'ಪೆದ್ದಿ' ಚಿತ್ರಕ್ಕಾಗಿ ರಾಮ್‌ಚರಣ್ ಜೇಬಿಗಿಳಿಸಿದ್ದೆಷ್ಟು? ಶಿವಣ್ಣ ಸಂಭಾವನೆ ಎಷ್ಟು?

ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಒಂದು ತಿಂಗಳು ತಡವಾಗಿ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಅದ್ಭುತವಾದ ಸಿನಿಮಾ ಕಟ್ಟಿಕೊಡಬೇಕು ಎನ್ನುವ ಕಾರಣಕ್ಕೆ ಈ ಪೋಸ್ಟ್‌ಪೋನ್ ಎಂದು ಚಿತ್ರತಂಡ ಹೇಳಿದೆ.

ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗ್ತಿದೆ. ಜೂನ್ 4ಕ್ಕೆ 'ಟಾಕ್ಸಿಕ್' ಎದುರು ಈ ಸಿನಿಮಾ ಕೂಡ ಬರಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ರಾಮ್‌ಚರಣ್ ಜೊತೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್, ಜಗಪತಿ ಬಾಬು, ಬೊಮಾನ್ ಇರಾನಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕಲಾವಿದರು, ತಂತ್ರಜ್ಷರು ಸೇರಿ ಪ್ರತಿಯೊಬ್ಬರಿಗೂ ಭಾರೀ ಸಂಭಾವನೆ ಕೂಡ ಸಿಗುತ್ತಿದೆ.

Peddi cast salary Here s how much Ramcharan and shivarajkumar took home

ಮೈತ್ರಿ ಮೂವಿಮೇಕರ್ಸ್ ಸಂಸ್ಥೆ 'ಪೆದ್ದಿ' ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಚಿತ್ರದಲ್ಲಿ ರಾಮ್‌ಚರಣ್ ಕ್ರಿಕೆಟರ್ ಹಾಗೂ ಕುಸ್ತಿ ಪೈಲ್ವಾನ್ ಆಗಿ ಎರಡು ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ಮಿಂಚಿದ್ದಾರೆ. ಎ. ಆರ್‌ ರಹಮಾನ್ ಸಂಗೀತದಲ್ಲಿ ಚಿತ್ರದ 2 ಹಾಡುಗಳು ಬಿಡುಗಡೆ ಆಗಿ ಹಿಟ್ ಆಗಿದೆ. ಕುಸ್ತಿ ಪೈಲ್ವಾನ್ ಆಗಿ ಖಡಕ್ ಅವತಾರದಲ್ಲಿ ಚರಣ್ ಗಮನ ಸೆಳೆದಿದ್ದಾರೆ. ಸಿನಿಮಾ ಬಜೆಟ್ ಹಾಗೂ ಕಲಾವಿದರ ಸಂಭಾವನೆ ಬಗ್ಗೆ ಖಚಿತ ಮಾಹಿತಿ ಸಿಗುವುದು ಕಷ್ಟ. ಆದರೂ 'ಪೆದ್ದಿ' ಚಿತ್ರಕ್ಕಾಗಿ ಯಾರಿಗೆ ಎಷ್ಟು ಸಂಭಾವನೆ ಸಿಕ್ತು ಎನ್ನುವ ಬಗ್ಗೆ ಫಿಲ್ಮ್‌ನಗರ್‌ನಲ್ಲಿ ಭಾರೀ ಊಹಾಪೋಹ ಶುರುವಾಗಿದೆ.

ರಾಮ್‌ಚರಣ್ ಸಂಭಾವನೆ

ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ನಟಿಸಿ ರಾಮ್‌ಚರಣ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಹಾಲಿವುಡ್ ಅಂಗಳದಲ್ಲಿ ಕೂಡ ಸದ್ದು ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಅವ ಕ್ರೇಜ್ ಹೆಚ್ಚಾಗಿದೆ. ಇದೇ ಕಾರಣಕ್ಕೆ 'ಪೆದ್ದಿ' ಚಿತ್ರಕ್ಕಾಗಿ ಭಾರೀ ಸಂಭಾವನೆ ಪಡೆದಿದ್ದಾರೆ. ಚಿತ್ರಕ್ಕಾಗಿ ತನು-ಮನ ಅರ್ಪಿಸಿಕೊಂಡಿದ್ದಾರೆ. ಬರೀ ಸಸ್ಯಹಾರ ಸೇವಿಸಿ ಕುಸ್ತಿ ಪೈಲ್ವಾನ್ ಆಗಿ ಕಾಣಿಸಲು ಸಿಕ್ಸ್‌ಪ್ಯಾಕ್ ಮಾಡಿ ಹುಬ್ಬೇರಿಸಿದ್ದಾರೆ. ಚಿತ್ರಕ್ಕಾಗಿ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.

Peddi cast salary Here s how much Ramcharan and shivarajkumar took home

ಜಾನ್ವಿ ಕಪೂರ್ ಚಾರ್ಜ್ ಮಾಡಿದ್ದೆಷ್ಟು?

ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ನಸೀಬೆ ಚೆನ್ನಾಗಿಲ್ಲ. ತಾಯಿ ಸೂಪರ್ ಸ್ಟಾರ್ ಆಗಿದ್ದವರು. ತಂದೆ ಖ್ಯಾತ ನಿರ್ಮಾಪಕ. ಆದರೆ ಜಾನ್ವಿಗೆ ಮಾತ್ರ ಒಂದೇ ಒಂದು ಬ್ರೇಕ್ ಸಿಕ್ಕಿಲ್ಲ. ಬಾಲಿವುಡ್ ಬಿಟ್ಟು ದಕ್ಷಿಣಕ್ಕೂ ಜಾನ್ವಿ ಬಂದಿದ್ದಾರೆ. ಆದರೂ ಸಕ್ಸಸ್ ಮರೀಚಿಕೆಯಾಗಿದೆ. ಈಗ 'ಪೆದ್ದಿ' ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ 4 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡಿರುವ ಅಂದಾಜಿದೆ.

ಜಗಪತಿ ಬಾಬು ಕೇಳಿದ್ದೆಷ್ಟು?

ಪೋಷಕ ಪಾತ್ರಗಳಲ್ಲಿ ಪ್ರಕಾಶ್ ರಾಜ್ ಬಳಿಕ ಬಹಳ ಸದ್ದು ಮಾಡುತ್ತಿರುವ ನಟ ಜಗಪತಿ ಬಾಬು. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅವರು ಅವಕಾಶ ಪಡೆಯುತ್ತಾ ಬರ್ತಿದ್ದಾರೆ. 'ಪೆದ್ದಿ' ಚಿತ್ರಕ್ಕಾಗಿ ವಿಭಿನ್ನ ಗೆಟಪ್‌ನಲ್ಲಿ ದರ್ಶನ ಕೊಡುತ್ತಿದ್ದಾರೆ. ಚಿತ್ರಕ್ಕಾಗಿ 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಶಿವರಾಜ್‌ಕುಮಾರ್ ಸಂಭಾವನೆ ಎಷ್ಟು?

'ಜೈಲರ್' ಚಿತ್ರದ ನರಸಿಂಹ ಆಗಿ ಶಿವಣ್ಣ ಪರಭಾಷೆಗಳಲ್ಲಿ ಕೂಡ ಹವಾ ಎಬ್ಬಿಸಿದ್ದಾರೆ. ನರಸಿಂಹ ಆಗಿ ಅಬ್ಬರಿಸಿದ ಬಳಿಕ ತೆಲುಗು, ತಮಿಳಿನಿಂದ ಸಾಕಷ್ಟು ಅವಕಾಶಗಳು ಅವರನ್ನು ಅರಸಿ ಬಂದಿತ್ತು. 'ಪೆದ್ದಿ' ಚಿತ್ರದ ಪಾತ್ರ ಇಷ್ಟವಾಗಿ ನಟಿಸೋಕೆ ಒಪ್ಪಿದ್ದರು. ಈ ಪಾತ್ರಕ್ಕಾಗಿ 10ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಇನ್ನುಳಿದಂತೆ ಹಿರಿಯ ನಟ ಬೊಮಾನ್ ಇರಾನಿ 50 ಲಕ್ಷ ರೂ. ವಿವ್ಯೆಂದು ಶರ್ಮಾ 1 ಕೋಟಿ ರೂ. ಹಾಗೂ ರಾವು ರಮೇಶ್ 50 ಲಕ್ಷ ರೂ. ಸಂಭಾವನೆಯಾಗಿ ಪಡೆದಿರುವ ಅಂದಾಜಿದೆ. 'ಉಪ್ಪೆನ' ಸಿನಿಮಾ ಗೆದ್ದಿದ್ದ ಬುಚ್ಚಿಬಾಬು 5 ವರ್ಷಗಳ ಬಳಿಕ 'ಪೆದ್ದಿ' ಚಿತ್ರ ಕಟ್ಟಿಕೊಡುತ್ತಿದ್ದಾರೆ. ಈ ಚಿತ್ರಕ್ಕಾಗಿ 15 ಕೋಟಿ ರೂ. ಸಂಭಾವನೆ ಸಿಕ್ಕಿದೆ ಎನ್ನಲಾಗ್ತಿದೆ. ಇನ್ನು ಬಹುಬೇಡಿಕೆಯ ಸಂಗೀತ ನಿರ್ದೇಶಕ ಎ. ಆರ್ ರಹಮಾನ್ ಬರೋಬ್ಬರಿ 15 ಕೋಟಿ ರೂ. ಸಂಭಾವನೆ ಜೇಬಿಗಿಳಿಸಿದ್ದಾರೆ ಎಂದು ಚರ್ಚೆ ಆಗ್ತಿದೆ.

Read more about: shivarajkumar ramcharan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X