For Quick Alerts
  ALLOW NOTIFICATIONS  
  For Daily Alerts

  ಹೊಷ ವರ್ಷಕ್ಕೆ ತೆಲುಗು ಪ್ರೇಕ್ಷಕರಿಗೆ ಭರ್ಜರಿ ಉಡುಗೊರೆ ಘೋಷಿಸಿದ ಧ್ರುವ ಸರ್ಜಾ

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪೊಗರು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಹಾಡುಗಳು ಹಾಗು ಡೈಲಾಗ್ ಟ್ರೈಲರ್ ಮೂಲಕ ಘರ್ಜಿಸುತ್ತಿರುವ ಪೊಗರು ತೆಲುಗಿನಲ್ಲೂ ತೆರೆಕಾಣಲಿದೆ.

  ರಶ್ಮಿಕಾ ಜೊತೆಗೆ ತಮಿಳಿಗೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ | Filmibeat Kannada

  ಇದೀಗ, ಹೊಸ ವರ್ಷದ ಪ್ರಯುಕ್ತ ತೆಲುಗು ಪ್ರೇಕ್ಷಕರಿಗೆ ಪೊಗರು ಚಿತ್ರತಂಡ ಭರ್ಜರಿ ಉಡುಗೊರೆ ಘೋಷಿಸಿದೆ. ತೆಲುಗಿನಲ್ಲಿ ಖರಾಬು ಹಾಡು ಸೂಪರ್ ಡೂಪರ್ ಹಿಟ್ ಆದ್ಮೇಲೆ ಈಗ ತೆಲುಗು ಭಾಷೆಯಲ್ಲಿ ಟ್ರೈಲರ್ ರಿಲೀಸ್ ಮಾಡಲಾಗುತ್ತಿದೆ.

  'ದುಬಾರಿ' ಆರಂಭಕ್ಕೂ ಮುನ್ನವೇ ಬ್ಲಾಸ್ಟಿಂಗ್ ಸುದ್ದಿ ನೀಡಿದ ಧ್ರುವ ಸರ್ಜಾ'ದುಬಾರಿ' ಆರಂಭಕ್ಕೂ ಮುನ್ನವೇ ಬ್ಲಾಸ್ಟಿಂಗ್ ಸುದ್ದಿ ನೀಡಿದ ಧ್ರುವ ಸರ್ಜಾ

  ಹೌದು, ಜನವರಿ 1ನೇ ತಾರೀಖು ಮಧ್ಯಾಹ್ನ 12.12 ಗಂಟೆಗೆ ತೆಲುಗು ಭಾಷೆಯಲ್ಲಿ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ಸ್ವತಃ ಧ್ರುವ ಸರ್ಜಾ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

  ಕನ್ನಡದಲ್ಲಿ ವರ್ಷಕ್ಕೂ ಮುಂಚೆಯೇ ಡೈಲಾಗ್ ಟ್ರೈಲರ್ ರಿಲೀಸ್ ಆಗಿತ್ತು. ಒಂದೊಂದು ಡೈಲಾಗ್ ಜಬರ್‌ದಸ್ತ್ ಆಗಿತ್ತು. ಮಾಸ್ ಪ್ರಿಯರಿಗೆ ಇಷ್ಟವಾಗುವಂತಹ ಡೈಲಾಗ್‌ಗಳು ಪೊಗರು ಸಿನಿಮಾದಲ್ಲಿದೆ ಎಂಬ ಸುಳಿವು ನೀಡಿದ್ದ ಈ ಟ್ರೈಲರ್ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು.

  ಈಗ ತೆಲುಗಿನಲ್ಲಿ ಪೊಗರು ಡೈಲಾಗ್‌ಗಳ ಹಾವಳಿ ಶುರುವಾಗಲಿದೆ. ನಂದ ಕಿಶೋರ್ ನಿರ್ದೇಶನ ಮಾಡಿರುವ ಈ ಚಿತ್ರವನ್ನು ತೆಲುಗಿನಲ್ಲಿ ಡಿ ಪ್ರತಾಪ್ ರಾಜು ಬಿಡುಗಡೆ ಮಾಡುತ್ತಿದ್ದಾರೆ.

  ರಶ್ಮಿಕಾ ಜೊತೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಟ ಧ್ರುವ ಸರ್ಜಾರಶ್ಮಿಕಾ ಜೊತೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಟ ಧ್ರುವ ಸರ್ಜಾ

  ಇನ್ನುಳಿದಂತೆ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದು, ತೆಲುಗು ನಟ ಜಗಪತಿ ಬಾಬು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಧನಂಜಯ್, ರವಿಶಂಕರ್, ಸಾಧು ಕೋಕಿಲಾ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ತಮಿಳಿನಲ್ಲೂ ಪೊಗರು ರಿಲೀಸ್ ಆಗಲಿದೆ.

  English summary
  Action Prince Dhruva sarja and rashmika mandanna starrer Pogaru Telugu trailer will be releasing on Jan 1st 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X