ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ; ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ವಿದ್ಯಾರ್ಥಿ ಜೊತೆ ಮದುವೆಯಾದ ನಟಿ ಹೇಳಿದ್ದೇನು ?

ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದರೆ ಸಾಕು ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ದೊಡ್ಡ ದೊಡ್ಡ ನಾಯಕಿಯರು ಈ ಪ್ರಯತ್ನ ಮಾಡಿದ್ದಾರೆ .

ಕೆಲವರು ತಾವು ಪ್ಲಾಸ್ಟಿಕ್ ಸರ್ಜರಿಗೊಳಗಾದ ವಿಚಾರವನ್ನು ಒಪ್ಪಿಕೊಂಡರೆ, ಇನ್ನೂ ಕೆಲವರು ಅಡ್ಡ ಗೋಡೆ ಮೇಲೆ ದೀಪ ಇಡುತ್ತಾರೆ. ಮತ್ತೂ ಕೆಲವರು ತಮ್ಮ ವಿರುದ್ಧ ಕೇಳಿ ಬಂದ ಈ ಮಾತುಗಳನ್ನು ಕೇಳಿ ಉರಿದು ಬಿದ್ದಿದ್ದಾರೆ. ಸದ್ಯ ಇದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಚೆಲುವೆಯರ ಸಾಲಿನಲ್ಲಿ ಅವಿಕಾ ಗೋರ್ ಹೆಸರು ಕೂಡ ಕೇಳಿ ಬಂದಿದ್ದು ತಮ್ಮ ಕುರಿತು ಸಾರ್ವತ್ರಿಕ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ.

Plastic Surgery or Natural Transformation Avika Gor Unveils the Real Truth Behind Her Look

ಹೌದು, ಅವಿಕಾ ಗೋರ್.. ಹಿಂದಿಯಲ್ಲಿ ''ಬಾಲಿಕಾ ವಧು'' ಎಂದೇ ಜನಪ್ರಿಯವಾದ ಚೆಲುವೆ. ಈ ಧಾರಾವಾಹಿಯಲ್ಲಿ ಬಾಲಕಿ ಆನಂದಿ ಪಾತ್ರವನ್ನು ಇವರು ನಿರ್ವಹಿಸಿದ್ದರು. ಆ ನಂತರ 2013ರಲ್ಲಿ ''ಉಯ್ಯಾಲಾ ಜಂಪಾಲಾ'' ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ಅವಿಕಾ, ಆ ನಂತರ ಕನ್ನಡದಲ್ಲಿ ಮಾಸ್ಟರ್ ಕಿಶನ್ ನಿರ್ದೇಶನದ ''ಕೇರ್ ಆಫ್ ಫುಟ್‌ಫಾತ್ 2'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಈ ಮೂಲಕ ಕನ್ನಡದಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು. ಅಪ್ಪು ಅಭಿನಯದ ''ನಟಸಾರ್ವಭೌಮ'' ಚಿತ್ರದಲ್ಲಿನ ''ತಾಜಾ ಸಮಾಚಾರ'' ಹಾಡಿನಲ್ಲಿ ಕೂಡ ನೀವು ಇವರನ್ನು ನೋಡಬಹುದು.

ಇಂಥಾ ಅವಿಕಾ ಗೋರ್ ಸದ್ಯ ನಿಮ್ಮದು ಪ್ಲಾಸ್ಟಿಕ್ ಮುಖನ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ತೆಲುಗಿನ ಪತ್ರಕರ್ತೆ ''ಪ್ರೇಮಾ'' ಅವರಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವಿಕಾ, ನಾನು ಮುಖದ ಮೇಲಿನ ಮೊಡವೆ ತೆಗೆಯುಲು ಚಿಕಿತ್ಸೆ ಮಾಡಿಸಿಕೊಂಡಿದ್ದು ನಿಜಾ, ಆದರೆ ಆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಹೇಳಿದ್ಧಾರೆ.

ನಾನು 7 ವರ್ಷದವಳಾಗಿದ್ದಾಗಲೇ ಮೇಕಪ್ ಮಾಡಿಕೊಳ್ತಿದ್ದೆ, ಸನ್ ಸ್ಕ್ರೀನ್ ಉಪಯೋಗ ಮಾಡುತ್ತಿದ್ದೆ, ಎಂದು ಹೇಳಿರುವ ಅವಿಕಾ ಗೋರ್ ಫೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್ ಗೆ ಹೋಗುತ್ತೇನೆ ಎಂದಿದ್ದಾರೆ. ಮುಖದ ಮೇಲಿನ ಕಲೆಗಳಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯುತ್ತೇನೆ ಎಂದಿದ್ದಾರೆ.

