For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ನಿರ್ದೇಶನದ ಈ ಸೂಪರ್ ಹಿಟ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದೇಕೆ ಪವನ್ ಕಲ್ಯಾಣ್?

  |

  ತೆಲುಗು ಸಿನಿಮಾರಂಗದ ಸ್ಟಾರ್ ನಟರಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೂಡ ಒಬ್ಬರು. ವರ್ಷಕ್ಕೆ ಒಂದೇ ಸಿನಿಮಾ ಮಾಡುವ ಪವನ್ ಕಲ್ಯಾಣ್ ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ, ಅಭಿಮಾನಿಗಳನ್ನು ರಂಜಿಸುತ್ತಾರೆ. ಸುಮಾರು 2 ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಪವನ್ ಕಲ್ಯಾಣ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.

  ಇದುವರೆಗೂ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಪವರ್ ಸ್ಟಾರ್ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಂದಹಾಗೆ ಪವನ್ ಕಲ್ಯಾಣ್ ಅನೇಕ ಸೂಪರ್ ಹಿಟ್ ಸಿನಿಮಾಗಳ ಆಫರ್ ಗಳನ್ನು ರಿಜೆಕ್ಟ್ ಮಾಡಿದ್ದಾರೆ. ಪವನ್ ಕಲ್ಯಾಣ್ ರಿಜೆಕ್ಟ್ ಮಾಡಿದ ಸಿನಿಮಾಗಳಲ್ಲಿ ರಾಜಮೌಳಿ ನಿರ್ದೇಶಕ ಬ್ಲಾಕ್ ಬಸ್ಟರ್ ಸಿನಿಮಾ ಕೂಡ ಸೇರಿದೆ ಎನ್ನುವುದೇ ವಿಶೇಷ. ಅಂದಹಾಗೆ ಪವನ್ ಕಲ್ಯಾಣ್ ರಿಜೆಕ್ಟ್ ಮಾಡಿದ ರಾಜಮೌಳಿ ಸಿನಿಮಾ ಯಾವುದು? ಇಲ್ಲಿದೆ ಮಾಹಿತಿ.

  'ವಿಕ್ರಮಾರ್ಕುಡು' ಸಿನಿಮಾ ರಿಜೆಕ್ಟ್ ಮಾಡಿದ್ದ ಪವನ್ ಕಲ್ಯಾಣ್

  'ವಿಕ್ರಮಾರ್ಕುಡು' ಸಿನಿಮಾ ರಿಜೆಕ್ಟ್ ಮಾಡಿದ್ದ ಪವನ್ ಕಲ್ಯಾಣ್

  2006ರಲ್ಲಿ ಬಿಡುಗಡೆಯಾಗಿದ್ದ 'ವಿಕ್ರಮಾರ್ಕುಡು' ಸಿನಿಮಾವನ್ನು ಪವನ್ ಕಲ್ಯಾಣ್ ಮಾಡಬೇಕಿತ್ತು. ಕೆ.ವಿ ವಿಜಯೇಂದ್ರ ಪ್ರಸಾದ್ ಕಥೆ ಸಿದ್ಧಮಾಡಿಕೊಂಡು ಪವನ್ ಕಲ್ಯಾಣ್ ಬಳಿ ಹೋಗಿದ್ದರು. ಕಥೆ ಕೇಳಿ ಪವನ್ ಕಲ್ಯಾಣ್ ತುಂಬಾ ಇಷ್ಟಪಟ್ಟಿದ್ದರಂತೆ. ಕೆ.ವಿ ವಿಜಯೇಂದ್ರ ಪ್ರಸಾದ್ ಅಂದುಕೊಂಡಂತೆ ಆಗಿದ್ದರೆ ಪವನ್ ಕಲ್ಯಾಣ್ ಪೊಲೀಸ್ ಆಗಿ ಅಬ್ಬರಿಸಬೇಕಿತ್ತು. ಆದರೆ ಆಗಿದ್ದೇ ಬೇರೆ. ಈ ಸಿನಿಮಾದಲ್ಲಿ ನಟಿಸಲು ಪವನ್ ಕಲ್ಯಾಣ್ ಹಿಂದೇಟು ಹಾಕಿದರು. ಸಿನಿಮಾ ಪವನ್ ಕೈ ತಪ್ಪಿತು.

  ರಾಜಮೌಳಿ ಸಿನಿಮಾ ತಿರಸ್ಕರಿದ ಕಾರಣವೇನು?

  ರಾಜಮೌಳಿ ಸಿನಿಮಾ ತಿರಸ್ಕರಿದ ಕಾರಣವೇನು?

