ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ಸರ್ಕಾರಿ ಕಾರಿನಲ್ಲಿ ಬಂದ ಖ್ಯಾತ ನಟಿ, ವ್ಯಾಪಕ ಆಕ್ರೋಶ

ಅಧಿಕಾರವನ್ನು ನಾನಾ ರೀತಿಯಲ್ಲಿ ಅನೇಕರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ತಮ್ಮ ವ್ಯೆಯಕ್ತಿಕ ಲಾಭಕ್ಕಾಗಿ ಅಥವಾ ಬೇರೆಯವರನ್ನು ಹೆದರಿಸಲು ಬೆದರಿಸಲು ತಮ್ಮ ಅಧಿಕಾರವನ್ನು ಬಳಸಿಕೊಳ್ಳುತ್ತಾರೆ. ರಾಜಕಾರಣಿಗಳು ತಮ್ಮ ಸ್ಥಾನವನ್ನು ಭ್ರಷ್ಟಾಚಾರ.. ಲಂಚಗುಳಿತನ.. ಸೇರಿ ಕೆಲ ಒಮ್ಮೆ ಅಪರಾಧಕ್ಕೂ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಇನ್ನು, ಚಿತ್ರರಂಗಕ್ಕೂ ಮತ್ತು ರಾಜಕೀಯಕ್ಕೆ ಗಾಢವಾದ ಸಂಬಂಧ ಇದೆ. ಈ ಸಂಬಂಧಕ್ಕೆ ತಲೆ ಬಾಗಿ ಕೂಡ..

ಕೆಲ ಒಮ್ಮೆ ಅಧಿಕಾರದ ದುರುಪಯೋಗವನ್ನು ಕೆಲವರು ಮಾಡುತ್ತಾರೆ. ಇದಕ್ಕೆ ನಿಧಿ ಅಗರ್‌ವಾಲ್ ಅವರ ಪ್ರಕರಣವೇ ಅತ್ಯುತ್ತಮ ಉದಾಹರಣೆ ಎನ್ನುವುದು ಸದ್ಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ.

Pawan Kalyan s Co-Star Nidhhi Agerwal Sparks Debate on Misuse of Government Protocol

ಹೌದು, ನಿಧಿ ಅಗರ್ವಾಲ್.. ತೆಲುಗು ಚಿತ್ರರಂಗದ ಖ್ಯಾತ ನಾಯಕಿ. ''ಇಸ್ಮಾರ್ಟ್ ಶಂಕರ್''.. ''ಭೂಮಿ''.. ''ಹೀರೋ'' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಿಧಿ ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಅಭಿನಯದ ''ಹರಿಹರ ವೀರಮಲ್ಲು'' ಚಿತ್ರದಲ್ಲಿ ಕೂಡ ನಾಯಕಿಯಾಗಿ ಮಿಂಚಿದ್ದರು. ಎಲ್ಲರ ಗಮನ ಸೆಳೆದಿದ್ದರು.

ಇಂಥಾ ನಿಧಿ ಅಗರ್ವಾಲ್ ಇತ್ತೀಚೆಗೆ ಭೀಮಾವರಂನಲ್ಲಿರುವ ''ಜ್ಯುವೆಲ್ಲರಿ ಶಾಪ್'' ಉದ್ಘಾಟನೆಯ ಕಾರ್ಯಕ್ರಮಕ್ಕೆ ತೆರಳಿದ್ದರು. ಹೈದರಾಬಾದ್‌ನಿಂದ ವಿಜಯವಾಡಕ್ಕೆ ವಿಮಾನದಲ್ಲಿ ಬಂದಿಳಿದರು.ಆದರೆ ವಿಜಯವಾಡದಿಂದ ಭೀಮಾವರಂಗೆ ಖಾಸಗಿ ವಾಹನದಲ್ಲಿ ಹೋಗದೇ ನಿಧಿ 'On Govt Duty.. AP 39 TA 5303' ಎಂಬ ಬೋರ್ಡ್ ಇದ್ದ ಸರ್ಕಾರಿ ಕಾರಿನಲ್ಲಿ ಹೋಗಿದ್ದರು.

