ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ ಪವನ್ ಕಲ್ಯಾಣ್: ನಿರ್ದೇಶಕ ಯಾರು?

ರಾಜಕೀಯ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಮೂರು ವರ್ಷ ಸಿನಿಮಾ ರಂಗದಿಂದ ಬಿಡುವು ಪಡೆದಿದ್ದ ಪವನ್ ಕಲ್ಯಾಣ್, 'ವಕೀಲ್ ಸಾಬ್' ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ನಿಡಿದ್ದಾರೆ.

ರೀ ಎಂಟ್ರಿ ಮಾಡಿರುವ ಪವನ್ ಕಲ್ಯಾಣ್ ವೇಗವಾಗಿ ಒಂದರ ಹಿಂದೊಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ವಕೀಲ್ ಸಾಬ್' ತೆರೆಗೆ ಬರುವ ಮುನ್ನವೇ ಎರಡು ಸಿನಿಮಾಗಳ ಚಿತ್ರೀಕರಣ ಪ್ರಾರಂಭಿಸಿದ್ದ ಪವನ್ ಕಲ್ಯಾಣ್ ಇದೀಗ ಮೂರನೇ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ತೆಲುಗು ರೀಮೇಕ್‌ನಲ್ಲಿ ನಟಿಸುತ್ತಿರುವ ಪವನ್ ಕಲ್ಯಾಣ್ ಅದರ ಜೊತೆಗೆ 'ಹರಿ ಹರ ವೀರಮಲ್ಲು' ಹೆಸರಿನ ಐತಿಹಾಸಿಕ ಕತೆ ಆಧರಿತ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದರ ಜೊತೆಗೆ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ರೀಮೇಕ್ ಅಲ್ಲ ಸ್ವಮೇಕ್

ರೀಮೇಕ್ ಅಲ್ಲ ಸ್ವಮೇಕ್

ಈ ಹಿಂದೆ ಪವನ್ ಕಲ್ಯಾಣ್‌ಗಾಗಿ 'ಗಬ್ಬರ್ ಸಿಂಗ್' ಸಿನಿಮಾ ನಿರ್ದೇಶಿಸಿದ್ದ ಹರೀಶ್ ಶಂಕರ್ ಜೊತೆಗೆ ಪವನ್ ಕಲ್ಯಾಣ್ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಸಿನಿಮಾ ರೀಮೇಕ್ ಆಗಿರುವುದಿಲ್ಲ ಬದಲಿಗೆ ಸ್ವಮೇಕ್ ಆಗಿರಲಿದೆ.

ರಾಜಕೀಯ ಕತೆ ಆಧರಿಸಿದ ಸಿನಿಮಾ

ರಾಜಕೀಯ ಕತೆ ಆಧರಿಸಿದ ಸಿನಿಮಾ

ರಾಜಕೀಯ ಕತೆಯನ್ನು ಆಧರಿಸಿದ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣವು ಪವನ್ ಕಲ್ಯಾಣ್ 49ನೇ ಹುಟ್ಟುಹಬ್ಬಕ್ಕೆ ಆರಂಭಿಸುವ ಯೋಚನೆ ಇದೆ. ಸಿನಿಮಾವನ್ನು ಮೈತ್ರಿ ಮೂವೀಸ್ ಸಂಸ್ಥೆಯು ನಿರ್ಮಾಣ ಮಾಡಲಿದೆ. ಸಿನಿಮಾ ಬಿಡುಗಡೆ ಮುಂದಿನ ವರ್ಷ ಆರಂಭದಲ್ಲಿ ಆಗಲಿದೆ.

ಗಬ್ಬರ್ ಸಿಂಗ್ ನಿರ್ದೇಶಿಸಿದ್ದ ಹರೀಶ್ ಶಂಕರ್

ಗಬ್ಬರ್ ಸಿಂಗ್ ನಿರ್ದೇಶಿಸಿದ್ದ ಹರೀಶ್ ಶಂಕರ್

ಹರೀಶ್ ಶಂಕರ್ ತೆಲುಗಿನ ಹಿಟ್ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. 'ಷಾಕ್', 'ಮಿರಪಕಾಯ', 'ಗಬ್ಬರ್ ಸಿಂಗ್', ಜೂ.ಎನ್‌ಟಿಆರ್ ನಟಿಸಿರುವ 'ರಾಮಯ್ಯ ವಸ್ತಾವಯ್ಯ', ಅಲ್ಲು ಅರ್ಜುನ್ ನಟಿಸಿರುವ 'ದುವ್ವಾಡ ಜಗನ್ನಾಥ' ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ರಾಮ್ ಪೋತಿನೇನಿ ಜೊತೆ ಸಿನಿಮಾ ಮಾಡುತ್ತಿರುವ ಹರೀಶ್ ಆ ಸಿನಿಮಾದ ಬಳಿಕ ಪವನ್ ಜೊತೆ ಸಿನಿಮಾ ಆರಂಭಿಸಲಿದ್ದಾರೆ.

Recommended Video

ಸಿಎಂ ಸಾಹೇಬ್ರು ರಾಜೀನಾಮೆ ಕೊಡಬೇಕಂತೆ-ಮಠ ಡೈರೆಕ್ಟರ್ ರಿಂದ ಬಿಎಸ್ ವೈಗೆ ಫುಲ್ ಕ್ಲಾಸ್ | Guru prasad | Filmibeat Kannada
ಕೋಟಿ-ಕೋಟಿ ಬಾಚಿದ 'ವಕೀಲ್ ಸಾಬ್'

ಕೋಟಿ-ಕೋಟಿ ಬಾಚಿದ 'ವಕೀಲ್ ಸಾಬ್'

ಪವನ್ ಕಲ್ಯಾಣ್ ನಟಿಸಿದ್ದ 'ವಕೀಲ್ ಸಾಬ್' ಸಿನಿಮಾ ಏಪ್ರಿಲ್ 9 ರಂದು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಕೊರೊನಾ ಲಾಕ್‌ಡೌನ್ ನಡುವೆಯೂ ಸಿನಿಮಾ ಕೋಟಿ-ಕೋಟಿ ಬಾಚಿತ್ತು. ಇದೀಗ ಆಗಸ್ಟ್ ತಿಂಗಳಲ್ಲಿ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾ ರೀಮೇಕ್ ಬಿಡುಗಡೆ ಆಗಲಿದೆ. ಅದರ ನಂತರ 'ಹರಿ ಹರ ವೀರ ಮಲ್ಲು' ಸಿನಿಮಾ ಬಿಡುಗಡೆ ಆಗಲಿದೆ.

More from Filmibeat

English summary
Pawan Kalyan agreed to make movie with director Harish Shankar. Shooting will start in September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X