ತನ್ನ ಬಾಡಿಗಾರ್ಡ್ ಕೆವಿನ್ ಕುಂಟಾ ಜನಪ್ರಿಯತೆ ಕಂಡು 'ಪೆದ್ದಿ' ನಟ ರಾಮ್‌ಚರಣ್‌ಗೆ ಶುರುವಾಯ್ತು ಭೀತಿ
ವೃದ್ದಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಬುಚ್ಚಿಬಾಬು ಸನಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ಜಾನ್ವಿ ಕಪೂರ್ ನಟಿಸಿದ್ದು ಶಿವಣ್ಣ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ವೇಳೆ ರಾಮ್‌ಚರಣ್ ಬಾಡಿಗಾರ್ಡ್ ಕೆವಿನ್ ಕುಂಟಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ರಾಮ್‌ಚರಣ್ ಬಂದಲ್ಲಿ ಕೆವಿನ್ ಕುಂಟಾ ಅವರ ರಕ್ಷಣೆಗೆ ನಿಲ್ಲುತ್ತಿದ್ದಾರೆ. MMA (Mixed Martial Arts) ಫೈಟರ್ ಕೂಡ ಆಗಿರುವ ಕೆವಿನ್ ಅಂತರರಾಷ್ಟ್ರೀಯ ಮಟ್ಟದ ಮಾರ್ಷಲ್ ಆರ್ಟ್ಸ್ ಪಂದ್ಯಗಳಲ್ಲಿ ಸ್ಪರ್ಧಿಸಿದ್ದಾರೆ. ಆಫ್ರಿಕಾದ ಗಾಂಬಿಯಾ ಮೂಲಕ ಈತ ಈಗ ಫ್ಲಾರೆನ್ಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ವಜ್ರದೇಹಿಯಾದ ಈತನ ಮೈಕಟ್ಟು, ಫಿಟ್‌ನೆಸ್ ರೊಟೀನ್ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಈತನಿಗೆ ದಿನಕ್ಕೆ 4 ಲಕ್ಷ ರೂ. ಸಂಭಾವನೆ ಕೊಟ್ಟು ತಮ್ಮ ಬಾಡಿಗಾರ್ಡ್ ಆಗಿ ರಾಮ್‌ಚರಣ್ ನೇಮಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

'ಪೆದ್ದಿ' ಚಿತ್ರದ ಪ್ರಚಾರಕ್ಕಾಗಿ ರಾಮ್‌ಚರಣ್ ಹೋದಲ್ಲಿ ಬಂದಲ್ಲಿ ಕೆವಿನ್ ಕುಂಟಾ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಬೆಂಗಳೂರಿಗೆ ಬಂದಿದ್ದಾಗ ಕೂಡ ಚರಣ್ ಹಿಂದೆ ಭದ್ರಕೋಟೆಯಾಗಿ ಕೆವಿನ್ ನಿಂತಿದ್ದು ಗೊತ್ತೇಯಿದೆ. ಸದ್ಯ ತಮ್ಮ ಬಾಡಿಗಾರ್ಡ್ ಬಗ್ಗೆ ಚಿರು ಪುತ್ರ ಕಾಮೆಂಟ್ಸ್ ವೈರಲ್ ಆಗ್ತಿದೆ. ಕಳೆದ 4 ವರ್ಷಗಳಿಂದ ನಾನು ಮಡದಿ ಮಕ್ಕಳ ಜೊತೆ ಎಲ್ಲೇ ಹೋದರೂ ಕೆವಿನ್ ಜೊತೆಗಿರುತ್ತಾನೆ ಎಂದು ರಾಮ್‌ಚರಣ್ ಹೇಳಿದ್ದಾರೆ.