ನಿಧಿ ಅಗರ್ವಾಲ್ ಅವರ ಈ ನಡೆ ಸದ್ಯ ಆಂಧ್ರದಲ್ಲಿ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಆಂಧ್ರದ ರಾಜಕೀಯ ಪಕ್ಷಗಳಿಗೆ ಕೂಡ ಇದು ಆಹಾರವಾಗಿದೆ. ಹಲವರು ನಿಧಿ ಅಗರ್ವಾಲ್‌ಗೆ ಈ ಸರ್ಕಾರಿ ವಾಹನ ಕಳುಹಿಸಿದ್ದು ಯಾರು ? ಈ ವಾಹನ ಯಾರದ್ದು ? ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಒಬ್ಬ ನಟಿಗೆ ಸರ್ಕಾರಿ ವಾಹನವನ್ನು ಹೀಗೆ ಕಳುಹಿಸಬಹುದಾ ? ಅಧಿಕಾರಿಗಳು ತಮ್ಮ ಅಧಿಕಾರದ ದುರ್ಬಳಕೆಯನ್ನು ಹೀಗೆ ಮಾಡಬಹುದಾ ? ಎಂದು ಕಿಡಿ ಕಾರುತ್ತಿದ್ದಾರೆ. ಆಂಧ್ರದ ಉಪಮುಖ್ಯಮಂತ್ರಿಯಾದ ಪವನ್ ಕಲ್ಯಾಣ್ ಅವರ ವಿರುದ್ದ ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದರ ನಡುವೆ ಕೆಲವರು ನಿಧಿ ಅಗರ್ವಾಲ್ ಅವರ ಪರ ವಕಾಲತ್ತು ಕೂಡ ವಹಿಸಿದ್ದು ಅದು ಸರ್ಕಾರಿ ಕಾರ್ ಅಲ್ಲ ಬದಲಿಗೆ ಖಾಸಗಿ ಕಾರ್ ಆಗಿರಬಹುದು ಎನ್ನುವ ವಾದವನ್ನು ಮಾಡುತ್ತಿದ್ದಾರೆ.

Pawan Kalyan s Co-Star Nidhhi Agerwal Sparks Debate on Misuse of Government Protocol

ಇನ್ನು ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ನಿಧಿ ಅಗರ್ವಾಲ್ ಸಮಜಾಯಿಷಿ ನೀಡುವ ಪ್ರಯತ್ನವನ್ನು ಮಾಡಿದ್ದು ನನಗೆ ಯಾವ ಸರ್ಕಾರಿ ಅಧಿಕಾರಿ ಕೂಡ ವಾಹನವನ್ನು ಕಳುಹಿಸಿಲ್ಲ. ಬದಲಿಗೆ ಕಾರ್ಯಕ್ರಮದ ಆಯೋಜಕರು ಆ ವಾಹನವನ್ನು ನನಗೆ ಕಳುಹಿಸಿದ್ದರು ಎಂದು ಹೇಳಿದ್ದಾರೆ. ಆಂಧ್ರ ಪ್ರದೇಶ ಸರ್ಕಾರದಲ್ಲಿರುವ ವ್ಯಕ್ತಿಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಇನ್ನುಳಿದಂತೆ ಸದ್ಯ ನಿಧಿ ಅಗರ್ವಾಲ್ ಪ್ರಭಾಸ್ ಅಭಿನಯದ ''ದಿ ರಾಜಾ ಸಾಬ್''ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಾಳವಿಕಾ ಮೋಹನ್ ಮತ್ತು ನಯನತಾರಾ ಕೂಡ ಈ ಚಿತ್ರದಲ್ಲಿದ್ದಾರೆ. ಮಾರುತಿ ನಿರ್ದೇಶನದ ಈ ಚಿತ್ರ ಈಗಾಗಲೇ ಭಾರೀ ನಿರೀಕ್ಷೆಯನ್ನು ಮೂಡಿಸಿದ್ದು ನಿಧಿ ಅಗರ್ವಾಲ್ ಅವರಿಗೆ ಕೂಡ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿವೆ.

ಇನ್ನು ''ದಿ ರಾಜಾ ಸಾಬ್'' ನಿಧಿ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಹ ಸಿನಿಮಾ. ಯಾಕೆಂದರೆ ನಿಧಿ ಮೊದಲೇ ಅವಕಾಶಗಳ ಬರ ಎದುರಿಸುತ್ತಿದ್ದಾರೆ. ಶ್ರೀಲೀಲಾ ಸೇರಿ ಹೊಸ ಹುಡುಗಿಯರ ಅಬ್ಬರದ ಮುಂದೆ ಮಂಕಾಗಿದ್ದಾರೆ. ಇನ್ನು ''ಹರಿಹರಿ ವೀರ ಮಲ್ಲು'' ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಹೀಗಾಗಿ '' ದಿ ರಾಜಾ ಸಾಬ್'' ನಿಧಿ ಪಾಲಿಗೆ ತುಂಬಾನೇ ಮಹತ್ವದ ಸಿನಿಮಾ ಎನ್ನುವ ಮಾತು ಸದ್ಯ ತೆಲುಗು ಉದ್ಯಮದಲ್ಲಿ ಕೇಳಿ ಬರುತ್ತಿವೆ.

More from Filmibeat

English summary
Did Nidhhi Agerwal misuse a government vehicle? The actress faced backlash after being seen in a car with an official board. Find out her full statement and the details behind the viral controversy.
Read more about: car viral video tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X