ಮದುವೆ ಮುನ್ನವೇ ಗರ್ಭಿಣಿಯಾದ್ರಾ ಪಾಯಲ್ ರಜಪೂತ್ ? ಬೇಬಿ ಬಂಪ್ ಕಂಡು ಬೆಚ್ಚಿ ಬಿದ್ದ ಅಭಿಮಾನಿಗಳು
ಮದುವೆ ಮುನ್ನ ಗರ್ಭಿಣಿಯಾಗುವುದು ಈಗೀಗ ತುಂಬಾನೇ ಕಾಮನ್. ಅದರಲ್ಲಿಯೂ ಚಿತ್ರರಂಗದಲ್ಲಿ ಇದು ಸರ್ವೆ ಸಾಮಾನ್ಯ. ಶ್ರೀದೇವಿ, ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ, ಆಲಿಯಾ ಭಟ್, ನೇಹಾ ಧೂಪಿಯಾ, ಸಾರಿಕಾ, ದಿಯಾ ಮಿರ್ಜಾ, ಹೀಗೆ ಹಲವಾರು ನಾಯಕಿಯರು ಈ ಟ್ರೆಂಡ್‌ನ ಫಾಲೋ ಮಾಡಿದ್ದಾರೆ. ಈ ಸಾಲಿನಲ್ಲಿ ಈಗ ಪಾಯಲ್ ರಜಪೂತ್ ಕೂಡ ಸೇರಿಕೊಂಡಿದ್ಧಾರಾ ಅನ್ನುವ ಅನುಮಾನ ಹಲವರನ್ನು ಈಗ ಕಾಡುತ್ತಿದೆ.
ಹೌದು, ಪಾಯಲ್ ರಜಪೂತ್.. ''ಆರ್ ಎಕ್ಸ್ 100'' ಚಿತ್ರದ ಮನಮೋಹಕ ಚೆಲುವೆ. ಇದೊಂದೇ ಚಿತ್ರದ ಮೂಲಕ ಭಾರತದೆಲ್ಲೆಡೆ ಮನೆ ಮಾತಾದ ಪಾಯಲ್ ಆ ನಂತರ ''ವೆಂಕಿ ಮಾಮಾ''... ''ಡಿಸ್ಕೋ ರಾಜಾ''.. ''ಆರ್ ಡಿ ಎಕ್ಸ್ ಲವ್''.. ''ಗಿನ್ನಾ''.. ''ಅನಗನಗಾ ಒಂದು ಅತಿಥಿ''.. ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದರು. ಕನ್ನಡದಲ್ಲಿ ''ಹೆಡ್ ಬುಷ್'' ಚಿತ್ರದಲ್ಲಿ ಕೂಡ ಕಾಣಿಸಿಕೊಂಡರು.

''ಕಿರಾತಕ'' .. ''ಗೋಲ್‌ಮಾಲ್''..''ಏಜೆಂಲ್''.. ಹೀಗೆ ಇನ್ನೂ ಕೆಲ ಚಿತ್ರಗಳು ಸದ್ಯ ಪಾಯಲ್ ಕೈಯಲ್ಲಿವೆ. ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾದರೂ ಪಾಯಲ್‌ಗೆ ಸೂಪರ್ ಸ್ಟಾರ್ ಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ ಅನ್ನೋದು ಬೇರೆ ವಿಷಯವಾದರೂ ಪಾಯಲ್ ಭರವಸೆ ಕಳೆದುಕೊಂಡಿಲ್ಲ. ಸತತ ಪ್ರಯತ್ನ ಮಾಡುತ್ತಲೇ ಇದ್ಧಾರೆ.
ಇಂಥಾ ಪಾಯಲ್ ರಜಪೂತ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇವರ ಬೇಬಿ ಬಂಪ್ ಕಂಡು ಸದ್ಯ ಹಲವರು ಬೆಚ್ಚಿ ಬಿದ್ದಿದ್ದಾರೆ. ಮದುವೆ ಮುನ್ನವೇ ಪಾಯಲ್ ಗರ್ಭಿಣಿಯಾದರಾ..? ಹೇಗೆ..? ಎನ್ನುವ ಚರ್ಚೆ ಮಾಡುತ್ತಿದ್ಧಾರೆ. ಕಾಮೆಂಟ್ ಮಾಡುವ ಮೂಲಕ ತಮ್ಮ ಅನುಮಾನ ಬಗೆಹರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ಧಾರೆ.
