ಪವನ್‌ನ ಟೀಕಿಸಲು ಸನ್ನಿ ಲಿಯೋನ್‌ನ ಎಳೆದು ತಂದ ರೋಜಾ: ಫ್ಯಾನ್ಸ್ ಸುಮ್ನೆ ಬಿಡ್ತಾರಾ?

ಆಂಧ್ರದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಕೆಸರೆರಚಾಟ ಮುಂದುವರೆದಿದೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪವನ್ ಕಲ್ಯಾಣ್ ಜನಸೇನಾ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ವಾರಾಹಿ ಯಾತ್ರೆ ಹೆಸರಿನಲ್ಲಿ ರಾಜ್ಯಾದ್ಯಂತ ಸಂಚರಿಸಿ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ಧಾರೆ. ಹಾಗಾಗಿ ಜನಸೇನಾನಿಯನ್ನು ಹಿಮ್ಮೆಟ್ಟಿಸಲು ಆಡಳಿತ ಪಕ್ಷದ ನಾಯಕರು ಆತನ ಮೇಲೆ ಆರೋಪಗಳ ಸುರಿಮಳೆಗರೆಯುತ್ತಿದ್ದಾರೆ.

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಫೈರ್ ಬ್ರ್ಯಾಂಡ್ ಎನಿಸಿಕೊಂಡಿರುವ ನಟಿ, ಸಚಿವೆ ರೋಜಾ ಮತ್ತೊಮ್ಮೆ ಪವನ್ ಕಲ್ಯಾಣ್ ವಿರುದ್ಧ ಕೆಂಡ ಕಾರಿದ್ದಾರೆ. ವಾರಾಹಿ ಯಾತ್ರೆ ವೇಳೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಆಡಳಿತ ಪಕ್ಷವನ್ನು ಗುರಿಯಾಗಿಸಿಕೊಂಡು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದು ಗೊತ್ತೇ ಇದೆ. ಪವನ್ ಹೇಳಿಕೆಗೆ ಸಚಿವೆ ರೋಜಾ ಕೂಡ ಟೀಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿವೆ ರೋಜಾ, ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರು ಉಲ್ಲೇಖಿಸಿ ಜನಸೇನಾನಿಯನ್ನು ತಿವಿದಿದ್ದಾರೆ. "ಸಂಸ್ಕಾರದ ಬಗ್ಗೆ ಪವನ್ ಕಲ್ಯಾಣ್ ಮಾತನಾಡುವುದು ನೋಡುತ್ತಿದ್ದರೆ ಸನ್ನಿ ಲಿಯೋನ್ ಬಾಯಲ್ಲಿ ವೇದಗಳನ್ನು ಕೇಳಿದಂತಿದೆ" ಎಂದು ರೋಜಾ ವ್ಯಂಗ್ಯವಾಡಿದ್ದರು.

Pawan Kalyan Vs Roja: Is Sunny Leone Angry With senior actress?

ಸನ್ನಿ ಲಿಯೋನ್ ಬಾಲಿವುಡ್‌ ಪ್ರವೇಶಿಸುವ ಮುನ್ನ ಅಡಲ್ಟ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಗುರ್ತಿಸಿಕೊಂಡಿದ್ದರು. ಆದರೆ ಕೆಲ ವರ್ಷಗಳಿಂದ ಅದನ್ನು ಬಿಟ್ಟು ಮುಂಬೈನಲ್ಲಿ ಬಂದು ನೆಲೆಸಿದ್ದಾರೆ. ಹಿಂದಿ ಸೇರಿದಂತೆ ದಕ್ಷಿಣದ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಕಾರಣಕ್ಕೆ ರೋಜಾ ಈ ರೀತಿ ಸನ್ನಿ ಲಿಯೋನ್ ಹೆಸರನ್ನು ವ್ಯಂಗ್ಯವಾಗಿ ಬಳಿಸಿಕೊಂಡಿದ್ದಾರೆ. ರೋಜಾ ಹೇಳಿಕೆ ಆಂಧ್ರ ರಾಜಕೀಯ, ಟಾಲಿವುಡ್, ಬಾಲಿವುಡ್ ಹೀಗೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಸ್ವತಃ ಸಿನಿಮಾ ನಟಿಯಾಗಿರುವ ರೋಜಾ, ಮತ್ತೊಬ್ಬ ಸಿನಿಮಾ ನಟಿ ಹೆಸರನ್ನು ಎಳೆದು ತಂದು ಪವನ್ ಬಗ್ಗೆ ವ್ಯಂಗ್ಯ ಮಾಡಿರುವುದು ಸರಿಯಲ್ಲ ಎಂಬ ಚರ್ಚೆ ನಡೆದಿದೆ. ಈ ವಿಚಾರದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳಂತೂ ಸನ್ನಿ ಲಿಯೋನ್ ಪರ ನಿಂತು ರೋಜಾಗೆ ತಿರುಗೇಟು ನೀಡುತ್ತಿದ್ದಾರೆ. ನೀನು ಕೂಡ ಒಂದು ಕಾಲದಲ್ಲಿ ಎಷ್ಟು ಹಾಟ್ ಆಗಿ ನಟಿಸುತ್ತಿದ್ದೆ ಗೊತ್ತಾ? ಈಗ ಸನ್ನಿ ಲಿಯೋನ್ ಬಗ್ಗೆ ಮಾತನಾಡುತ್ತೀಯಾ? ಎಂದು ತಿವಿದಿದ್ದಾರೆ. ದಶಕಗಳ ಹಿಂದೆ ರೋಜಾ ಕೆಲ ಸಿನಿಮಾಗಳಲ್ಲಿ ಕೊಂಚ ಮಾದಕವಾಗಿ ನಟಿಸಿದ್ದ ವಿಡಿಯೋ ಕ್ಲಿಪ್‌ಗಳನ್ನು ವೈರಲ್ ಮಾಡುತ್ತಿದ್ದಾರೆ.

