ರಾಮ್‌ಚರಣ್ 'ಪೆದ್ದಿ' ಸಿನಿಮಾ ನೋಡಿ ಕ್ಯಾರೇ ಎನ್ನದ ಸ್ಟಾರ್ಸ್; ಮೆಗಾ ಫ್ಯಾನ್ಸ್ ಆಕ್ರೋಶ

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಈಗಾಗಲೇ ಸಿನಿಮಾ ಗ್ರಾಸ್ ಕಲೆಕ್ಷನ್ 400 ಕೋಟಿ ತಲುಪಿದೆ. 11 ದಿನಕ್ಕೆ 393 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಮಾಹಿತಿ ನೀಡಿದೆ. 2ನೇ ಸೋಮವಾರದ ಪರೀಕ್ಷೆಯನ್ನು ಗೆದ್ದು ಸಿನಿಮಾ ಮುನ್ನುಗ್ಗುತ್ತಿದೆ. ಆದರೆ ಸ್ಟಾರ್ ನಟರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.

ದೊಡ್ಡ ಸಿನಿಮಾಗಳು ಬಂದಾಗ ಚಿತ್ರರಂಗದವರು ನೋಡಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಇದು ಸಿನಿಮಾ ಗಳಿಕೆಗೆ ಮತ್ತಷ್ಟು ಬಲ ತುಂಬುತ್ತದೆ. ಕೆಲವೊಮ್ಮೆ ಪರಭಾಷಾ ಸಿನಿಮಾಗಳ ಬಗ್ಗೆ ಕೂಡ ಹಾಡಿ ಕೊಂಡಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಾರೆ. 'ಪೆದ್ದಿ' ಸಿನಿಮಾ ನೋಡಿ ಅಲ್ಲು ಅರ್ಜುನ್ ಬಿಟ್ಟುಬೇರೆ ಸ್ಟಾರ್ ನಟರು ಯಾರು ಪ್ರತಿಕ್ರಿಯಿಸಲಿಲ್ಲ. ಇದು ಸಹಜವಾಗಿಯೇ ಮೆಗಾ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.

Peddi Silence Sparks Debate Why Didn t Rajamouli or Sandeep Reddy Vanga react on the Film

ಮೊದಲ ದಿನವೇ ನಿರ್ದೇಶಕ ರಾಜಮೌಳಿ ತಮ್ಮ ಪತ್ನಿ ರಮಾ ಜೊತೆ 'ಪೆದ್ದಿ' ಸಿನಿಮಾ ವೀಕ್ಷಿಸಿದ್ದರು. ಹೈದರಾಬಾದ್ ಎಎಂಬಿ ಸಿನಿಮಾಸ್‌ನಲ್ಲಿ ಸಿನಿಮಾ ನೋಡಿ ಜಕ್ಕಣ್ಣ ಹೊರ ಬಂದ ವೀಡಿಯೋ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಅವರು ಪ್ರತಿಕ್ರಿಯಿಸಲೇ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಒಂದೇ ಒಂದು ಪೋಸ್ಟ್ ಮಾಡಲಿಲ್ಲ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ ಸಿನಿಮಾ ನೋಡಿದ್ದರು. ಹೊರಗಡೆ ಅಭಿಮಾನಿಗಳು ವಿಡಿಯೋ ಮಾಡುತ್ತಾ ಹೇಗಿದೆ ಸರ್ ಸಿನಿಮಾ ಎಂದು ಕೇಳಿದ್ದಕ್ಕೆ "ಚೆನ್ನಾಗಿದೆ" ಎಂದು ಹೇಳಿ ಹೊರಟ್ಟಿದ್ದರು. ಅವರು ಒಂದು ಪೋಸ್ಟ್ ಮಾಡಲಿಲ್ಲ.

