ಪವನ್ ಕಲ್ಯಾಣ್ ಬಾಡಿಗಾರ್ಡ್ ಮನೆ ಮೇಲೆ ದಾಳಿ ; ರಾಜಕೀಯ ಷಡ್ಯಂತ್ರದ ಶಂಕೆ..?
ಆಂಧ್ರದ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಅಭಿಮಾನಿಗಳಷ್ಟೇ ಅಲ್ಲ, ವಿರೋಧಿಗಳು ಕೂಡ ಇದ್ದಾರೆ. ಯಾಕೆಂದರೆ ಪವನ್ ಕಲ್ಯಾಣ್ ಆಕ್ಟರ್ ಮಾತ್ರ ಅಲ್ಲ ಪೊಲಿಟಿಕಲ್ ಲೀಡರ್ ಕೂಡ ಹೌದು.
ಜನಸೇನಾ ಪಕ್ಷದ ಬಾವುಟವನ್ನ ಶತಾಯು ಗತಾಯು ಮಾಡಿಯಾದರೂ ಬಾನೆತ್ತರಕ್ಕೆ ಹಾರಿಸಬೇಕೆಂಬ ಶಪಥವನ್ನ ಮಾಡಿರುವ ಪವನ್ ಕಲ್ಯಾಣ್ , ಅಲ್ಲಿನ ಮುಖ್ಯಮಂತ್ರಿ ಜಗನ್ ವಿರುದ್ಧ ಸಮರವನ್ನೂ ಸಾರಿದ್ದಾರೆ. ಪೀಠಾಪುರಂ ಕ್ಷೇತ್ರದಿಂದ ಆಂಧ್ರಪ್ರದೇಶದ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ.

ಇಂಥ ಪವನ್ ಕಲ್ಯಾಣ್ ಅವರ ಬಾಡಿಗಾರ್ಡ್ ಒಬ್ಬರ ಮನೆ ಮೇಲೆ ಸದ್ಯಕ್ಕೆ ದಾಳಿಯಾಗಿದೆ. ಹೌದು.. ಪವನ್ ಕಲ್ಯಾಣ್ರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ವೆಂಕಟ್ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ. ಕತ್ತಿ, ದೊಣ್ಣೆ, ಕಲ್ಲುಗಳನ್ನು ಹಿಡಿದುಕೊಂಡು ವೆಂಕಟ್ ಮನೆಯ ಮೇಲೆ ದಾಳಿ ಮಾಡಲಾಗಿದ್ದು ಮನೆಯ ಮುಂದಿದ್ದ ವಾಹನ, ಮನೆಯ ಒಳಗಿನ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದೆ.
ಇನ್ನೂ ಪವನ್ ಕಲ್ಯಾಣ್ ಬಾಡಿಗಾರ್ಡ್ ಮೇಲೆ ಹಲ್ಲೆ ನಡೆದ ಬೆನ್ನಲ್ಲಿಯೇ, ಪವನ್ ಕಲ್ಯಾಣ್ ವಿರುದ್ಧ ವ್ಯವಸ್ಥಿತ ಷಡ್ಯಂತ್ರ.. ಪಿತೂರಿ.. ನಡೆಯುತ್ತಿದೆ ಅನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ ಇದನ್ನ ಖುದ್ದು ಪವನ್ ಕಲ್ಯಾಣ್ ಅಂಗರಕ್ಷಕ ವೆಂಕಟ್ ಅಲ್ಲಗೆಳೆದಿದ್ದಾರೆ. ಈ ಜಗಳಕ್ಕೆ ವ್ಯೆಯಕ್ತಿಕ ವಿಚಾರ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಹೌದು, ಅಸಲಿಗೆ ತಮ್ಮ ಮನೆ ಎದುರು ಇರುವ ರಾಜು ಮೊದಲಿಂದ ಒಂದಿಲ್ಲೊಂದು ವಿಚಾರಕ್ಕೆ ಕಿರಿಕ್ ಮಾಡ್ತಿದ್ದ ಎಂದಿರುವ ವೆಂಕಟ್, ಮೊನ್ನೆ ರಾತ್ರಿ ಎಂಟು ವರ್ಷದ ಬಾಲಕ ತಮ್ಮ ಪುತ್ರಿಗೆ ಅಸಹ್ಯಕರವಾಗಿ ಸಂಜ್ಞೆಗಳನ್ನು ಮಾಡಿದ್ದನ್ನು ನನ್ನ ಪತ್ನಿ ಸರಿತಾ ಪ್ರಶ್ನೆ ಮಾಡಿದ್ದರು ಎಂದಿದ್ದಾರೆ. ಇದಾದ ನಂತರ ಶುರುವಾದ ಜಗಳ ಆ ನಂತರ ವಿಕೋಪಕ್ಕೆ ಹೋಯಿತು. ಆ ನಂತರ ರಾಜು ಅವರ ಮನೆಯ ವ್ಯಕ್ತಿಗಳು ಇತರರೊಂದಿಗೆ ವೆಂಕಟ್ ಅವರ ನಿವಾಸದ ಮೇಲೆ ದೊಣ್ಣೆಗಳು, ಇಟ್ಟಿಗೆಗಳು ಮತ್ತು ಕಬ್ಬಿಣದ ರಾಡ್‌ಗಳಿಂದ ದಾಳಿ ಮಾಡಿದರು ಎಂದಿದ್ದಾರೆ ವೆಂಕಟ್. ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಪೊಲೀಸರು ಬಂದಿದ್ದಕ್ಕಷ್ಟೆ ತಾವು ಜೀವ ಸಹಿತ ಇರುವುದಾಗಿಯೂ ಕೂಡ ಹೇಳಿದ್ದಾರೆ.
ವೆಂಕಟ್ ಅವರ ವಾಹನ ಬೀಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಕಿಡಿಗೇಡಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದಿದ್ದಾರೆ. ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ವೆಂಕಟ್ ಮನೆ ಮೇಲೆ ದಾಳಿ ಮಾಡಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಅಂದ ಹಾಗೇ ವೆಂಕಟ್ ಹಲವು ವರ್ಷಗಳಿಂದಲೂ ಪವನ್ ಕಲ್ಯಾಣ್ ಬಳಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ತಮ್ಮ ಊರಿನಲ್ಲಿ ಜನಸೇನಾ ಪಕ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸ್ಥಳೀಯ ರಾಜಕೀಯ ಮುಖಂಡರ ಜೊತೆ ವೈರತ್ವ ಕೂಡ ಬೆಳೆಸಿಕೊಂಡಿದ್ದಾರೆ.
ಸದ್ಯಕ್ಕೆ ವೆಂಖಟ್ ನೀಡಿರುವ ದೂರಿನ ಅನ್ವಯ ಪೊಲೀಸ್‌ರು ಸೆಕ್ಷನ್ 307, 448, 427, 435. ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಜನಸೇನಾ ಪಕ್ಷದ ಕಾರ್ಯಕರ್ತರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.


Click it and Unblock the Notifications