ನೀವೂ- ಪವನ್ ಆರೋಪ ಪ್ರತ್ಯಾರೋಪ ಮಾಡುವಾಗ ಸನ್ನಿ ಹೆಸರು ಯಾಕೆ ಎಳೆದು ತಂದಿದ್ದೀರಾ ಎಂದು ಸಾಕಷ್ಟು ಜನ ಪ್ರಶ್ನಿಸುತ್ತಿದ್ದಾರೆ. ಇನ್ನು ಈ ಚರ್ಚೆ ಇಲ್ಲಿಗೆ ಮುಗಿದಿಲ್ಲ. ಇನ್ನು ಸನ್ನಿ ಲಿಯೋನ್ ಹೆಸರಿನಲ್ಲಿ ಒಂದು ಫೇಕ್ ಖಾತೆಯಿಂದ ಈ ವಿಚಾರದ ಬಗ್ಗೆ ಸನ್ನಿಯೇ ಟ್ವೀಟ್ ಮಾಡಿ ಮಾಡಿದಂತೆ ಒಂದು ಟ್ವೀಟ್ ವೈರಲ್ ಆಗುತ್ತಿದೆ. "ನಿಜ ನಾನು ಪೋರ್ನ್‌ಸ್ಟಾರ್ ಆಗಿದ್ದೆ ಮತ್ತು ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನಗೆ ಏನು ಮಾಡಬೇಕು ಅನಿಸಿತೋ ಅದನ್ನು ನಾನು ಬಹಿರಂಗವಾಗಿ ಮಾಡಿದ್ದೇನೆ. ನನಗೆ ಹಾಗೂ ನಿಮಗೆ ಇರುವ ವ್ಯತ್ಯಾಸ ಏನು ಎಂದರೆ ನಾನು ಆ ಇಂಡಸ್ಟ್ರಿಯನ್ನು ಬಿಟ್ಟೆ, ಆದರೆ ನೀವು ಬಿಡಲಿಲ್ಲ" ಎಂದು ಟ್ವೀಟಿಸಿದ್ದಾರೆ.

ಅಂದಹಾಗೆ ಇದು ಸನ್ನಿ ಲಿಯೋನ್ ಮಾಡಿರುವ ಟ್ವೀಟ್ ಅಲ್ಲ. ಆಕೆಗೆ ರೋಜಾ ಹೇಳಿಕೆಯ ಬಗ್ಗೆ ಗೊತ್ತೇಯಿಲ್ಲ. ಆದರೆ ಯಾರೋ ಆಕೆಯ ಫೇಕ್ ಟ್ವಿಟ್ಟರ್ ಅಕೌಂಟ್‌ನಲ್ಲಿ ಆಕೆಯೇ ಬರೆದಂತೆ ಪೋಸ್ಟ್ ಮಾಡಿದ್ದಾರೆ. ಕೆಲವರು ಇದು ನಿಜ ಎಂದು ನಂಬಿಕೊಂಡಿದ್ದಾರೆ. ಹಾಗಾಗಿ ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಆದರೆ ಕೆಲವರು ಮಾತ್ರ ಇದು ಫೇಕ್ ಅಕೌಂಟ್, ಸನ್ನಿ ಟ್ವೀಟ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.

ಹಿಂದಿ ಬಿಗ್‌ಬಾಸ್ ಶೋ ಮೂಲಕ ಬಾಲಿವುಡ್ ಪ್ರವೇಶಿಸಿದ ಸನ್ನಿ ಲಿಯೋನ್ ಮುಂದೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ನಂತರ ಐಟಂ ಸಾಂಗ್‌ಗಳಲ್ಲಿ ಕುಣಿದು ರಂಗೇರಿಸಿದರು. ಬಾಲಿವುಡ್‌ ನಂತರ ಸೌತ್ ಸಿನಿಮಾಗಳಲ್ಲೂ ಬಿಂದಾಸ್ ಆಗಿ ಹೆಜ್ಜೆ ಹಾಕಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸನ್ನಿ ಲಿಯೋನ್‌ಗೆ ಮಂಡ್ಯದಲ್ಲೂ ಅಭಿಮಾನಿ ಸಂಘವಿದೆ.

More from Filmibeat

English summary
Pawan Kalyan Vs Roja: Is Sunny Leone Angry With senior actress?. Recently Andra minister Roja Compares Pawan Kalyan With Sunny Leone. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X