ಕೆವಿನ್ ಕುಂಟಾ ಜನಪ್ರಿಯತೆ ಬಗ್ಗೆ ರಾಮ್‌ಚರಣ್ ಫನ್ನಿ ಕಾಮೆಂಟ್ ಮಾಡಿದ್ದಾರೆ. Entertainment LIVE ಹಿಂದಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ 'ಪೆದ್ದಿ' ಚಿತ್ರತಂಡ ಭಾಗಿ ಆಗಿದೆ. ಈ ವೇಳೆ ರಾಮ್‌ಚರಣ್ ಬಾಡಿಗಾರ್ಡ್ ಕೆವಿನ್ ಬಗ್ಗೆ ಪ್ರಶ್ನೆ ಎದುರಾಗಿದೆ. "ನೀವೆಲ್ಲಾ(ಮಾಧ್ಯಮದವರು) ಅವನನ್ನು ಬಹಳ ಫೇಮಸ್ ಮಾಡಿಬಿಟ್ಟಿದ್ದೀರಾ. ಅದಕ್ಕೆ ಈಗ ಅವ್ನು ಹೊರಡೆ ಓಡಾಡಲು ನಾನು ಬಿಡ್ತಿಲ್ಲ. ಯಾರಾದರೂ ಅವನಿಗೆ ಚಾಕ್ಲೆಟ್ ಅಥವಾ ಬಿಸ್ಕೆಟ್ ಕೊಟ್ಟು ನನ್ನ ಪರ್ಸನಲ್ ವಿಚಾರಗಳನ್ನು ಹೇಳುವಂತೆ ಆಮೀಷವೊಡ್ಡಿದ್ರೆ ಕಷ್ಟ" ಎಂದು ತಮಾಷೆ ಮಾಡಿದ್ದಾರೆ.
ಪಕ್ಕದಲ್ಲೇ ಇದ್ದ ಬಾಲಿವುಡ್ ನಟ ಬೊಮಾನ್ ಇರಾನಿ "ಆ ಟ್ರಿಕ್ ವರ್ಕೌಟ್ ಆಗುತ್ತಾ" ಎಂದು ಕೇಳಿದ್ದಾರೆ. ಅಲ್ಲೇ ಕ್ಯಾಮರಾ ಹಿಂದೆ ನಿಂತಿದ್ದ ಕೆವಿನ್ ಕಡೆ ತಿರುಗಿ "ಮಿಸ್ಟರ್ ಕೆವಿನ್.. ಎಂದು ಕೂಗಿದ್ದಾರೆ.. ಅವನು ನಮ್ಮ ಕುಟುಂಬದ ಜೊತೆ 4 ವರ್ಷಗಳಿಂದ ಸೆಕ್ಯುರಿಟಿಯಾಗಿ ಕೆಲಸ ಮಾಡ್ತಿದ್ದಾನೆ" ಎಂದಿದ್ದಾರೆ.
ಅಂದಹಾಗೆ ಕೆವಿನ್ ನಿಜವಾದ ಹೆಸರು ಅಬ್ದೂ ಕದಿರ್ ಸೋವ್. 1998ರಲ್ಲಿ ಜನಿಸಿದ ಈತನ್ನು ಗಾಂಬಿಯಾ ರೆಸ್ಲಿಂಗ್ ಅಸೋಸಿಯೇಷನ್‌ನಲ್ಲಿ ಮಾಮಾ ಲಾಮಿನ್ ಫಾರ್ ಬರ್ರಾ ಎಂದು ಕರೆಯುತ್ತಾರೆ. MMA ಫೈಟರ್‌ಗಳನ್ನು ಸೆಲೆಬ್ರೆಟಿಗಳು, ಉದ್ಯಮಿಗಳು ಬಾಡಿಗಾರ್ಡ್ ಆಗಿ ನೇಮಿಸಿಕೊಳ್ಳುವುದು ಹೊಸದೇನು ಅಲ್ಲ. ಆದರೆ ರಾಮ್‌ಚರಣ್ ಜೊತೆ ಕೆವಿನ್ ಹೈಟು, ಪರ್ಸನಾಲಿಟಿ ಎಲ್ಲರ ಹುಬ್ಬೇರಿಸುತ್ತಿದೆ. ಅದೇ ಕಾರಣಕ್ಕೆ ಆತನ ಬಗ್ಗೆ ಜನ ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಡುತ್ತಿದ್ದಾರೆ.
ಜೂನ್ 4ರಂದು ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಏಪ್ರಿಲ್ 30ಕ್ಕೆ ಬಿಡುಗಡೆ ಆಗಬೇಕಿದ್ದ 'ಪೆದ್ದಿ' ಚಿತ್ರವನ್ನು ಒಂದು ತಿಂಗಳು ತಡವಾಗಿ 'ಟಾಕ್ಸಿಕ್' ಬಿಟ್ಟುಕೊಟ್ಟ ದಿನದಂದು ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ರಾಮ್‌ಚರಣ್ ಕ್ರಿಕೆಟರ್ ಹಾಗೂ ಕುಸ್ತಿ ಪೈಲ್ವಾನ್ ಆಗಿ ನಟಿಸಿದ್ದಾರೆ. ಅಥ್ಲೆಟ್ ಆಗಿ ಕೂಡ ಕಮಾಲ್ ಮಾಡೋಕೆ ಬರ್ತಿದ್ದಾರೆ.


Click it and Unblock the Notifications