ಕನ್ನಡ ಚಿತ್ರರಂಗದಿಂದ ಕಾಣೆಯಾದ ಕರಾವಳಿ ಚೆಲುವೆ, ಪವನ್ ಕಲ್ಯಾಣ್ ''OG'' ಚಿತ್ರದಲ್ಲಿ ಪತ್ತೆ..!

ಕೇವಲ ಒಂದೇ ಒಂದು ಚಿತ್ರದಲ್ಲಿ ಅಭಿನಯಿಸಿದರೆ ಸಾಕು, ಕೆಲ ನಾಯಕಿಯರಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದು ಬಿಡುತ್ತೆ. ನೋಡ..ನೋಡುತ್ತಲೇ.. ಇವರು ತಮ್ಮ ಭಾಷೆಯ ಚಿತ್ರರಂಗದಿಂದಲೇ ಮರೆಯಾಗಿ ಬೇರೆ ಭಾಷೆಗಳಿಗೆ ಹಾರಿ ಅಲ್ಲಿ ಮಿರ ಮಿರ ಮಿಂಚಲು ಶುರು ಮಾಡುತ್ತಾರೆ. ಖ್ಯಾತಿಯ ಉತ್ತುಂಗಕ್ಕೇರುತ್ತಾರೆ. ಇದಕ್ಕೆ ರಶ್ಮಿಕಾ ಮಂದಣ್ಣ.. ಶ್ರೀಲೀಲಾ.. ಸೇರಿ ಹಲವಾರು ಉದಾಹರಣೆಗಳಿವೆ.

ಆದರೆ ಇನ್ನೂ ಕೆಲ ನಾಯಕಿಯರ ಬದುಕು ಇದಕ್ಕೆ ತದ್ವಿರುದ್ದವಾಗಿರುತ್ತೆ. ಎಷ್ಟೇ ಕಸರತ್ತು ಮಾಡಿದರೂ ಕೂಡ ಗೆಲುವು ಎನ್ನುವುದು ಇವರಿಗೆ ಸಿಗುವುದೇ ಇಲ್ಲ. ಅದೃಷ್ಟದ ಬಾಗಿಲು ತೆರೆಯುವುದೇ ಇಲ್ಲ. ಈ ಸಾಲಿಗೆ ಸೇರ್ಪಡೆಯಾಗುವ ನಟಿಯರಲ್ಲಿ ನೇಹಾ ಶೆಟ್ಟಿ ಕೂಡ ಒಬ್ಬರು.

Pawan Kalyan s OG Adds Kannada Actress Neha Shetty to Its Star-Studded Cast

ಹೌದು. ''ಮುಂಗಾರು ಮಳೆ 02'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ನೇಹಾ ಶೆಟ್ಟಿ. ಆದರೆ.. ದುರಾದೃಷ್ಟ ''ಪೂಜಾ ಗಾಂಧಿ'' ಚಟುವಟಿಕೆಗಳನ್ನು ಚುರುಕಾಗಿಸಿದ್ದ ಮಳೆ ಕರಾವಳಿಯ ಈ ಚೆಲುವೆಗೆ ಕೈ ಕೊಡ್ತು. ಈ ಕಾರಣಕ್ಕೆ ಕನ್ನಡ ಚಿತ್ರರಂಗದಲ್ಲಿ ಸಿಗಬೇಕಿದ್ದ ಫಸಲು ಕೈ ತಪ್ಪಿತು. ಹೀಗಾಗಿಯೇ ಆಂಧ್ರ ಪ್ರದೇಶಕ್ಕೆ ತೆರಳಿ ಸದ್ಯಕ್ಕೆ ಅಲ್ಲಿಯೇ ಬಿಡಾರವನ್ನ ಹೂಡಿರುವ ನೇಹಾ ಅವರ ಸಾಧನೆ ಅಲ್ಲಿಯೂ ಕೂಡ ಅಷ್ಟಕಷ್ಟೇ.

''ಮೆಹಬೂಬಾ''.. ''ರೂಲ್ಸ್ ರಂಜನ್''.. ''ಗ್ಯಾಂಗ್ಸ್ ಆಫ್ ಗೋದಾವರಿ''.. ''ಗಲ್ಲಿ ರೌಡಿ''.. ''ಮೋಸ್ಟ್ ಎಲಿಜೆಬಲ್ ಬ್ಯಾಚುಲರ್''.. ಹೀಗೆ ಹಲವು ಚಿತ್ರ ಮಾಡಿದರೂ ಕೂಡ ಇವರಿಗೆ ಗೆಲುವು ಸಿಗಲೇ ಇಲ್ಲ. ಇರುವುದರಲ್ಲಿ 2022ರಲ್ಲಿ ತೆರೆಗೆ ಬಂದ ''ಡಿಜೆ ಟಿಲ್ಲು'' ಇವರಿಗೆ ಚೂರು ಪಾರು ಹೆಸರು ತಂದು ಕೊಡ್ತು.

ಇಂಥಾ ನೇಹಾಗೆ ಸದ್ಯ ಬಂಪರ್ ಆಫರ್ ಸಿಕ್ಕಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು, ರಾಜಕೀಯ ರಂಗ ಮತ್ತು ಚಿತ್ರರಂಗ.. ಎರಡು ದೋಣಿಯ ನಾವಿಕ ಮತ್ತು ನಾಯಕನಾಗಿರುವ ಪವನ್ ಕಲ್ಯಾಣ್ ಸದ್ಯ ತಮ್ಮ ಬತ್ತಳಿಕೆಯಲ್ಲಿರುವ ಹಳೆಯ ಚಿತ್ರಗಳನ್ನೆಲ್ಲಾ ಖಾಲಿ ಮಾಡುತ್ತಾ ಬರುತ್ತಿದ್ದಾರೆ.