ಆದರೆ.. ಇದೇ ಸಮಯದಲ್ಲಿ ಪಾಯಲ್ ನಾನು ಗರ್ಭಿಣಿ ಆದರೆ ಗರ್ಭಿಣಿ ಅಲ್ಲ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಸಾಲನ್ನು ಗಮನಿಸಿದ ಹಲವರು ಇದು ಯಾವುದೋ ಚಿತ್ರದಲ್ಲಿ ಪಾಯಲ್ ಗರ್ಭಿಣಿಯ ಪಾತ್ರವನ್ನು ಮಾಡುತ್ತಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸತ್ಯ ಏನು..? ಪಾಯಲ್ ಅವರಿಗೆ ಗೊತ್ತು. ಅಭಿಮಾನಿಗಳ ಒತ್ತಾಯದ ಮೇರೆಗೆ ಅವರೇ ಹೇಳಬೇಕು.
ಪಾಯಲ್ ಹೃದಯ ಕದ್ದ ಹುಡುಗ ಯಾರು ?
ಅಂದ್ಹಾಗೇ ಪಾಯಲ್ ರಜ್‌ಪೂತ್ ಸದ್ಯ ತಮ್ಮ ಬಾಲ್ಯದ ಗೆಳೆಯ ಸೌರಭ್ ದಿಂಗ್ರಾ ಅವರ ಜೊತೆ ಪ್ರೇಮದ ಅಮಲನ್ನೇರಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಆಂಧ್ರದಲ್ಲಿ ಕೇಳಿ ಬರುತ್ತಿದೆ. ದೆಹಲಿ ಮೂಲದ ಇವರು ಗಾಯಕ ಮತ್ತು ಉದ್ಯಮಿ ಕೂಡ ಹೌದು.

ವಿಶೇಷ ಅಂದರೆ ಪಾಯಲ್ ತಮ್ಮ ಈ ಆತ್ಮೀಯ ಗೆಳೆಯನನ್ನು ತೆಲುಗು ಚಿತ್ರರಂಗಕ್ಕೆ ಕರೆ ತಂದಿದ್ಧಾರೆ. ತಮ್ಮ ಪ್ರಭಾವಳಿ ಬಳಸಿ ನಾಯಕನ ಪಟ್ಟ ಕಟ್ಟಿದ್ಧಾರೆ. ಹೇಮಂತ್ ಇಪ್ಪನಪಲ್ಲಿ ನಿರ್ದೇಶನದ ''ಫಸ್ಟ್ ಟೈಮ್'' ಚಿತ್ರದ ಮೂಲಕ ತೆಲುಗು ಚಿತ್ರ ಉದ್ಯಮಕ್ಕೆ ಸೌರಭ್ ಕಾಲಿಡುತ್ತಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆದಿತ್ತು. ಈ ಸಮಾರಂಭದ ಸಂಪೂರ್ಣ ಉಸ್ತುವಾರಿ ಪಾಯಲ್ ಅವರದ್ದೇ ಆಗಿತ್ತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಕೂಡ ಪಾಯಲ್ ಬಂದಿದ್ದರು. ಅನಿಕಾ ವಿಕ್ರಮನ್ ಈ ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಶೀಘ್ರದಲ್ಲಿಯೇ ಈ ಚಿತ್ರ ತೆರೆಗೆ ಬರಲಿದೆ.
ಸದ್ಯ ಪಾಯಲ್ ಹಂಚಿಕೊಂಡ ನಾನು ಗರ್ಭಿಣಿ, ಆದರೆ ಗರ್ಭಿಣಿ ಅಲ್ಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 20 ಗಂಟೆಗಳಲ್ಲಿ 35,500ಕ್ಕೂ ಅಧಿಕ ಜನ ಲೈಕ್ ಬಟನ್ ಒತ್ತಿದ್ಧಾರೆ. ಹಲವಾರು ಜನ ಕಾಮೆಂಟ್ ಮಾಡಿದ್ಧಾರೆ. ಒಟ್ನಲ್ಲಿ ಪಾಯಲ್ ರಜಪೂತ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications