ಭಾರೀ ನಷ್ಟದ ಹಾದಿ ಹಿಡಿದ ರಾಮ್‌ಚರಣ್ 'ಪೆದ್ದಿ' ಸಿನಿಮಾ; ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಿತ್ತು. ಕೆಲವರು ಸಿನಿಮಾ ಮೆಚ್ಚಿಕೊಂಡ್ರೆ ಮತ್ತೆ ಕೆಲವರು ಚೆನ್ನಾಗಿಲ್ಲ ಎಂದು ಷರಾ ಬರೆದುಬಿಟ್ರು. ಆದರೂ ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಚೆನ್ನಾಗಿದೆ. ಈಗಾಗಲೇ ವಿಶ್ವದಾದ್ಯಂತ 332 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಲೆಕ್ಕ ಕೊಟ್ಟಿದೆ.

ಮೇಲ್ನೋಟಕ್ಕೆ 'ಪೆದ್ದಿ' ಸಿನಿಮಾ ಗಳಿಕೆ ಚೆನ್ನಾಗಿದೆ. ಆದರೆ ಬಜೆಟ್ ಜೊತೆ ಹೋಲಿಸಿದ್ರೆ ಪರಿಸ್ಥಿತಿ ಗಂಭೀರವಾಗಿದೆ. ಭಾರೀ ಮೊತ್ತಕ್ಕೆ ಥ್ರಿಯೇಟ್ರಿಕಲ್ ರೈಟ್ಸ್ ಸೇಲ್ ಆಗಿತ್ತು. ಉತ್ತರ ಭಾರತದಲ್ಲಿ ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆದರೆ ಅದು ಸಾಲುತ್ತಿಲ್ಲ. ವಾರದ ಬಳಿಕ ಸಿನಿಮಾ ದೊಡ್ಡದಾಗಿ ಪ್ರೇಕ್ಷಕರನ್ನು ಸೆಳೆಯುವುದಿಲ್ಲ. ಹಾಗಾಗಿ ಸದ್ಯ 'ಪೆದ್ದಿ' ನಷ್ಟದ ಹಾದಿ ಹಿಡಿದಿದ್ದಾನೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಶುರುವಾಗಿದೆ.

Peddi Faces Trouble at Box Office Strong Collections Still Fall Short of Recovery Target

ಓಟಿಟಿ, ಸ್ಯಾಟಲೈಟ್ ರೈಟ್ಸ್ ಸೇರಿ ನಿರ್ಮಾಪಕರು ಸೇಫ್ ಆದ್ರು, ರಾಮ್‌ಚರಣ್ ನಂಬಿ ಕೋಟಿ ಕೋಟಿ ಸುರಿದ ವಿತರಕರು, ಪ್ರದರ್ಶಕರು ನಷ್ಟ ಎದುರಿಸಬೇಕಾಗಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ. ತೆಲುಗು ರಾಜ್ಯಗಳಲ್ಲಿ ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡುತ್ತಿರುವುದೇ ಸಮಾಧಾನಕರ ಸಂಗತಿ ಎನ್ನಲಾಗ್ತಿದೆ. ಅಷ್ಟಕ್ಕೂ ಸಿನಿಮಾ ಬಜೆಟ್ ಎಷ್ಟು? ಥ್ರಿಯೇಟ್ರಿಕಲ್ ರೈಟ್ಸ್ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

350 ಕೋಟಿ ರೂ. ಬಜೆಟ್ ಸಿನಿಮಾ?

'ಪೆದ್ದಿ' ಬರೋಬ್ಬರಿ 350 ಕೋಟಿ ರೂ. ಸುರಿದು ಮಾಡಿರುವ ಸಿನಿಮಾ ಎನ್ನಲಾಗ್ತಿದೆ. ರಾಮ್‌ಚರಣ್ ಕರಿಯರ್‌ನಲ್ಲೇ ಇದು ಭಾರೀ ಬಜೆಟ್ ಸಿನಿಮಾ. ಪಾತ್ರಕ್ಕಾಗಿ ಚರಣ್ ಬಹಳ ಶ್ರಮಪಟ್ಟಿದ್ದಾರೆ. ಅದಕ್ಕಾಗಿ ಭಾರೀ ಸಂಭಾವನೆ ಕೂಡ ಜೇಬಿಗಿಳಿಸಿದ್ದಾರೆ. ಜಾನ್ವಿ ಕಪೂರ್, ಶಿವಣ್ಣ, ಜಗಪತಿ ಬಾಬು ಹೀಗೆ ಪ್ರತಿಯೊಬ್ಬರೂ ದೊಡ್ಡಮಟ್ಟದಲ್ಲೇ ಸಂಭಾವನೆ ಪಡೆದಿದ್ದಾರೆ. ಎ. ಆರ್ ರಹಮಾನ್ ಕೂಡ ದಾಖಲೆ ಮಟ್ಟದಲ್ಲೇ ಚಾರ್ಜ್ ಮಾಡಿದ್ದಾರೆ. ಸೆಟ್, ಪ್ರೊಡಕ್ಷನ್ ಕಾಸ್ಟ್ ಎಲ್ಲಾ ಬೆಟ್ಟದಂತೆ ಬೆಳೆದಿದೆ. 300 ಕೋಟಿ ರೂ.ಗೂ ಅಧಿಕ ಬಜೆಟ್ ಸಿನಿಮಾ ಅಂದ್ರೆ ಅದಕ್ಕೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಸಿನಿಮಾ ಸದ್ದು ಮಾಡಬೇಕು.

Peddi Faces Trouble at Box Office Strong Collections Still Fall Short of Recovery Target

ಥ್ರಿಯೇಟ್ರಿಕಲ್ ರೈಟ್ಸ್

ಅಂದಾಜು 218 ಕೋಟಿ ರೂ.ಗೆ 'ಪೆದ್ದಿ' ಚಿತ್ರದ ಥ್ರಿಯೇಟ್ರಿಕಲ್ ರೈಟ್ಸ್ ಮಾರಾಟವಾಗಿದೆ. ಗ್ರಾಸ್ ಕಲೆಕ್ಷನ್‌ನಲ್ಲಿ ಎಲ್ಲಾ ಕಳೆದು 200 ಕೋಟಿ ರೂ. ಬರಬೇಕು. ರೈಟ್ಸ್ ಕೊಂಡುಕೊಂಡವರಿಗೆ ಅಸಲು ಬಂದರೆ ಬಚಾವ್, ಲಾಭ ಬಂದರೆ ಬೋನಸ್. ಆಂಧ್ರ, ತೆಲಂಗಾಣ, ಕರ್ನಾಟಕ ಬಿಟ್ಟು ಉಳಿದ ಕಡೆಗಳಲ್ಲಿ
'ಪೆದ್ದಿ' ಕುಸ್ತಿ ಪಟ್ಟು ನಡೀತಿಲ್ಲ. 6 ದಿನಕ್ಕೆ ತಮಿಳುನಾಡಿನಲ್ಲಿ 4.50 ಕೋಟಿ ರೂ. ಕೇರಳದಲ್ಲಿ 53 ಲಕ್ಷ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಇನ್ನುಳಿದ ರಾಜ್ಯಗಳಲ್ಲಿ 21 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಚರ್ಚೆ ನಡೀತಿದೆ.

ಉತ್ತರ ಭಾರತದಲ್ಲಿ ನಿರಾಸೆ

'ಬಾಹುಬಲಿ' ಸರಣಿ, 'ಪುಷ್ಪ' ಸರಣಿ ಹಾಗೂ 'ಸಲಾರ್' ಚಿತ್ರಗಳಿಗೆ ಉತ್ತರ ಭಾರತದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಅದೇ ರೀತಿ 'ಪೆದ್ದಿ' ಚಿತ್ರವನ್ನು ಅಲ್ಲಿನ ಪ್ರೇಕ್ಷಕರು ಅಪ್ಪಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಚಿತ್ರತಂಡದ ಲೆಕ್ಕಾಚಾರ ತಪ್ಪಿದೆ. ಹಿಂದಿ ವರ್ಷನ್ ಕೈ ಕೊಟ್ಟಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಕೂಡ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗುವ ಸುಳಿವು ಸಿಗುತ್ತಿಲ್ಲ. ಹಾಗಾಗಿ ಅಲ್ಲಿ ರೈಟ್ಸ್ ಕೊಂಡುಕೊಂಡಿರುವವರು ನಷ್ಟ ಎದುರಿಸಬೇಕಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.

'ಪೆದ್ದಿ' ಕರ್ನಾಟಕ ಗಳಿಕೆ?

'ಜೇಮ್ಸ್' ಸಿನಿಮಾ ನಿರ್ಮಾಣ ಮಾಡಿದ್ದ ಕಿಶೋರ್ ಪತ್ತಿಕೊಂಡ 'ಪೆದ್ದಿ' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದಾರೆ. 18 ಕೋಟಿ ಕೊಟ್ಟು ಕರ್ನಾಟಕ ರೈಟ್ಸ್ ಖರೀದಿಸಿದ್ದರು. ಈಗಾಗಲೇ 23 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದೆ. ವಿತರಕರ ಪಾಲು 15 ಕೋಟಿ ರೂ. ಸಿಕ್ಕಿದ್ರೆ ಹೆಚ್ಚು. ಅಂದ್ರೆ ಮುಂದಿನ ಹಾದಿ ಇನ್ನು ದೊಡ್ಡದಿದೆ.

Read more about: ramcharan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X