ಅಮಿತಾಬ್ ಬಚ್ಚನ್ ಕುರಿತು ಪವನ್ ಕಲ್ಯಾಣ್ ಭಾವುಕ ಪತ್ರ
ನಟ ಅಮಿತಾಬ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ತಲುಗಿದೆ. ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಿತಾಬ್ ಬಚ್ಚನ್ ಬೇಗ ಗುಣಮುಖವಾಗಲಿ ಎಂದು ದೇಶದಾದ್ಯಂತ ಅವರ ಅಭಿಮಾನಿಗಳು, ಉದ್ಯಮದ ಗೆಳೆಯರು ಪ್ರಾರ್ಥನೆ ಮಾಡುತ್ತಿದ್ದಾರೆ.
Recommended Video
ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಹಲವು ನಟ-ನಟಿಯರು ಬಾಲಿವುಡ್ ದಿಗ್ಗಜ ಅಮಿತಾಬ್ ಬೇಗನೆ ಗುಣಮುಖವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದರ ನಡುವೆ ತೆಲುಗು ಸಿನಿ ಉದ್ಯಮದ ಖ್ಯಾತ ನಟ, ರಾಜಕಾರಣಿ ಪವನ್ ಕಲ್ಯಾಣ್ ಅಮಿತಾಬ್ ಕುರಿತಾಗಿ ಭಾವುಕ ಪತ್ರವನ್ನು ಬರೆದಿದ್ದಾರೆ.

ಅಮಿತಾಬ್ ಬಚ್ಚನ್ ಅಭಿಮಾನಿ ಪವನ್ ಕಲ್ಯಾಣ್
ಟ್ವಿಟ್ಟರ್‌ನಲ್ಲಿ ಚುಟುಕಾಗಿ ಅಮಿತಾಬ್ ಅವರಿಗೆ ಪತ್ರವೊಂದನ್ನು ಬರೆದಿರುವ ಪವನ್ ಕಲ್ಯಾಣ್, ಅಮಿತಾಬ್ ಬಚ್ಚನ್ ಅವರಿಗೆ ಹಿಂದೊಮ್ಮೆ ಹುಷಾರಿಲ್ಲದಾಗಿದ್ದಾಗ ಅವರ ಕುಟುಂಬ ನಡೆದುಕೊಂಡ ರೀತಿಯನ್ನು ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ. ಅಮಿತಾಬ್ ಅಭಿಮಾನಿಯಾಗಿ ಈ ಪತ್ರ ಬರೆದಿದ್ದೇನೆಂದು ಪವನ್ ಹೇಳಿದ್ದಾರೆ.

'ಕೂಲಿ' ಸಿನಿಮಾದ ಘಟನೆ ಮೆಲುಕು
ಹಿಂದೊಮ್ಮೆ ಬೆಂಗಳೂರಿನಲ್ಲಿ 'ಕೂಲಿ' ಸಿನಿಮಾದ ಚಿತ್ರೀಕರಣದ ವೇಳೆ ನಿಮಗೆ ತೀವ್ರವಾದ ಪೆಟ್ಟಾಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ ನಮ್ಮ ತಂದೆ-ತಾಯಿ ಸೇರಿದಂತೆ ಇಡೀಯ ನಮ್ಮ ಕುಟುಂಬ ನಿಮಗಾಗಿ ಪ್ರಾರ್ಥನೆ ಮಾಡಿದ್ದನ್ನು ನಾನು ಮರೆತಿಲ್ಲ' ಎಂದು ಬರೆದಿದ್ದಾರೆ ಪವನ್ ಕಲ್ಯಾಣ್.

'ಎಲ್ಲಾ ವಯೋಮಾನದವರನ್ನು ಸೆಳೆದಿದ್ದೀರಿ'
ನೀವು ಎಲ್ಲಾ ವಯೋಮಾನದವರನ್ನು ನಿಮ್ಮ ಪ್ರತಿಭೆಯಿಂದ ಸೆಳೆದಿದ್ದೀರಿ. ನಿಮಗೆ ಪ್ರತಿ ಬಾರಿಯೂ ಜನರಿಂದ ಇದೇ ರೀತಿಯ ಪ್ರೀತಿ, ಗೌರವ, ಆದರ ದೊರೆತಿದೆ, ಈಗಲೂ ದೊರೆಯುತ್ತಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಹಲವು ಕಾರಣಕ್ಕೆ ನಿಮ್ಮನ್ನು ಪ್ರೀತಿಸುತ್ತೇವೆ: ಪವನ್
ನಿಮ್ಮ ಅಗಾಧ ಪ್ರತಿಭೆಯಿಂದಾಗಿ ಮಾತ್ರವೇ ನಿಮ್ಮನ್ನು ನಾವು ಪ್ರೀತಿಸುವುದಿಲ್ಲ, ಬದಲಿಗೆ ನಿಮ್ಮ ಹೋರಾಟದ ಛಲ, ನಿಮ್ಮ ಸರಳತೆ, ನಿಮ್ಮ ವಿನಮ್ರತೆ, ಪರಸ್ಪರರ ಮೇಲೆ ತೋರುವ ಪ್ರೀತಿ ಈ ಎಲ್ಲಾ ಕಾರಣಕ್ಕೆ ನಾವು ನಿಮ್ಮನ್ನು ಇಷ್ಟೋಂದು ಪ್ರೀತಿಸುತ್ತೇವೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ತಾಯಿ ಧನ್ವಂತ್ರಿ ಆಶೀರ್ವಾದ ನಿಮ್ಮ ಮೇಲಿರಲಿ
ನಿಮಗೆ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ಆದಾಗ ನನಗೆ ನಿಜಕ್ಕೂ ತೀವ್ರ ಭಯವಾಯಿತು. ತಾಯಿ ಧನ್ವಂತ್ರಿಯು ನೀವು ಬೇಗ ಗುಣಮುಖವಾಗಲಿ ಎಂದು ಆಶೀರ್ವದಿಸಲಿ, ನೀವಿಬ್ಬರೂ ಬೇಗ ಗುಣಮುಖವಾಗಿ ಹೊರಬರುವುದನ್ನು ನೋಡಲು ಕಾತರನಾಗಿದ್ದೇನೆ' ಎಂದು ಪವನ್ ಹೇಳಿದ್ದಾರೆ.


Click it and Unblock the Notifications











