twitter
    For Quick Alerts
    ALLOW NOTIFICATIONS  
    For Daily Alerts

    ಆರ್‌ಆರ್‌ಆರ್ ಕನ್ನಡ ವರ್ಷನ್ ಖರೀದಿಸಿದ ಚಾನೆಲ್ ಹೆಸರು ಬಹಿರಂಗ

    |

    ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ಬಿಡುಗಡೆಗಾಗಿ ಇಡೀ ಭಾರತೀಯ ಸಿನಿಮಾರಂಗ ಕಾದು ಕುಳಿತಿದೆ. ಅಕ್ಟೋಬರ್ 13ಕ್ಕೆ ತೆರೆಗೆ ಬರುವುದಾಗಿ ಚಿತ್ರತಂಡ ಘೋಷಿಸಿದೆ. ಇತ್ತೀಚಿಗಷ್ಟೆ ಆರ್‌ಆರ್‌ಆರ್ ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟ್‌ಲೈಟ್ ಹಕ್ಕು ದಾಖಲೆಗೆ ZEE5 ಪಡೆದುಕೊಂಡಿದೆ ಎಂದು ವರದಿಯಾಗಿತ್ತು.

    ಇದೀಗ, ಅಧಿಕೃತ ಸುದ್ದಿ ಹೊರಬಿದ್ದಿದ್ದು, ಭಾರತೀಯ ಪ್ರಮುಖ ಭಾಷೆ ಸೇರಿದಂತೆ ವಿದೇಶಿ ಭಾಷೆಗಳಲ್ಲಿಯೂ ರಾಜಮೌಳಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ತಿಳಿದು ಬಂದಿದೆ.

    325 ಕೋಟಿಗೆ RRR ಚಿತ್ರದ ಡಿಜಿಟಲ್ ಹಕ್ಕು ಮಾರಾಟ, ಫ್ಯಾನ್ಸ್‌ಗೆ ನಿರಾಸೆ325 ಕೋಟಿಗೆ RRR ಚಿತ್ರದ ಡಿಜಿಟಲ್ ಹಕ್ಕು ಮಾರಾಟ, ಫ್ಯಾನ್ಸ್‌ಗೆ ನಿರಾಸೆ

    ಚಿತ್ರಮಂದಿರಗಳಲ್ಲಿ ತೆರೆಕಂಡ 70-100 ದಿನದೊಳಗೆ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಲು ಒಪ್ಪಂದ ಆಗಿದೆ ಎಂಬ ವಿಚಾರವೂ ಬಹಿರಂಗವಾಗಿದೆ. ಇನ್ನು ಆರ್‌ಆರ್‌ಆರ್ ಸಿನಿಮಾ ಪ್ರಸಾರ ಮಾಡಲಿರುವ ಪ್ರಾದೇಶಿಕ ವಾಹಿನಿಗಳ ಹೆಸರು ಸಹ ಪ್ರಕಟಿಸಲಾಗಿದೆ. ಆರ್‌ಆರ್‌ಆರ್ ಚಿತ್ರದ ಡಿಜಿಟಲ್ ಮತ್ತು ಸ್ಯಾಟ್‌ಲೈಟ್ ಮಾರಾಟದ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ...

    ZEE5 ಮತ್ತು ನೆಟ್‌ಫ್ಲಿಕ್ಸ್ ತೆಕ್ಕೆಗೆ ಆರ್‌ಆರ್‌ಆರ್

    ZEE5 ಮತ್ತು ನೆಟ್‌ಫ್ಲಿಕ್ಸ್ ತೆಕ್ಕೆಗೆ ಆರ್‌ಆರ್‌ಆರ್

    ಈ ಹಿಂದೆ ವರದಿಯಾದಂತೆ ಆರ್‌ಆರ್‌ಆರ್ ಚಿತ್ರದ ಡಿಜಿಟಲ್ ಹಕ್ಕನ್ನು ZEE5 ಮತ್ತು ನೆಟ್‌ಫ್ಲಿಕ್ಸ್ ಖರೀದಿಸಿದೆ. ದಕ್ಷಿಣ ಭಾರತದ ಅಂದ್ರೆ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯ ಹಕ್ಕನ್ನು ZEE5 ಪಡೆದಿದ್ದರೆ, ಹಿಂದಿ ವರ್ಷನ್ ಹಕ್ಕು ನೆಟ್‌ಫ್ಲಿಕ್ಸ್ ದಕ್ಕಿಸಿಕೊಂಡಿದೆ.

