ಲವ್ ಮ್ಯಾರೇಜ್‌ಗಿಂತ ಅರೇಂಜ್ಡ್ ಮ್ಯಾರೇಜ್ ಬೆಸ್ಟ್; ನನಗೆ ಆ ಅವಕಾಶ ಸಿಗ್ಲಿಲ್ಲ; ರೇಣು ದೇಸಾಯಿ

ನಟ ಪವನ್ ಕಲ್ಯಾಣ್ ಹಾಗೂ ನಟಿ ರೇಣು ದೇಸಾಯಿ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಬಳಿಕ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾದರು. ಪವನ್ ಈಗಾಗಲೇ ಮತ್ತೊಂದು ಮದುವೆ ಆಗಿದ್ದಾರೆ. ಅದಕ್ಕೂ ಮುನ್ನ ಕೂಡ ಒಂದು ಮದುವೆ ಆಗಿ ಡಿವೋರ್ಸ್ ಪಡೆದಿದ್ದರು. ಸದ್ಯ ಲವ್ ಮ್ಯಾರೇಜ್‌ಗಿಂತ ಅರೇಂಜ್ಡ್ ಮ್ಯಾರೇಜ್ ಉತ್ತಮ ಎಂದು ಪವನ್ ಮಾಜಿ ಪತ್ನಿ ರೇಣು ದೇಸಾಯಿ ಹೇಳಿರುವುದು ವೈರಲ್ ಆಗ್ತಿದೆ.

ಅದಾಗಲೇ ಮದುವೆ ಆಗಿದ್ದ ಪವನ್ ಕಲ್ಯಾಣ್ ಅವರನ್ನು ರೇಣು ಪ್ರೀತಿಸಿದ್ದರು. ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟು ರೇಣು ಜೊತೆ ಪವನ್ 2ನೇ ಮದುವೆ ಆಗಿದ್ದರು. ಆದರೆ ಬಹಳ ಬೇಗ ಇಬ್ಬರೂ ದೂರಾಗುವಂತಾಯಿತು. ರೇಣು ಕೂಡ ಎರಡನೇ ಮದುವೆ ಆಗುತ್ತಾರೆ, ಎಂಗೇಜ್ಮೆಂಟ್ ನಡೆದಿದ್ದೆ ಎನ್ನಲಾಗಿತ್ತು. ಬಳಿಕ ಅದೆಲ್ಲಾ ಸುಳ್ಳಾಯಿತು. ಮಕ್ಕಳ ಜೊತೆಗೆ ಜೀವನ ಕಳೆಯಲು ಆಕೆ ಮನಸ್ಸು ಮಾಡಿದ್ದಾರೆ. ಆದರೆ ಆಗಾಗ್ಗೆ ಮಾಜಿ ಪತಿ ಪವನ್ ಕಲ್ಯಾಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

Pawan Kalyan s Ex Wife Renu Desai says Arranged Marriage Better Than Love Marriage

ಸೋಶಿಯಲ್ ಮೀಡಿಯಾದಲ್ಲಿ ರೇಣು ದೇಸಾಯಿ ಬಹಳ ಆಕ್ಟೀವ್ ಆಗಿದ್ದಾರೆ. ಗೋ ವೇಗನ್, ಪ್ರಾಣಿ-ಪಕ್ಷಿಗಳ ರಕ್ಷಣೆ ಕುರಿತ ಅಭಿಯಾನಕ್ಕೆ ದನಿಗೂಡಿಸುತ್ತಾರೆ. ಯೂಟ್ಯೂಬ್ ಸಂದರ್ಶನಗಳಲ್ಲಿ ಭಾಗಿ ಮಾತನಾಡುತ್ತಾರೆ. V6 Entertainment ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿ ಲವ್ ಮ್ಯಾರೇಜ್‌ ಹೋಲಿಸಿದರೆ ಅರೇಂಜ್ಡ್ ಮ್ಯಾರೇಜ್ ಉತ್ತಮ ಎಂದಿದ್ದಾರೆ.

"ನನ್ನ ಪ್ರಕಾರ ಅರೇಂಜ್ಡ್ ಮ್ಯಾರೇಜ್ ಒಳ್ಳೆದು. ಮದುವೆಯಾಗಿ 6 ತಿಂಗಳ ಬಳಿಕ ಪ್ರೀತಿ-ಗೀತಿ ಎಲ್ಲಾ ಹೊರಟು ಹೋಗುತ್ತೆ. ಇಬ್ಬರ ಅಭ್ಯಾಸಗಳು ಮುಖ್ಯವಾಗುತ್ತೆ. ನಮ್ಮ ಸಂಸ್ಕೃತಿಯಲ್ಲಿ ಮದುವೆ ಅಂದ್ರೆ ಎರಡು ಕುಟುಂಬಗಳು ಒಟ್ಟಿಗೆ ಸೇರಬೇಕು. ಇಬ್ಬರ ಪದ್ಧತಿಗಳು ಮುಖ್ಯ. ಒಂದು ಹುಡುಗಿಗೆ ನಾನು ಈ ಮನೆಯಲ್ಲಿ ಹುಟ್ಟಿ ಈ ಪದ್ಧತಿಯಲ್ಲಿ ಬೆಳೆದಿದ್ದೀನಿ, ಅತ್ತೆ ಮನೆಗೆ ಹೋದ್ರು ಅಲ್ಲಿ ಅದೇ ಪದ್ಧತಿಗಳಿದ್ದರೆ ಹೊಂದಿಕೊಳ್ಳುವುದು ಸುಲಭ. ಅರೇಂಜ್ಡ್ ಮ್ಯಾರೇಜ್ ಆದ್ರು ಈ ಡಿವೋರ್ಸ್ ಆಗಿಬಿಡುತ್ತೆ. ಅದು ಬೇರೆ ಚರ್ಚೆ.. ಆದ್ರೆ ಎರಡರಲ್ಲಿ ಯಾವ್ದು ಉತ್ತಮ ಅಂದ್ರೆ, ನನ್ನ ಆಯ್ಕೆ ಅರೇಂಜ್ಡ್ ಮ್ಯಾರೇಜ್" ಎಂದು ರೇಣು ದೇಸಾಯಿ ತಿಳಿಸಿದ್ದಾರೆ.

