'ಆದಿಪುರುಷ್' ದಾಖಲೆ ಮುರಿದ 'ಪೆದ್ದಿ'; ಆದ್ರೆ 'KGF-'2 ದಾಖಲೆ ಮುರಿಯೋಕೆ ಆಗಲಿಲ್ಲ!

ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದ್ದು ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಜೂನ್ 4ರಂದು ಸಿನಿಮಾ ತೆರೆಗೆ ಬರಲಿದೆ. ಮುಂಬೈನಲ್ಲಿ ಟ್ರೈಲರ್ ರಿಲೀಸ್ ಕಾರ್ಯಕ್ರಮ ನೆರವೇರಿದೆ.

ಅಭಿಮಾನಿಗಳು 'ಪೆದ್ದಿ' ಆರ್ಭಟದ ಝಲಕ್ ಇಷ್ಟ ಪಟ್ಟರೂ ಬಹುತೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ಬಿಜಿಎಂ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಸದ್ಯ 24 ಗಂಟೆಗಳಲ್ಲಿ 'ಪೆದ್ದಿ' ಟ್ರೈಲರ್ ದಾಖಲೆ ಬರೆದಿದೆ. ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ದಾಖಲೆ ಹಿಂದಿಕ್ಕಿ 24 ಗಂಟೆಗಳಲ್ಲಿ ಅತಿಹೆಚ್ಚು ವೀವ್ಸ್ ಪಡೆದ ಟ್ರೈಲರ್ ಲಿಸ್ಟ್‌ನಲ್ಲಿ 4ನೇ ಸ್ಥಾನಕ್ಕೇರಿದೆ. ಆದರೆ 'KGF-'2 ದಾಖಲೆ ಹಿಂದಿಕ್ಕಲು ಸಾಧ್ಯವಾಗಿಲ್ಲ.

Peddi Trailer Beats Adipurush Record in hours Falls Short of KGF 2 Despite Mixed Reactions

ಸಿನಿಮಾ ಟೀಸರ್, ಟ್ರೈಲರ್, ಸಾಂಗ್ ಹೀಗೆ ದೊಡ್ಡ ಸಿನಿಮಾಗಳ ಸಣ್ಣ ಸಣ್ಣ ಝಲಕ್ ಅನ್ನು ದೊಡ್ಡದಾಗಿ ನೋಡಿ ಗೆಲ್ಲಿಸಲು ಅಭಿಮಾನಿಗಳು ಮುಗಿಬೀಳ್ತಾರೆ. ತೆಲುಗು ಮಾತ್ರವಲ್ಲದೇ ಹಿಂದಿಯಲ್ಲಿ ಕೂಡ 'ಪೆದ್ದಿ' ಟ್ರೈಲರ್ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಹಳ್ಳಿ ಕ್ರಿಕೆಟರ್, ಕುಸ್ತಿ ಪೈಲ್ವಾನ್ ಕೊನೆಗೆ ಪ್ಯಾರಾ ಒಲಂಪಿಕ್ಸ್ ಓಟಗಾರನಾಗಿ ರಾಮ್‌ಚರಣ್ ಕಮಾಲ್ ಮಾಡಲು ಬರ್ತಿದ್ದಾರೆ. ಆಕ್ಷನ್, ಡ್ರಾಮಾ, ಎಮೋಷನ್ ಎಲ್ಲವನ್ನು ಸೇರಿಸಿ ಟ್ರೈಲರ್ ಕಟ್ ಮಾಡಿದ್ದಾರೆ.

ಮೊದಲ 24 ಗಂಟೆಗಳಲ್ಲಿ 'ಪೆದ್ದಿ' ಟ್ರೈಲರ್ 101 ಮಿಲಿಯನ್ ವೀವ್ಸ್ ಸಾಧಿಸಿದೆ. ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಅಧಿಕೃತವಾಗಿ ಚಿತ್ರತಂಡವೇ ಈ ಬಗ್ಗೆ ಪೋಸ್ಟ್ ಮಾಡಿ ಮಾಹಿತಿ ನೀಡಿದೆ. ಬರೀ ತೆಲುಗು ಟ್ರೈಲರ್ 49 ಮಿಲಿಯನ್ ವೀವ್ಸ್ ಸಾಧಿಸಿ ಹಿಂದಿನ ಎಲ್ಲಾ ಟಾಲಿವುಡ್ ಸಿನಿಮಾಗಳ ದಾಖಲೆ ಮುರಿದಿದೆ. ಇನ್ನು ಹಿಂದಿ ವರ್ಷನ್ 33 ಮಿಲಿಯನ್, ತಮಿಳು 5.1 ಮಿಲಿಯನ್, ಮಲಯಾಳಂ 3 ಮಿಲಿಯನ್ ಹಾಗೂ ಕನ್ನಡ ವರ್ಷನ್ 5 ಮಿಲಿಯನ್ ವೀವ್ಸ್ ಸಾಧಿಸಿದೆ. ಇದು ಬರೀ ಯೂಟ್ಯೂವ್ ವೀವ್ಸ್ ಲೆಕ್ಕ ಮಾತ್ರ.