ತೆಲುಗಿನ ಮತ್ಯಾವುದೇ ಸ್ಟಾರ್ ನಟರು 'ಪೆದ್ದಿ' ಸಿನಿಮಾ ನೋಡಿ ಮಾತನಾಡಲಿಲ್ಲ. ಬೇರೆ ಸಿನಿಮಾಗಳು ಬಂದಾಗ ರಾಮ್‌ಚರಣ್, ಚಿರಂಜೀವಿ ಪ್ರತಿಕ್ರಿಯಿಸುತ್ತಾರೆ. ಪ್ರೋತ್ಸಾಹ ನೀಡುತ್ತಾರೆ. ಆದರೆ ಈಗ 'ಪೆದ್ದಿ' ಸಿನಿಮಾ ವಿಚಾರದಲ್ಲಿ ಈ ಜಾಣ ಮೌನ ಯಾಕೆ ಎಂದು ಮೆಗಾ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜ್ಯೂ. ಎನ್‌ಟಿಆರ್ ಎಲ್ಲಾ ಸಿನಿಮಾಗಳ ಬಗ್ಗೆ ಕಾಮೆಂಟ್ ಮಾಡಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಆದರೆ ಆತ್ಮೀಯ ಸ್ನೇಹಿತನ ಸಿನಿಮಾ ನೋಡಲಿಲ್ವಾ? ಎಂದು ಪ್ರಶ್ನಿಸುತ್ತಿದ್ದಾರೆ.

'ಪೆದ್ದಿ' ಸಿನಿಮಾ ಬಗ್ಗೆ ಸ್ಟಾರ್ಸ್ ಪ್ರತಿಕ್ರಿಯಿಸದೇ ಇರುವುದಕ್ಕೆ ಅಸ್ತ್ರವಾಗಿಸಿಕೊಂಡು ಬೇರೆ ನಟರ ಫ್ಯಾನ್ಸ್ ವ್ಯಂಗ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಕೆಲವರು ಸೂಪರ್ ಎಂದು ಕೊಂಡಾಡಿದರೆ ಮತ್ತೆ ಕೆಲವರು ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡಿದ್ದರು. ಇದನ್ನೇ ನೆಪ ಮಾಡಿಕೊಂಡು ಸಿನಿಮಾ ಚೆನ್ನಾಗಿದ್ದರೆ ಸ್ಟಾರ್ಸ್ ಕೂಡ ಮೆಚ್ಚಿ ಪೋಸ್ಟ್ ಮಾಡುತ್ತಿದ್ದರು. ಸಿನಿಮಾ ಚೆನ್ನಾಗಿಲ್ಲ ಅದಕ್ಕೆ ಯಾರು ಮಾತನಾಡ್ತಿಲ್ಲ ಎಂದು ವ್ಯಂಗ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ನಟನೆ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಕುಸ್ತಿ ಪೈಲ್ವಾನ್ ಪಾತ್ರಕ್ಕೆ ಚರಣ್ ಶ್ರಮವನ್ನು ಕೊಂಡಾಡುತ್ತಿದ್ದಾರೆ. ನೆಗೆಟಿವ್ ಏನೇ ಇದ್ದರೂ ಫ್ಯಾಮಿಲಿ ಆಡಿಯನ್ಸ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಗೆಲುವಿನ ದಡ ಸೇರಿದೆ ಎಂದು ಹೇಳಲಾಗ್ತಿದೆ. ಕರ್ನಾಟಕದಲ್ಲಿ ಕೂಡ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. 25 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿದೆ. 16 ದಿನ ಪೂರೈಸಿ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ.

ನಾಯಕಿ ಪಾತ್ರ ಪೋಷಣೆ ಹಾಗೂ ಕೆಲ ದೃಶ್ಯಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಹ ದೃಶ್ಯಗಳನ್ನು ತೆಗೆದು ಹಾಕಲು ಚಿತ್ರತಂಡ ಮುಂದಾಗಿದೆ. ಜೊತೆಗೆ ಡಿಲೀಟ್ ಮಾಡಿದ್ದ ದೃಶ್ಯವನ್ನು ಸೇರಿ ಸಿನಿಮಾ ಪ್ರದರ್ಶನಕ್ಕೆ ಚಿಂತನೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಹೊಸ ರೂಪದಲ್ಲಿ 'ಪೆದ್ದಿ' ಸಿನಿಮಾ ನೋಡಬಹುದು.

Read more about: rajamouli ramcharan ntr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X