For Quick Alerts
  ALLOW NOTIFICATIONS  
  For Daily Alerts

  ಅಣ್ಣ ಚಿರಂಜೀವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪವನ್ ಕಲ್ಯಾಣ್ ಭರ್ಜರಿ ಗಿಫ್ಟ್

  |

  ತೆಲುಗು ಸಿನಿ ಇಂಡಸ್ಟ್ರೀಯ ಮೆಗಾಪವರ್ ಜೋಡಿ, ಪವನ್ ಕಲ್ಯಾಣ್ ಮತ್ತು ಚಿರಂಜೀವಿ ನಡುವೆ ಎದ್ದಿದ್ದ ಅಸಮಾಧಾನದ ಕಾರ್ಮೋಡ ಕರಗಿದ್ದು, ಮೊದಲಿನ ಪ್ರೀತಿ-ವಿಶ್ವಾಸ ಮತ್ತೆ ಮೂಡಿದೆ.

  ಕೆಲವೇ ವರ್ಷಗಳ ಹಿಂದೆ ಅಣ್ಣ-ತಮ್ಮಂದಿರಿಬ್ಬರೂ ಬಹಿರಂಗವಾಗಿಯೇ ಪರಸ್ಪರರ ಮೇಲೆ ಅಸಮಾಧಾನ ಹೊರಹಾಕಿದ್ದರು. ಮತ್ತೊಬ್ಬ ಸಹೋದರ ನಾಗೇಂದ್ರ ಬಾಬು ಸಹ ಪವನ್ ಮೇಲೆ ಸಿಟ್ಟು ಹೊರಹಾಕಿದ್ದರು. ಆದರೆ ಈಗದೆಲ್ಲಾ ಇತಿಹಾಸ ಸೇರಿದೆ.

  ನಿರ್ದೇಶಕ ಪವನ್ ಕುಮಾರ್ ಬದುಕನ್ನೇ ಬದಲಿಸಿದ ಆ ಕ್ಷಣನಿರ್ದೇಶಕ ಪವನ್ ಕುಮಾರ್ ಬದುಕನ್ನೇ ಬದಲಿಸಿದ ಆ ಕ್ಷಣ

  ಹೊಸ ವಿಷಯವೆಂದರೆ ಪವನ್ ಕಲ್ಯಾಣ್ ಅವರು ಅಣ್ಣ ಚಿರಂಜೀವಿ ಹುಟ್ಟುಹಬ್ಬದಂದೇ ಮೆಗಾ ಫ್ಯಾಮಿಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದ್ದಾರೆ. ಯಾವುದಾ ಗಿಫ್ಟ್‌, ಮುಂದೆ ಓದಿ...

  ಚಿರಂಜೀವಿ ಹುಟ್ಟುಹಬ್ಬಕ್ಕೆ ಪವನ್ ಸಿನಿಮಾ

  ಚಿರಂಜೀವಿ ಹುಟ್ಟುಹಬ್ಬಕ್ಕೆ ಪವನ್ ಸಿನಿಮಾ

  ಆಗಸ್ಟ್ 22 ರಂದು ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬ. ಅದೇ ದಿನ ಪವನ್ ಕಲ್ಯಾಣ್ ಅವರ ಹೊಸ ಚಿತ್ರ 'ವಕೀಲ್ ಸಾಬ್' ಬಿಡುಗಡೆ ಆಗಲಿದೆ. ಆ ಮೂಲಕ ಮೆಗಾ ಫ್ಯಾಮಿಲಿ ಅಭಿಮಾನಿಗಳಿಗೆ ಸಿನಿಮಾ ರಸದೌತಣ ನೀಡಲು ಸಜ್ಜಾಗಿದ್ದಾರೆ.