ಫೇಸ್ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್‌ನಲ್ಲಿ 'ಪೆದ್ದಿ' ಟ್ರೈಲರ್ ನೋಡಿದವರಿಗೆ ಲೆಕ್ಕವಿಲ್ಲ. ಒಟ್ಟಾರೆ ಮೊದಲ ಪರೀಕ್ಷೆಯಲ್ಲಿ ರಾಮ್‌ಚರಣ್ ಪಾಸ್ ಆದಂತಾಗಿದೆ. ಅತಿ ಹೆಚ್ಚು ವೀವ್ಸ್ ಗಳಿಸಿದ ಟಾಪ್ 5 ಸಿನಿಮಾ ಟ್ರೈಲರ್‌ಗಳು ಯಾವುದು ಮುಂದೆ ಓದಿ.

1. ಸಲಾರ್

ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಎರಡು ವರ್ಷಗಳ ಹಿಂದೆ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು. ಚಿತ್ರದ ಟ್ರೈಲರ್ ಕೇವಲ 24 ಗಂಟೆಗಳಲ್ಲಿ 113.2 ಮಿಲಿಯನ್ ವೀವ್ಸ್ ಸಾಧಿಸಿತ್ತು. ಈವರೆಗೆ ಇದು ದಾಖಲೆಯಾಗಿಯೇ ಉಳಿದುಬಿಟ್ಟಿದೆ. ಇದನ್ನು ಮುಂದೆ ಯಾವ ಸಿನಿಮಾ ಟ್ರೈಲರ್ ಮೀರಿಸುತ್ತದೆ ಕಾದು ನೋಡಬೇಕಿದೆ.

2. KGF ಚಾಪ್ಟರ್-2

ಯಶ್ ನಟನೆಯ 'KGF'-2 ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಯಶ್ ಹುಟ್ಟುಹಬ್ಬದ ವಿಶೇಷವಾಗಿ ಬಂದಿದ್ದ ಟೀಸರ್ ಸಂಚಲನ ಸೃಷ್ಟಿಸಿತ್ತು. ಅಂಥಾದೊಂದು ಟೀಸರ್ ಮತ್ತೆ ಬರುವುದ ಕಷ್ಟ ಎನ್ನುವಂತಾಗಿದೆ. ಇನ್ನು ಚಿತ್ರದ ಟ್ರೈಲರ್ ಕೂಡ 24 ಗಂಟೆಗಳಲ್ಲಿ 106 ಮಿಲಿಯನ್ ವೀವ್ಸ್ ಸಾಧಿಸಿತ್ತು.

3. ಪುಷ್ಪ-2

ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಜೋಡಿ ಸಿನಿಮಾ 'ಪುಷ್ಪ-2' ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೆಯಿದೆ. 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಇನ್ನು ಟ್ರೈಲರ್ 24 ಗಂಟೆಗಳಲ್ಲಿ 104.2 ಮಿಲಿಯನ್ ವೀವ್ಸ್ ಗಳಿಸಿತ್ತು. ನಂತರದ ಸ್ಥಾನದಲ್ಲಿ 'ಪೆದ್ದಿ' ಸಿನಿಮಾ ಟ್ರೈಲರ್ ಜಾಗ ಮಾಡಿಕೊಂಡಿದೆ. 74 ಮಿಲಿಯನ್ ವೀವ್ಸ್ ಸಾಧಿಸಿ 'ಆದಿಪುರುಷ್' ಸಿನಿಮಾ ಟ್ರೈಲರ್ 5ನೇ ಸ್ಥಾನದಲ್ಲಿದೆ.

Read more about: ramcharan kgf tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X