'ಪ್ರೇಮಿಗಳ ದಿನ'ಕ್ಕೂ ಮುಂಚೆ ಬಾಯ್ ಫ್ರೆಂಡ್ ಪರಿಚಯ ಮಾಡಿದ ನಟಿ!
'ಆರ್ ಎಕ್ಸ್ 100' ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿ ಪ್ರವೇಶ ಮಾಡಿದ್ದ ನಟಿ ಪಾಯಲ್ ರಜಪೂತ್, ತನ್ನ ಬಾಲ್ಯದ ಗೆಳೆಯನ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.
ಸೌರಭ್ ಧಿಂಗ್ರಾ ಮತ್ತು ಪಾಯಲ್ ಬಾಲ್ಯದಿಂದಲೂ ಗೆಳೆಯರು. ಪರಸ್ಪರ ಇಬ್ಬರು ಸೋಶಿಯಲ್ ಮಿಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಇಬ್ಬರು ಡೇಟಿಂಗ್ ಮಾಡುತ್ತಿರುವ ಬಗ್ಗೆ ಅಧಿಕೃತವಾಗಿರಲಿಲ್ಲ.
ಫೆಬ್ರವರಿ 13 ರಂದು ಸೌರಭ್ ಧಿಂಗ್ರಾ ಹುಟ್ಟುಹಬ್ಬವಿದ್ದು, ಗೆಳೆಯನ ಬರ್ತಡೇಯನ್ನು ಪಾಯಲ್ ಆಚರಿಸಿದ್ದು, ಫೋಟೋ ಹಂಚಿಕೊಂಡಿದ್ದಾರೆ.

''ನನ್ನನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಂಡಿರುವ ವ್ಯಕ್ತಿ ನೀನೇ. ನನಗೆ ನಿನ್ನಷ್ಟು ಅಮೂಲ್ಯವಾದವರು ಯಾರೂ ಇಲ್ಲ. ನಾವು ಒಟ್ಟಿಗೆ ಕಳೆಯುವ ಪ್ರತಿಕ್ಷಣವನ್ನು ನಾನು ತುಂಬಾ ಇಷ್ಟಪಡುತ್ತೇನೆ. ನೀವು ನನ್ನ ಜೀವನದಲ್ಲಿ ನೀಡಿದ ಸಂತೋಷ ಮತ್ತು ಶಾಂತಿಗಾಗಿ ನಾನು ಕೃತಜ್ಞತೆಯಾಗಿದ್ದೇನೆ. ಹ್ಯಾಪಿ ಬರ್ತಡೇ ನನ್ನ ಜಾನ್'' ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಪಾಯಲ್ ಹಾಕಿರುವ ಈ ಪೋಸ್ಟ್ ನೋಡಿ ನೆಟ್ಟಿಗರು 'ಮೇಡ್ ಫಾರ್ ಈಚ್ ಫಾದರ್' ಎಂದು ಕಾಮೆಂಟ್ ಮಾಡ್ತಿದ್ದಾರೆ. ಇನ್ನು ಸೌರಭ್ ದಿಂಗ್ರಾ ಅವರು ನಟ ಹಾಗೂ ಗಾಯಕ. ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದಾರೆ.
'ಆರ್ ಎಕ್ಸ್ 100' ನಂತರ ಕೆಲವು ಚಿತ್ರಗಳನ್ನು ಮಾಡಿದರೂ ಸಕ್ಸಸ್ ಆಗಲಿಲ್ಲ. ವೆಂಕಟೇಶ್ ಮತ್ತು ನಾಗಚೈತನ್ಯ ಜೊತೆ 'ವೆಂಕಿಮಾಮ' ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.


Click it and Unblock the Notifications











