts

  ಕೊರೊನಾ ನಡುವೆಯೂ ಭರ್ಜರಿ ಕಲೆಕ್ಷನ್ ಮಾಡಿದ ಪವನ್ ಕಲ್ಯಾಣ್ 'ವಕೀಲ್ ಸಾಬ್'

  |

  ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ವಕೀಲ್ ಸಾಬ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಮೂರು ವರ್ಷಗಳ ಬಳಿಕ ತೆರೆಮೇಲೆ ಬಂದ ಪವನ್ ಕಲ್ಯಾಣ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮೊದಲ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ.

  ತೆಲುಗು ಮಾತ್ರವಲ್ಲದೇ ಬೇರೆ ಬೇರೆ ರಾಜ್ಯ ಮತ್ತು ವಿದೇಶದಿಂದನೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರದಿಯ ಪ್ರಕಾರ ವಕೀಲ್ ಸಾಬ್ ಮೊದಲ ದಿನ ತೆಲುಗಿನಲ್ಲಿ 28 ರಿಂದ 32 ಕೋಟಿ ಬಾಚಿಕೊಂಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇನ್ನು ಒಟ್ಟು 42ಕೋಟಿ ರೂ.ಗೂ ಅಧಿಕ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ.

  ಪವನ್ ನಟನೆಯ 'ವಕೀಲ್ ಸಾಬ್' ವಿರುದ್ಧ ಚುನಾವಣಾ ಆಯೋಗಕ್ಕೆ ದೂರುಪವನ್ ನಟನೆಯ 'ವಕೀಲ್ ಸಾಬ್' ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

  ಕೊರೊನಾ ಆತಂಕದ ನಡುವೆಯೂ ಇಷ್ಟು ದೊಡ್ಡ ಮೊತ್ತದ ಹಣ ಸಂಗ್ರಹವಾಗಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕ ಕಡೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗುತ್ತಿದೆ. ಸಾಕಷ್ಟು ಸಿನಿಮಾಗಳ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗುತ್ತಿದೆ. ಈ ನಡುವೆ ಬಂದ ವಕೀಲ್ ಸಾಬ್ ಉತ್ತಮ ಕಲೆಕ್ಷನ್ ಮಾಡಿದೆ.

  ನಟಿ ತಮನ್ನಾ ಭಾಟಿಯಾ ಹಿಂದೆ ವಿರಾಟ್ ಕೊಹ್ಲಿ ಕುಳಿತಿರುವುದು ನಿಜಾನಾ? | Filmibeat Kannada

  ಅಂದಹಾಗೆ ವೇಣು ಶ್ರೀರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆೆ. ಚಿತ್ರದಲ್ಲಿ ನಾಲ್ಕು ನಟಿಯರು ಮಿಂಚಿದ್ದಾರೆ. ನಿವೇತಾ ಥಾಮಸ್, ಶ್ರುತಿ ಹಾಸನ್, ಅನನ್ಯಾ ಮತ್ತು ಅಂಜಲಿ ನಟಿಸಿದ್ದಾರೆ. ಅಂದಹಾಗೆ ವಕೀಲ್ ಸಾಬ್ ಸಿನಿಮಾ ಹಿಂದಿಯ ಪಿಂಕ್ ಸಿನಿಮಾದ ರಿಮೇಕ್. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸಿದ ಪಾತ್ರದಲ್ಲಿ ಅಮಿತಾಬ್ ಮಿಂಚಿದ್ದಾರೆ.

  English summary
  Telugu Actor Pawan Kalyan starrer Vakeel Saab movie earns 42 crore on first day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X