ಮುಂದುವರೆದು ನನ್ನ ತಂದೆ-ತಾಯಿ ಪಾರ್ಲರ್ ಹೋಗುವುದಕ್ಕೆ ನನ್ನನ್ನು ಬಿಡುತ್ತಿರಲಿಲ್ಲ, ಸಣ್ಣದೊಂದು ಟ್ಯಾಟೂ ಹಾಕಿಸಿಕೊಂಡರೆ ಮನೆಯಲ್ಲಿ ರಾದ್ಧಾಂತವಾಗುತ್ತಿತ್ತು ಎಂದು ಹೇಳಿರುವ ಅವಿಕಾ ಗೋರ್, ನನ್ನ ಹೇರ್ ಸ್ಟೈಲ್ ನೋಡಿಯೇ ಹಲವು ಬಾರಿ ಮನೆಯಲ್ಲಿ ನನ್ನ ಮೇಲೆ ಕೂಗಾಡಿದ್ದಾರೆ ಎಂದು ಹೇಳಿದ್ದಾರೆ.

Plastic Surgery or Natural Transformation Avika Gor Unveils the Real Truth Behind Her Look

ಇಂತಹ ಚಿಕ್ಕ ಚಿಕ್ಕ ವಿಷಯಕ್ಕೆ ನನ್ನ ಹೆತ್ತವರನ್ನು ಒಪ್ಪಿಸಲು ನನ್ನಿಂದ ಸಾಧ್ಯವಾಗಿಲ್ಲ, ಹೀಗಿರುವಾಗ ನಾನು ಮುಖಕ್ಕೆ ಸರ್ಜರಿ ಮಾಡಿಸಿಕೊಳ್ಳಲು ಹೇಗೆ ಸಾಧ್ಯ ? ಎಂದು ಪ್ರಶ್ನೆ ಮಾಡಿರುವ ಅವಿಕಾ ಗೋರ್ ನನ್ನ ಬೆಳವಣಿಗೆಯನ್ನು ಬಾಲ್ಯದಿಂದಲೇ ಪ್ರೇಕ್ಷಕರು ನೋಡಿದ್ದಾರೆ, ನನ್ನ ದೇಹದಲ್ಲಿ ಏನೇ ಬದಲಾವಣೆ ಆದರೂ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂಬ ವದಂತಿ ಹಬ್ಬಿಬಿಡುತ್ತಾವೆ ಎಂದಿದ್ದಾರೆ.

ತೂಕ ಹೆಚ್ಚಿಸಿಕೊಳ್ಳುವುದು, ಆ ನಂತರ ಅಷ್ಟೇ ಬೇಗ ಕಡಿಮೆ ಮಾಡಿಕೊಳ್ಳುವುದು ನನಗೆ ಅಭ್ಯಾಸ ಆಗಿದೆ ಎಂದು ಹೇಳಿರುವ ಅವಿಕಾ ಗೋರ್, ಶೂಟಿಂಗ್ ಇಲ್ಲದಿದ್ದಾಗ ತಿನ್ನುವುದೇ ನನ್ನ ಕೆಲಸ ಎಂದಿದ್ದಾರೆ. ವಯಸ್ಸಾದಂತೆ ದೇಹದಲ್ಲಿ ಸಹಜ ಬದಲಾವಣೆ ಆಗುತ್ತವೆ. ಆದ್ದರಿಂದ ನನ್ನ ದೇಹದ ಬದಲಾವಣೆಗಳಿಗೆ ಸರ್ಜರಿ ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂದ್ಹಾಗೇ ಅವಿಕಾ ಹೃದಯ ಗೆದ್ದ ಮಿಲಿಂದ್ ಬೇರೆ ಯಾರು ಅಲ್ಲ. ಬದಲಿಗೆ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್‌ನ ವಿದ್ಯಾರ್ಥಿ. ದಯಾನಂದ ಸಾಗರ್ ಕಾಲೇಜ್‌ ಆಫ್ ಎಂಜಿನಿಯರಿಂಗ್‌ ನಲ್ಲಿ ಪದವಿಯನ್ನು ಪಡೆದವರು. ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೂಡ ಕೆಲಸವನ್ನು ಇವರು ಮಾಡಿದ್ದಾರೆ.

English summary
"It’s not surgery!" Avika Gor slams cosmetic transformation rumors and sets the record straight about her actual skin treatment routine. Read her full statement here.
Read more about: plastic surgery ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X