ನಿರ್ಮಾಪಕರು ಕಿರುಕುಳ ನೀಡುತ್ತಿದ್ದಾರೆ ಎಂದು 'ಹೆಡ್‌ಬುಷ್' ನಟಿ ಬಹಿರಂಗ ಪೋಸ್ಟ್

ದೆಹಲಿ ಮೂಲದ ನಟಿ ಪಾಯಲ್ ರಜಪೂತ್ ಸೌತ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಚೆಲುವೆ ಕನ್ನಡ 'ಹೆಡ್‌ಬುಷ್' ಚಿತ್ರದಲ್ಲಿ ಮಿಂಚಿದ್ದರು. ಸದ್ಯ ಎರಡು ತಮಿಳು ಹಾಗೂ ಒಂದು ತೆಲುಗು ಸಿನಿಮಾ ಆಕೆಯ ಕೈಯಲ್ಲಿವೆ. ಇದೀಗ ಚಿತ್ರವೊಂದರ ನಿರ್ಮಾಪಕರ ಬಗ್ಗೆ ಆಕೆ ಆರೋಪ ಮಾಡಿದ್ದಾರೆ.

ತೆಲುಗಿನಲ್ಲಿ 'RX 100' ಸಿನಿಮಾ ಮಾಡಿ ಪಾಯಲ್ ಸಕ್ಸಸ್ ಕಂಡಿದ್ದರು. ಬಳಿಕ ಯಾವುದೇ ಸಿನಿಮಾ ಕೈಹಿಡಿಯಲಿಲ್ಲ. ಇತ್ತೀಚೆಗೆ ಅಜಯ್ ಭೂಪತಿ ನಿರ್ದೇಶನದ 'ಮಂಗಳವರಂ' ಸಿನಿಮಾ ಕೊಂಚಮಟ್ಟಿಗೆ ಸದ್ದು ಮಾಡಿತ್ತು. ಇದೆಲ್ಲದರ ನಡುವೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಚಿತ್ರದ ನಿರ್ಮಾಪಕರಿಂದ ತನಗೆ ಆಗುತ್ತಿರುವ ಕಿರುಕುಳದ ಬಗ್ಗೆ ಪಾಯಲ್ ಪ್ರತಿಕ್ರಿಯಿಸಿದ್ದಾರೆ.

Payal Rajput has accused the makers of Rakshana threatening to ban her from the Telugu cinema

"2019-2020ರ ಸಮಯದಲ್ಲಿ ನಾಉನುನಾನು 'ರಕ್ಷಣ' ಎಂಬ ಚಿತ್ರ ಒಪ್ಪಿಕೊಂಡೆ. ಮೊದಲು ಚಿತ್ರದ ಶೀರ್ಷಿಕೆ '5Ws' ಎಂದು ಇಡಲಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. ಆದರೆ ಇತ್ತೀಚೆಗೆ ನನಗೆ ಸಿಕ್ಕ ಯಶಸ್ಸು ನೋಡಿ ಈಗ ಆ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆದರೆ ಒಪ್ಪಂದದ ಪ್ರಕಾರ ನನಗೆ ನೀಡಬೇಕಾದ ಸಂಭಾವನೆಯನ್ನು ಇನ್ನು ಕೊಟ್ಟಿಲ್ಲ. ಆದರೆ ಚಿತ್ರದ ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸುತ್ತಿದ್ದಾರೆ" ಎಂದು ಪಾಯಲ್ ಬರೆದುಕೊಂಡಿದ್ದಾರೆ.

"ನಾನು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀನಿ. ಹಾಗಾಗಿ ನನ್ನ ತಂಡದವರು 'ರಕ್ಷಣ' ಚಿತ್ರತಂಡದ ಜೊತೆ ಮಾತನಾಡಿದ್ದಾರೆ. ಉಳಿದ ಸಂಭಾವನೆ ಕೊಡಬೇಕು ಎಂದು ಕೇಳಿದ್ದಾರೆ. ಆದರೆ ಅವರು ಅದಕ್ಕೆ ಒಪ್ಪಲು ಸಿದ್ಧರಿಲ್ಲ. ಆದರೆ ಅವರು ಮಾತ್ರ ಚಿತ್ರದ ಪ್ರಚಾರಕ್ಕೆ ಬರದಿದ್ದರೆ ನನ್ನನ್ನು ತೆಲುಗು ಚಿತ್ರರಂಗದಿಂದಲೇ ಬ್ಯಾನ್ ಮಾಡುವುದಾಗಿ ಬೆದರಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

