ಪವನ್ ಕಲ್ಯಾಣ್ ಹುಟ್ಟುಹಬ್ಬ ಪ್ರಯುಕ್ತ ಮೂರು ಸಿನಿಮಾಗಳ ಮಾಹಿತಿ!
ನಟ, ರಾಜಕಾರಣಿ ಪವನ್ ಕಲ್ಯಾಣ್ ಹುಟ್ಟುಹಬ್ಬ ಹತ್ತಿರವಿದೆ. ಬಹಳ ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಳ್ಳದಿದ್ದ ಪವನ್ ಕಲ್ಯಾಣ್ ಒಂದೊಳ್ಳೆ ಕತೆಯ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
Recommended Video
ಹಿಂದಿಯಲ್ಲಿ ಸಖತ್ ಸದ್ದು ಮಾಡಿದ್ದು, ಸೂಪರ್ ಹಿಟ್ ಎನಿಸಿಕೊಂಡಿದ್ದ ಅಮಿತಾಬ್ ಬಚ್ಚನ್, ತಾಪ್ಸಿ ಪನ್ನು ನಟನೆಯ ಸಿನಿಮಾ 'ಪಿಂಕ್' ಸಿನಿಮಾದ ರೀಮೇಕ್ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
2018 ರಲ್ಲಿ ಪವನ್ ಕಲ್ಯಾನ್ ನಟನೆಯ 'ಅಜ್ಞಾತವಾಸಿ' ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಹು ನಿರೀಕ್ಷೆ ಹುಟ್ಟಿಸಿತ್ತಿದ್ದಾರೂ ಇನ್ನಿಲ್ಲದಂತೆ ನೆಲಕಚ್ಚಿ ಪವನ್ ಅಭಿಮಾನಿಗಳು ಸಖತ್ ನಿರಾಸೆ ಉಂಟು ಮಾಡಿತು. ಹಾಗಾಗಿ ವಕೀಲ್ ಸಾಬ್ ಸಿನಿಮಾವನ್ನು ಪವನ್ ಅವರ ಕಮ್‌ಬ್ಯಾಕ್ ಸಿನಿಮಾ ಎಂದೇ ಕರೆಯಲಾಗುತ್ತಿದೆ.

ಸೆಪ್ಟೆಂಬರ್ 2 ರಂದು ಪವನ್ ಕಲ್ಯಾಣ್ ಹುಟ್ಟುಹಬ್ಬ
ಸೆಪ್ಟೆಂಬರ್ 2 ರಂದು ಪವನ್ ಕಲ್ಯಾಣ್ ಹುಟ್ಟುಹಬ್ಬವಿದ್ದು, ಪವನ್ ಹುಟ್ಟುಹಬ್ಬಕ್ಕೆ ವಕೀಲ್ ಸಾಬ್ ಸಿನಿಮಾದ ಮೋಷನ್ ಪೋಸ್ಟರ್ ಹಾಗೂ ಟೀಸರ್ ಅನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

ಮತ್ತೆ ಸಿನಿಮಾಗಳತ್ತ ಪವನ್ ಕಲ್ಯಾಣ್
ರಾಜಕೀಯದಲ್ಲಿ ಅತಿಯಾಗಿ ಮುಳುಗಿದ್ದ ಪವನ್ ಕಲ್ಯಾಣ್, ಇದೀಗ ಸಿನಿಮಾದತ್ತ ಮುಖಮಾಡುವ ಸೂಚನೆ ತೋರಿದ್ದು, ವಕೀಲ್ ಸಾಬ್ ನಂತರ ಎರಡು ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸಲಿದ್ದಾರೆ.

ವಕೀಲ್ ಸಾಬ್ ನಂತರ ಕ್ರಿಶ್ ನಿರ್ದೇಶನದಲ್ಲಿ ಸಿನಿಮಾ
ವಕೀಲ್ ಸಾಬ್ ನಂತರ ಕ್ರಿಶ್ ನಿರ್ದೇಶನದಲ್ಲಿ ಸಿನಿಮಾವೊಂದರಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಈ ಮುಂಚೆ ಪವನ್ ಅಭಿನಯದ ಗಬ್ಬರ್ ಈಸ್ ಬ್ಯಾಕ್ ಸಿನಿಮಾವನ್ನು ಕ್ರಿಶ್ ನಿರ್ದೇಶಿಸಿದ್ದರು. ಗಮ್ಯಂ, ವೇದಂ ರೀತಿಯ ಬ್ರಿಜ್ ಮಾದರಿ ಸಿನಿಮಾಗಳನ್ನು ಮಾಡಿದ್ದರು ಕ್ರಿಶ್.

ಹರೀಶ್ ಶಂಕರ್ ಜೊತೆ ಮತ್ತೊಂದು ಸಿನಿಮಾ
ಕ್ರಿಶ್ ಜೊತೆಗೆ ಸಿನಿಮಾದ ನಂತರ ನಿರ್ದೇಶಕ ಹರಿಶ್ ಶಂಕರ್ ಜೊತೆಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಪವನ್ ಕಲ್ಯಾಣ್. ಮೈತ್ರಿ ಮೂವಿಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಹೊರಬರುತ್ತಿದ್ದು, ಸಿನಿಮಾದ ಬಗ್ಗೆ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ ಮೈತ್ರಿ ಮೂವೀಸ್.


Click it and Unblock the Notifications