  ಕಥೆ ಇಷ್ಟಪಟ್ಟ ಪವನ್ ಕಲ್ಯಾಣ್ ಬಳಿಕ ಹಿಂದೇಟು ಹಾಕಿದ ಕಾರಣ ಸಿನಿಮಾದಿಂದ ಅಲ್ಪಾವಧಿ ಬ್ರೇಕ್ ಪಡೆಯಲು ಎನ್ನಲಾಗಿದೆ. ಚಿತ್ರರಂಗದಿಂದ ಅಲ್ಪಾವಧಿ ವಿಶ್ರಾಂತಿ ಬಯಸಿದ್ದ ಪವನ್ ಸಿನಿಮಾದಲ್ಲಿ ನಟಿಸಿಲ್ಲ ಎನ್ನುವ ಮಾತು ಕೇಳಿಬಂದಿತ್ತು. ಬಳಿಕ ರಾಜಮೌಳಿ ತಂದೆ ಅದೇ ಕಥೆಯನ್ನು ನಟ ರವಿ ತೇಜಗೆ ಹೇಳಿದರು. ಕಥೆ ಕೇಳಿ ರವಿ ತೇಜ ಗ್ರೀನ್ ಸಿಗ್ನಲ್ ಸಹ ನೀಡಿದರು. ಈ ಸಿನಿಮಾ ರವಿ ತೇಜ ಅವರ ಸಿನಿ ಜೀವನವನ್ನು ಎತ್ತರಕ್ಕೆ ಕೊಂಡೊಯ್ತು. ಅಲ್ಲದೆ ದೊಡ್ಡ ಸ್ಟಾರ್ ಡಮ್ ತಂದುಕೊಟ್ಟ ಸಿನಿಮಾವಾಗಿದೆ.

  'ಪೋಕಿರಿ' ಸಿನಿಮಾ ತಿರಸ್ಕರಿಸಿದ್ದ ಪವರ್ ಸ್ಟಾರ್

  'ಪೋಕಿರಿ' ಸಿನಿಮಾ ತಿರಸ್ಕರಿಸಿದ್ದ ಪವರ್ ಸ್ಟಾರ್

  ಪವನ್ ಕಲ್ಯಾಣ್ ರಿಜೆಕ್ಟ್ ಮಾಡಿದ ಸೂಪರ್ ಹಿಟ್ ಸಿನಿಮಾಗಳಲ್ಲಿ ಪೋಕಿರಿ ಸಿನಿಮಾ ಕೂಡ ಒಂದು. ಪುರಿ ಜಗನ್ನಾಥ್ ನಿರ್ದೇಶನದ ಬ್ಲಾಕ ಬಸ್ಟರ್ ಪೋರಿಕಿ ಸಿನಿಮಾಗೆ ಮೊದಲು ಆಫರ್ ಮಾಡಿದ್ದು ಪವನ್ ಕಲ್ಯಾಣ್ ಅವರಿಗೆ. ಆದರೆ ಆ ಸಮಯಕ್ಕೆ ಡೇಟ್ ಹೊಂದಾಣಿಕೆಯಾಗದ ಕಾರಣ ಈ ಸಿನಿಮಾವನ್ನು ಪವನ್ ತಿರಸ್ಕರಿಸಿದರು. ಬಳಿಕ ಈ ಸಿನಿಮಾದಲ್ಲಿ ಮಹೇಶ್ ಬಾಬು ನಾಯಕನಾಗಿ ಮಿಂಚಿದ್ರು. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಸಕ್ಸಸ್ ಆಯ್ತು.

  ಸಂಚಾರಿ ವಿಜಯ್ ಗೆ ದೊಡ್ಡ ಗೌರವ ಸಲ್ಲಿಸಿದ ಅಮೇರಿಕ ಚಿತ್ರಮಂದಿರ | Filmibeat Kannada
  ಪವನ್ ಕಲ್ಯಾಣ್ ಬಳಿ ಇರುವ ಸಿನಿಮಾಗಳು

  ಪವನ್ ಕಲ್ಯಾಣ್ ಬಳಿ ಇರುವ ಸಿನಿಮಾಗಳು

  ಪವನ್ ಕಲ್ಯಾಣ್ ಕೊನೆಯದಾಗಿ ವಕೀಲ್ ಸಾಬ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದು ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿದೆ. 'ಹರಿ ಹರ ವೀರ ಮಲ್ಲು' ಮತ್ತ ಮಲಯಾಳಂನ ಸೂಪರ್ ಹಿಟ್ 'ಅಯ್ಯಪ್ಪನುಮ್ ಕೋಶಿಯುಮ್' ರಿಮೇಕ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಹರಿ ಹರ ವೀರ ಮಲ್ಲು' ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. 'ಅಯ್ಯಪ್ಪನುಮ್ ಕೋಶಿಯುಮ್' ಪ್ರಾರಂಭ ಮಾಡಬೇಕಿದೆ.

  English summary
  Telugu Power Star Pawan Kalyan’s Reason Behind Not Doing SS Rajamouli's Vikramakudu Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X