  ಎರಡು ವರ್ಷಗಳ ನಂತರ ಬಣ್ಣ ಹಚ್ಚಿರುವ ಪವನ್

  ಎರಡು ವರ್ಷಗಳ ನಂತರ ಬಣ್ಣ ಹಚ್ಚಿರುವ ಪವನ್

  ಎರಡು ವರ್ಷಗಳ ನಂತರ ಬಣ್ಣ ಹಚ್ಚಿರುವ ಪವನ್ ಕಲ್ಯಾಣ್ ಅವರ ಹೊಸ ಚಿತ್ರ ವಕೀಲ್ ಸಾಬ್ ಇನ್ನೂ ಬೇಗನೇ ಬಿಡುಗಡೆ ಆಗಬೇಕಿತ್ತು, ಆದರೆ ಕೊರೊನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆ ಮುಂದೆ ಹೋಗಿದೆ. ಕೊರೊನಾ ಲಾಕ್‌ಡೌನ್ ಮುಗಿದ ಮೇಲೆ ಅಳಿದುಳಿದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿ ಆಗಸ್ಟ್ 22 ರಂದೇ ತೆರೆಗೆ ಬರುವ ನಿರೀಕ್ಷೆ ಇಟ್ಟುಕೊಂಡಿದೆ ಚಿತ್ರತಂಡ.

  ಪ್ರಧಾನಿ ಮೋದಿ ದಾಖಲೆ ಮುರಿಯಲಾಗಲಿಲ್ಲ ರಜನೀಕಾಂತ್ ಗೆಪ್ರಧಾನಿ ಮೋದಿ ದಾಖಲೆ ಮುರಿಯಲಾಗಲಿಲ್ಲ ರಜನೀಕಾಂತ್ ಗೆ

  ಪಾತ್ರದ ಪೋಷಣೆಯಲ್ಲಿ ಹಲವು ಬದಲಾವಣೆ

  ಪಾತ್ರದ ಪೋಷಣೆಯಲ್ಲಿ ಹಲವು ಬದಲಾವಣೆ

  ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದ 'ಪಿಂಕ್' ಸಿನಿಮಾದ ತೆಲುಗು ರೀಮೇಕ್ 'ವಕೀಲ್ ಸಾಬ್'. ಆದರೆ ಕತೆಯ ನಿರೂಪಣೆಯಲ್ಲಿ, ಮುಖ್ಯ ಪಾತ್ರದ ಪೋಷಣೆಯನ್ನು ಪೂರ್ಣವಾಗಿ ಬದಲಾಯಿಸಲಾಗಿದೆ. ಪವನ್ ಕಲ್ಯಾಣ್ ಇಲ್ಲಿ, ಮಾಸ್ ಲುಕ್‌ನ ವಕೀಲರಾಗಿ ಕಾಣಿಸಿಕೊಳ್ಳಲಿದ್ದಾರೆ.

  ಎದುರಾಳಿ ವಕೀಲನಾಗಿ ಪ್ರಕಾಶ್ ರೈ

  ಎದುರಾಳಿ ವಕೀಲನಾಗಿ ಪ್ರಕಾಶ್ ರೈ

  ವಕೀಲ್ ಸಾಬ್ ನಲ್ಲಿ ಪ್ರಕಾಶ್ ರೈ ಎದುರಾಳಿ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಕೋರ್ಟ್ ರೂಂ ನ ದೃಶ್ಯಗಳು ಈಗಾಗಲೇ ಚಿತ್ರೀಕರಣವಾಗಿವೆ. ಕೆಲವು ದೃಶ್ಯಗಳ ಚಿತ್ರೀಕರಣವಷ್ಟೆ ಬಾಕಿ ಇದೆ. ಮೂಲ ಸಿನಿಮಾದಲ್ಲಿ ಇರದಿದ್ದ ಹಾಡುಗಳನ್ನು ಇಲ್ಲಿ ಸೇರಿಸಲಾಗಿದೆ ಎನ್ನಲಾಗುತ್ತಿದೆ.

  ಮೊದಲ ಬಾರಿಗೆ ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್: ಪಾತ್ರ ಯಾವುದು?ಮೊದಲ ಬಾರಿಗೆ ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್: ಪಾತ್ರ ಯಾವುದು?

  English summary
  Pawan Kalyan's new movie Vakeel Saab may releasing on Chiranjeevi's birthday that's on August 22.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X