ಆ ಪೈಕಿ ಕೆಲ ದಿನಗಳ ಹಿಂದೆಯಷ್ಟೇ ತೆರೆಗೆ ಬಂದ ''ಹರಿಹರ ವೀರಮಲ್ಲು'' ಮಕಾಡೆ ಮಲಗಿಯಾಗಿದೆ. ಈಗ ಸದ್ಯ ಪವನ್ ಕಲ್ಯಾಣ್ ತಮ್ಮ ಇನ್ನೊಂದು ಹಳೆಯ ಚಿತ್ರ ''OG''ಯನ್ನು ತಮ್ಮ ಅಭಿಮಾನಿಗಳ ಮಡಿಲಿಗೆ ಹಾಕಲು ಸರ್ವ ಸನ್ನದ್ಧರಾಗಿದ್ದಾರೆ.

pawan-kalyans-og-adds-kannada-actress-neha-shetty-to-its-star-studded-cast

ಇದೇ ಚಿತ್ರದಲ್ಲಿ ಸದ್ಯ ನೇಹಾ ಶೆಟ್ಟಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ. ಈ ಸುದ್ದಿಯ ಮೇಲೆ ನೇಹಾ ಕೂಡ ಅಧಿಕೃತವಾದ ಮುದ್ರೆಯನ್ನು ಒತ್ತಿದ್ದು ಇತ್ತೀಚೆಗೆ ಶಾಪಿಂಗ್ ಮಾಲ್ ಉದ್ಘಾಟನೆ ಸಮಾರಂಭಕ್ಕೆ ಬಂದಾಗ ''OG'' ಚಿತ್ರದಲ್ಲಿ ತಾವು ಇರುವುದಾಗಿ ಹೇಳಿದ್ಧಾರೆ.

ಆದರೆ ಪಾತ್ರದ ಕುರಿತು ಹೆಚ್ಚು ಮಾತನಾಡದ ನೇಹಾ ನಿಮ್ಮೆಲ್ಲರನ್ನು ನನ್ನ ಪಾತ್ರ ಅಚ್ಚರಿಗೆ ದೂಡುವುದು ಖಚಿತ ಎನ್ನುವ ಮಾತುಗಳನ್ನಾಡಿದ್ದಾರೆ. ನೇಹಾ ಆಡಿದ ಈ ಮಾತು ಸದ್ಯ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ ಪವನ್ ಕಲ್ಯಾಣ್ ಅವರ ''OG'' ಚಿತ್ರದಲ್ಲಿ ನೇಹಾ ಇದ್ದಾರೆ ಎನ್ನುವ ಸುದ್ದಿ ಕಳೆದ ವರ್ಷದಿಂದಲೇ ಹರಿದಾಡುತ್ತಿತ್ತು.

ಆದರೆ.. ನೇಹಾ ಶೆಟ್ಟಿ ಈ ಚಿತ್ರದಲ್ಲಿ ಕೇವಲ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ನೇಹಾ ನನ್ನದು ಸರ್‌ಫ್ರೈಸ್ ರೋಲ್‌ ಅದನ್ನು ನೀವು ತೆರೆಯ ಮೇಲೆ ನೋಡಿಯೇ ಆನಂದಿಸಿ ಎಂದು ಹೇಳಿದ್ದಾರೆ. ಈ ಹಿನ್ನೆಲೆ ನೇಹಾ ಅವರ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇರಬಹುದು ಎಂಬ ಅಭಿಪ್ರಾಯ ಸದ್ಯ ಪಕ್ಕದ ಆಂಧ್ರದಲ್ಲಿ ವ್ಯಕ್ತವಾಗುತ್ತಿದೆ.

ಇನ್ನುಳಿದಂತೆ ಈ ಚಿತ್ರದಲ್ಲಿ ಬಾಲಿವುಡ್‌ ಸ್ಟಾರ್ ಇಮ್ರಾನ್ ಹಶ್ಮಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ಧಾರೆ. ಡಿವಿವಿ ದಾನಯ್ಯ ಚಿತ್ರಕ್ಕೆ ಹಣ ಹೂಡಿದ್ದಾರೆ.ಪ್ರಿಯಾಂಕ ಮೋಹನ್, ಅರುಣ್ ದಾಸ್, ಪ್ರಕಾಶ್ ರಾಜ್ ಸೇರಿದಂತೆ ಘಟಾನುಘಟಿ ಕಲಾವಿದರು 'OG' ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಎಸ್. ತಮನ್ ಸಂಗೀತವಿದೆ. ಪ್ರಭಾಸ್‌ಗೆ ''ಸಾಹೋ'' ಚಿತ್ರವನ್ನು ನಿರ್ದೇಶಿಸಿದ್ದ ಸುಜಿತ್ ಈ ಚಿತ್ರ ನಿರ್ದೇಶಿಸಿದ್ಧಾರೆ. ಸೆಪ್ಟೆಂಬರ್ 25ಕ್ಕೆ ಈ ಚಿತ್ರ ಬಿಡುಗಡೆಯಾಗಲಿದ್ದು ಅವತ್ತೇ ನೇಹಾ ಶೆಟ್ಟಿಯ ಪಾತ್ರ ಮತ್ತು ಅದಕ್ಕಿರುವ ಮಹತ್ವ ಗೊತ್ತಾಗಲಿದೆ.

More from Filmibeat

English summary
From her debut in "Mungaru Male 2" to a key role in the highly anticipated "OG," find out more about Neha Shetty's surprise appearance alongside Pawan Kalyan and Emraan Hashmi in this action-packed gangster film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X