ನನ್ನ ಹೆಸರನ್ನು ಡ್ಯಾಮೇಜ್ ಆಗುವಂತೆ ಬಳಸಲಾಗುತ್ತಿದೆ. ಇತ್ತೀಚಿನ ಮೀಟಿಂಗ್‌ನಲ್ಲಿ ನನ್ನ ಬಗ್ಗೆ ಅಸಭ್ಯ ಭಾಷೆ ಬಳಸಲಾಗಿದೆ. ನನಗೆ ನೀಡಬೇಕಾದ ಸಂಪೂರ್ಣ ಸಂಭಾವನೆಯನ್ನು ನೀಡದೆ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದಕ್ಕಾಗಿ ನಾನು ಈಗ ಕಾನೂನು ಕ್ರಮ ಕೈಗೊಳ್ಳಲು ಎಂದುಕೊಂಡಿದ್ದೇನೆ ಎಂದು ಆಕೆ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ 'ರಕ್ಷಣ' ಚಿತ್ರದಲ್ಲಿ ಪಾಯಲ್ ರಜಪೂತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದೆ. ಹರಿಪ್ರಿಯಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರಣದೀಪ್ ಠಾಕೋರಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರೋಷನ್ ಮತ್ತು ಬಿಗ್ ಬಾಸ್ ಖ್ಯಾತಿಯ ಮಾನಸ್ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಇತ್ತೀಚೆಗೆ ಘೋಷಿಸಿದೆ.

ಪಾಯಲ್ ರಜಪೂತ್ 'ರಕ್ಷಣ' ಚಿತ್ರದಲ್ಲಿ ನಟಿಸಿರುವ ಬಗ್ಗೆ ಅಭಿಮಾನಿಗಳು ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ವೀಟ್ ಆಗಿರುವ ಚೆಲುವೆ ಈ ಸಿನಿಮಾ ಬಗ್ಗೆ ಒಂದೇ ಒಂದು ಪೋಸ್ಟ್ ಮಾಡಲಿಲ್ಲ ಎಂದು ಹೇಳುತ್ತಿದ್ದಾರೆ. ದೆಹಲಿಯಲ್ಲಿ ಹುಟ್ಟಿ ಬೆಳೆದ ಪಾಯಲ್ ಮೊದಲಿಗೆ ಕಿರುತೆರೆ ಧಾರಾವಾಹಿಯಲ್ಲಿ ನಟಿಸಿದ್ದರು. 'ಸಪ್ನೋನ್ ಸೇ ಭಾರೆ ನೈನಾ' ಧಾರಾವಾಹಿಯಲ್ಲಿ ಸೋನಾಕ್ಷಿ ಎನ್ನುವ ಪಾತ್ರ ಮಾಡಿದ್ದರು.

'ಯೇ ಹೈ ಆಶಿಕಿ', 'ಪ್ಯಾರ್ ತುನೇ ಕ್ಯಾ ಕಿಯಾ', 'ಧರ್ ಸಬ್‌ಕೋ ಲಗ್ತಾ ಹೈ' ಹೀಗೆ ಹಲವು ಧಾರಾವಾಹಿಗಳಲ್ಲಿ ಪಾಯಲ್ ಮಿಂಚಿದ್ದಾರೆ. ಇನ್ನು ತಮ್ಮ ಬೋಲ್ಡ್ ಫೋಟೊಶೂಟ್‌ಗಳಿಂದ ಪಾಯಲ್ ಗಮನ ಸೆಳೆಯುತ್ತಿರುತ್ತಾರೆ. ಶೂನ್ಯ ನಿರ್ದೇಶನದ 'ಹೆಡ್‌ಬುಷ್' ಚಿತ್ರದಲ್ಲಿ ರೇಷ್ಮಾ ಎನ್ನುವ ಪಾತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದರು.

More from Filmibeat

English summary
Payal Rajput accused that makers of Rakshana film threaten
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X