    ಟಿವಿ ಹಕ್ಕು ಪಡೆದ ಸ್ಟಾರ್ ಸಂಸ್ಥೆ

    ಟಿವಿ ಹಕ್ಕು ಪಡೆದ ಸ್ಟಾರ್ ಸಂಸ್ಥೆ

    ಆರ್ ಆರ್ ಆರ್ ಚಿತ್ರದ ಟಿವಿ ಹಕ್ಕನ್ನು ಸ್ಟಾರ್ ಸಂಸ್ಥೆ ಪಡೆದುಕೊಂಡಿದೆ. ತೆಲುಗಿನಲ್ಲಿ ಸ್ಟಾರ್ ಮಾ, ತಮಿಳಿನಲ್ಲಿ ಸ್ಟಾರ್, ಮಲಯಾಳಂ ಭಾಷೆಯಲ್ಲಿ ಏಷಿಯನೆಟ್ ಹಾಗೂ ಕನ್ನಡದಲ್ಲಿ ಸ್ಟಾರ್ ಸುವರ್ಣ ವಾಹಿನಿ ರಾಜಮೌಳಿ ಚಿತ್ರದ ಹಕ್ಕು ಖರೀದಿಸಿದೆ. ಇನ್ನು ಹಿಂದಿಯಲ್ಲಿ ಜೀ ಸಿನಿಮಾ ವಾಹಿನಿ ಆರ್ ಆರ್ ಆರ್ ಚಿತ್ರ ಪ್ರಸಾರ ಮಾಡಲಿದೆ.

    ವಿದೇಶಿ ಭಾಷೆಗಳಲ್ಲೂ ಆರ್‌ಆರ್‌ಆರ್

    ವಿದೇಶಿ ಭಾಷೆಗಳಲ್ಲೂ ಆರ್‌ಆರ್‌ಆರ್

    ಭಾರತೀಯ ಭಾಷೆ ಮಾತ್ರವಲ್ಲದೇ ವಿದೇಶಿ ಭಾಷೆಗಳಲ್ಲಿಯೂ ಆರ್‌ಆರ್‌ಆರ್ ಸಿನಿಮಾ ಡಿಜಿಟಲ್ ರಿಲೀಸ್ ಆಗಲಿದೆ. ಇಂಗ್ಲಿಷ್, ಫೋರ್ಚುಗೀಸ್, ಕೊರಿಯನ್, ಟರ್ಕಿಶ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ ಪ್ರದರ್ಶನ ಕಾಣಲಿದೆ. ವಿದೇಶಿ ಭಾಷೆಗಳ ಹಕ್ಕು ನೆಟ್‌ಫ್ಲಿಕ್ಸ್ ಖರೀದಿಸಿದೆ.

    'RRR' ಸಿನಿಮಾದ ಆ್ಯಕ್ಷನ್ ದೃಶ್ಯ ನೋಡಿ ಕಣ್ಣೀರು ಹಾಕಿದ್ದೆ: ವಿಜಯೇಂದ್ರ ಪ್ರಸಾದ್'RRR' ಸಿನಿಮಾದ ಆ್ಯಕ್ಷನ್ ದೃಶ್ಯ ನೋಡಿ ಕಣ್ಣೀರು ಹಾಕಿದ್ದೆ: ವಿಜಯೇಂದ್ರ ಪ್ರಸಾದ್

    Recommended Video

    ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada
    ಭಾರತೀಯ ಚಿತ್ರರಂಗದಲ್ಲಿ ಅತಿ ದೊಡ್ಡ ಒಪ್ಪಂದ

    ಭಾರತೀಯ ಚಿತ್ರರಂಗದಲ್ಲಿ ಅತಿ ದೊಡ್ಡ ಒಪ್ಪಂದ

    ಪೆನ್ ಸ್ಟುಡಿಯೋ ಮತ್ತು ಆರ್‌ಆರ್‌ಆರ್ ಚಿತ್ರದ ನಡುವೆ ಅತಿ ದೊಡ್ಡ ಒಪ್ಪಂದ ಆಗಿದ್ದು, ಇದು ಭಾರತೀಯ ಸಿನಿಮಾರಂಗದಲ್ಲೇ ದಾಖಲೆಯಾಗಿದೆ. ಚಿತ್ರಮಂದಿರದಲ್ಲಿ ರಿಲೀಸ್ ಆದ ಬಳಿಕ ಡಿಜಿಟಲ್ ಹಾಗೂ ಸ್ಯಾಟ್‌ಲೈಟ್ ಪ್ರದರ್ಶನ ಕಾಣುವ ಬಗ್ಗೆ ಪೆನ್ ಸ್ಟುಡಿಯೋ ಮಾಹಿತಿ ನೀಡಿದೆ. ಜೊತೆಗೆ ಹಿಂದಿ ಭಾಷೆಯ ಆರ್‌ಆರ್‌ಆರ್ ಚಿತ್ರವನ್ನು ಸ್ವತಃ ಪೆನ್ ಸ್ಟುಡಿಯೋ ಭಾರತದಲ್ಲಿ ವಿತರಿಸಿಲಿದೆ. ಆದರೆ, ದಕ್ಷಿಣ ಭಾಷೆಗಳ ವಿತರಣೆ ಬಗ್ಗೆ ಅಧಿಕೃತ ಪ್ರಕಟಣೆ ಆಗಿಲ್ಲ.

    English summary
    Pen Movies announces the official DIGITAL & SATELLITE partners of RRR Movie. the movie directed by SS Rajamouli.
    Thursday, May 27, 2021, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X