Pawan Kalyan s Ex Wife Renu Desai says Arranged Marriage Better Than Love Marriage

ನನಗೆ ಆ ಆಯ್ಕೆ ಇರಲಿಲ್ಲ. ನಾನು ಲವ್ ಮಾರೇಜ್ ಮಾಡ್ಕೊಂಡೆ. ಅವಕಾಶ ಇದ್ದಿದ್ರೆ, ಅರೇಂಜ್ಡ್ ಮ್ಯಾರೇಜ್ ಆಗ್ತಿದ್ದೆ. ಹಣೆಯಲ್ಲಿ ಏನು ಬರೆದಿದ್ಯೋ ಅದೇ ನಡೆಯುತ್ತೆ. ಹಣೆಬರಹದಲ್ಲಿ ಇರುವುದನ್ನು ದೇವರು ವಾಪಸ್ ಪಡೆಯೋಕೆ ಸಾಧ್ಯವಿಲ್ಲ, ಅದೇ ರೀತಿ ಕೊಡುವುದಕ್ಕೂ ಸಾಧ್ಯವಿಲ್ಲ. ಹಣೆಬರಹದಲ್ಲಿ ಇರುವುದನ್ನು ಅನುಭವಿಸಬೇಕಾದ್ದು ನಮ್ಮ ಕರ್ತವ್ಯ, ಕರ್ಮ. ಅದ್ಕೆ ಬಹಳ ಯೋಚಿಸಿ, ತಲೆ ಕೆಡಿಸಿಕೊಂಡು ಪ್ರಯೋಜನವಿಲ್ಲ ಎಂದು ರೇಣು ದೇಸಾಯಿ ವಿವರಿಸಿದ್ದಾರೆ.

ಪುಣೆಯಲ್ಲಿ ಹುಟ್ಟಿ ಬೆಳೆದ ರೇಣು ದೇಸಾಯಿ ಮೊದಲಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದರು. ತೆಲುಗಿನ 'ಬದ್ರಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆ ಚಿತ್ರದಲ್ಲಿ ಪವನ್ ಜೋಡಿಯಾಗಿ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯ, ಸ್ನೇಹ ಶುರುವಾಗಿತ್ತು. ಬಳಿಕ 'ಜಾನಿ' ಚಿತ್ರದಲ್ಲಿ ಇಬ್ಬರ ಮಧ್ಯೆ ಲವ್ ಆಗಿತ್ತು. ಅಷ್ಟರಲ್ಲಾಗಲೇ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. 2004ರಲ್ಲಿ ಮಗ ಕೂಡ ಹುಟ್ಟಿದ್ದ. 2008ರಲ್ಲಿ ಮೊದಲ ಪತ್ನಿಗೆ ಡಿವೋರ್ಸ್ ನೀಡಿ 2009ರಲ್ಲಿ ರೇಣು ದೇಸಾಯಿ ಜೊತೆ ಪವನ್ ಮದುವೆ ನಡೆದಿತ್ತು. ಬಳಿಕ ಮಗಳು ಹುಟ್ಟಿದ್ದಳು.

ಮದುವೆಯಾದ 3 ವರ್ಷಕ್ಕೆ ಪವನ್ ಹಾಗೂ ರೇಣು ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. 2012ರಲ್ಲಿ ಇಬ್ಬರೂ ಡಿವೋರ್ಸ್ ಪಡೆದರು. ಮರುವರ್ಷ ರಷ್ಯನ್ ಬೆಡಗಿ ಅನ್ನಾ ಲೆಜ್ನೆವಾ ಜೊತೆ ಪವನ್ 3ನೇ ಮದುವೆ ನಡೆದಿತ್ತು. ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲ ಚಿತ್ರಗಳಲ್ಲಿ ರೇಣು ಕೆಲಸ ಮಾಡಿದ್ದರು. ನಿರ್ಮಾಪಕಿ, ನಿರ್ದೇಶಕಿಯಾಗಿ ಅದೃಷ್ಟ ಪರೀಕ್ಷಿಸಿಕೊಂಡಿದ್ದರು.

Read more about: pawan kalyan tollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X