For Quick Alerts
  ALLOW NOTIFICATIONS  
  For Daily Alerts

  ವಕೀಲನಾಗಿದ್ದ ಪವನ್ ಕಲ್ಯಾಣ್ ಈಗ ಪೊಲೀಸ್: ಚಿತ್ರೀಕರಣ ಶುರು

  |

  ನಟ ಪವನ್ ಕಲ್ಯಾಣ್ ಹಲವು ಸಿನಿಮಾಗಳನ್ನು ಒಟ್ಟೊಟ್ಟಿಗೆ ಒಪ್ಪಿಕೊಂಡಿದ್ದಾರೆ. ಒಂದರ ಹಿಂದೊಂದರಂತೆ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಪವನ್ ಕಲ್ಯಾಣ್.

  ವಕೀಲ್ ಸಾಬ್ ಸಿನಿಮಾದ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೆ ಹೆಚ್ಚು ಸಮಯ ವಿರಾಮ ತೆಗೆದುಕೊಳ್ಳದೆ ಮತ್ತೊಂದು ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭಿಸಿದ್ದಾರೆ. ಚಿತ್ರೀಕರಣದ ಸ್ಟಿಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

  ಮಲಯಾಳಂ ನ ಸೂಪರ್ ಡೂಪರ್ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ತೆಲುಗು ರೀಮೇಕ್‌ ನ ಚಿತ್ರೀಕರಣ ಪ್ರಾರಂಭವಾಗಿದ್ದು, ಪವನ್ ಕಲ್ಯಾಣ್ ಭಾಗಗಳನ್ನು ಮೊದಲಿಗೆ ಚಿತ್ರೀಕರಣ ಮಾಡಲಾಗುತ್ತಿದೆ.

  ಗಾಡ ಹಸಿರು ಅಂಗಿ, ನೀಲಿ ಪ್ಯಾಂಟು ತೊಟ್ಟು ಹಳೆ ಮಾಡೆಲ್ ಬುಲೆಟ್ ಓಡಿಸುತ್ತಿರುವ ಪವನ್ ಕಲ್ಯಾಣ್ ಚಿತ್ರಗಳು ಸಖತ್ ವೈರಲ್ ಆಗುತ್ತಿವೆ. ಅದರ ಜೊತೆಗೆ ನಿರ್ದೇಶಕ ತ್ರಿವಿಕ್ರಮ್ ಜೊತೆಗೆ ಟೀ ಕುಡಿಯುತ್ತಾ ಮಾತನಾಡುತ್ತಿರುವ ಚಿತ್ರಗಳು ಸಹ ಹರಿದಾಡುತ್ತಿವೆ.

  ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ತ್ರಿವಿಕ್ರಿಮ್‌ ಆಪ್ತ ಸಾಗರ್ ಕೆ ಚಂದ್ರ. ಸಿನಿಮಾದಲ್ಲಿ ಮತ್ತೊಬ್ಬ ನಾಯಕನ ಪಾತ್ರವನ್ನು ರಾಣಾ ದಗ್ಗುಬಾಟಿ ನಿರ್ವಹಿಸಲಿದ್ದಾರೆ. ಪ್ರಸ್ತುತ ಪವನ್ ಕಲ್ಯಾಣ್ ನಟನೆಯ ದೃಶ್ಯಗಳ ಚಿತ್ರೀಕರಣ ಮಾಡಲಾಗುತ್ತಿದೆ. ರಾಣಾ ಇನ್ನೂ ಚಿತ್ರ ತಂಡ ಸೇರಿಕೊಂಡಿಲ್ಲ.

  ಪವನ್ ಕಲ್ಯಾಣ್ ಬುಲೆಟ್ ಮೇಲೆ ಕೂತು 'ಸುಧಾ ಲಾಡ್ಜ್' ಕಾಂಪೌಂಡ್ ಒಳಕ್ಕೆ ಸಿಟ್ಟಿನಿಂದ ಗಾಡಿ ಚಲಾಯಿಸಿಕೊಂಡು ಹೋಗುವ ದೃಶ್ಯವನ್ನು ಚಿತ್ರತಂಡವು ಯೂಟ್ಯೂಬ್‌ನಲ್ಲಿ ಪ್ರಕಟಿಸಿದೆ.

  ಮಾಡಿದ ತಪ್ಪನ್ನೆಲ್ಲ ಡೈರಿಯಲ್ಲಿ ಬರೆದು ಕ್ಷಮೆ ಕೇಳಿ ಪಶ್ಚಾತಾಪ ಪಟ್ಟಿದ್ದ ಜಯಶ್ರೀ | Filmibeat Kannada

  'ಅಯ್ಯಪ್ಪನುಂ ಕೋಶಿಯುಂ' ಸಿನಿಮಾವು ಒಬ್ಬ ಪೊಲೀಸ್ ಅಧಿಕಾರಿ ಹಾಗೂ ರಾಜಕೀಯ ಬ್ಯಾಗ್ರೌಂಡ್ ಉಳ್ಳ ಮಾಜಿ ಸೈನಿಕನ ನಡುವೆ ನಡೆವ ಸಂಘರ್ಷದ ಕತೆ ಒಳಗೊಂಡಿದೆ. ಮಲಯಾಳಂ ನಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

  Read more about: pawan kalyan
  English summary
  Actor Pawan Kalyan's new movie shooting starts. Pawan recently finished Vakeel Saab movie shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X