ನಟ ನಾಗ ಶೌರ್ಯ ಮನೆ ಮೇಲೆ ದಾಳಿ, ಭಾರಿ ನಗದು ವಶ, 30 ಮಂದಿ ಬಂಧನ

ತೆಲುಗಿನ ಜನಪ್ರಿಯ ನಟ ನಾಗ ಶೌರ್ಯಗೆ ಸೇರಿದ ಫಾರಂ ಹೌಸ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದು ಭಾರಿ ಮೊತ್ತದ ನಗದು ವಶಪಡಿಸಿಕೊಂಡಿದ್ದಾರೆ.

ಫಾರ್ಮ್‌ ಹೌಸ್‌ನಲ್ಲಿ ಕೆಲವರು ಜೂಜಾಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು ಜೂಜಾಟದಲ್ಲಿ ನಿರತರಾಗಿದ್ದ ದೊಡ್ಡ ವ್ಯಕ್ತಿಗಳೇ ಸಿಲುಕಿಕೊಂಡಿದ್ದಾರೆ. ಅವರಿಂದ ಭಾರಿ ಮೊತ್ತದ ನಗದು ಹಣ, ಮೊಬೈಲ್, ಪೋಕರ್ ಆಡಲು ಬಳಸುವ ವಸ್ತುಗಳನ್ನು ಹಾಗೂ ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ಹೈದರಾಬಾದ್‌ ಹೊರವಲಯದಲ್ಲಿ ನಾಗ ಶೌರ್ಯರಿಗೆ ಫಾರಂ ಹೌಸ್ ಒಂದಿದೆ, ಆ ಫಾರಂ ಹೌಸ್‌ನಲ್ಲಿ ಸುಮನ್ ಗುಟ್ಟಾ ಹೆಸರಿನ ವ್ಯಕ್ತಿಯೊಬ್ಬ ಖ್ಯಾತ ಉದ್ಯಮಿಗಳು, ನಟರನ್ನು ಒಟ್ಟಿಗೆ ಸೇರಿಸಿಕೊಂಡು ಪೋಕರ್ ಆಡಿಸುತ್ತಿದ್ದ. ಇದರ ಮಾಹಿತಿ ಪಡೆದ ಪೊಲೀಸರು ನಿನ್ನೆ ರಾತ್ರಿ ದಾಳಿ ನಡೆಸಿ ಭಾರಿ ಮೊತ್ತದ ಹಣ ವಶಪಡಿಸಿಕೊಂಡಿದ್ದಾರೆ.

Police Raid On Naga Shaurya Farm House 30 People Arrest

ದಾಳಿ ವೇಳೆ 67 ಲಕ್ಷ ರು ನಗದು, 33 ಮೊಬೈಲ್ ಫೋನ್, ಮೂರು ಕಾರು, ಎರಡು ಕ್ಯಾಸಿನೊ ಬಾಕ್ಸ್ ಹಾಗೂ ಕೆಲವು ಹಣ ಎಣಿಸುವ ಯಂತ್ರಗಳನ್ನು ಹೈದರಾಬಾದ್ ಪೊಲೀಸರು ವಶಪಡಿಸಿಕೊಂಡಿದ್ದು 30 ಜನರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಿನಿಮಾ ನಿರ್ಮಾಪಕ ಸುನಿಲ್ ಚೌಧರಿ ಸಹ ಪೊಲೀಸರ ವಶಕ್ಕೆ ದೊರೆತಿದ್ದಾರೆ. ಪೊಲೀಸರು ದಾಳಿ ನಡೆಸಿದ ವೇಳೆ ತಾವು ಜೂಜು ಆಡುತ್ತಿರಲಿಲ್ಲವೆಂದು, ಕೇವಲ ಫ್ರೆಂಡ್ಲಿಯಾಗಿ ತ್ರೀ ಕಾರ್ಡ್ಸ್ ಆಡುತ್ತಿದ್ದುದಾಗಿ ಹೇಳಿದ್ದಾರೆ. ತಮ್ಮದು ಗೋವಾದಲ್ಲಿ ಕ್ಯಾಸಿನೋಗಳಿವೆ, ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಕೆಲವು ಗೆಳೆಯರು ಸೇರಿ ಆಟ ಆಡುತ್ತೇವೆ ಎಂದು ಸಬೂಬು ಹೇಳಿದ್ದಾರೆಂದು ವರದಿ ಆಗಿದೆ.

ಪೊಲೀಸರು ಮಾಡಿದ ದಾಳಿಯಲ್ಲಿ ಸುಮನ್ ಗುಟ್ಟಾ ಎಂಬಾತ ಸಹ ಬಂಧಿತನಾಗಿದ್ದು, ಆತನ ಮೇಲೆ ಹಲವು ವಂಚನೆ ಪ್ರಕರಣಗಳು ಇವೆ ಎನ್ನಲಾಗಿದೆ. ನಟ ಶೌರ್ಯಗೆ ಸೇರಿದ ಅದೇ ಫಾರಂ ಹೌಸ್‌ನಲ್ಲಿ ಹಲವು ಸೆಟಲ್‌ಮೆಂಟ್‌ಗಳು, ರಿಯಲ್ ಎಸ್ಟೇಟ್ ವ್ಯಾಪಾರಗಳನ್ನು ಅದೇ ಜಾಗದಲ್ಲಿ ಮಾಡುತ್ತಿದ್ದುದಾಗಿ ಪೊಲೀಸರು ಆರೋಪಿಸಿದ್ದಾರೆ. ಕೆಲವು ಎನ್‌ಆರ್‌ಐಗಳು ಸಹ ಸುಮನ್ ವಿರುದ್ಧ ಈ ಹಿಂದೆ ವಂಚನೆ ದೂರು ದಾಖಲಿಸಿರುವುದಾಗಿಯೂ ಪೊಲೀಸರು ಹೇಳಿದ್ದಾರೆ.

ನಟ ನಾಗ ಶೌರ್ಯ 2011 ರಿಂದಲೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ 'ಚಂದಮಾಮ ಕಥಲು' ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆಗೆ 'ಛಲೋ', ಸಮಂತಾ ಜೊತೆಗೆ 'ಓಹ್ ಬೇಬಿ' ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮೂರು ದಿನಗಳ ಹಿಂದಷ್ಟೆ ನಾಗ ಶೌರ್ಯ ನಟನೆಯ 'ವರಡು ಕಾವಲೇನು' ಸಿನಿಮಾ ಬಿಡುಗಡೆ ಆಗಿದೆ. ಇನ್ನೂ ನಾಲ್ಕು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿದೆ. ನಾಗ ಶೌರ್ಯ ಚಿಕ್ಕಪ್ಪನ ಹೆಸರು ಪ್ರಕರಣದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ತೆಲುಗು ಸಿನಿಮಾ ರಂಗಗದ ಕೆಲವರು ಜೂಜಾಟ ಆಡುವ, ಜೂಜಾಡಿಸುವ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. 'ಕಿಕ್', 'ರೇಸು ಗುರ್ರಂ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಶ್ಯಾಮ್ ಕೆಲವು ತಿಂಗಳುಗಳ ಹಿಂದೆ ತಮ್ಮ ಫಾರಂ ಹೌಸ್‌ನಲ್ಲಿ ಜೂಜಾಡಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಕೆಲವು ನಟರೂ ಸಹ ಜೂಜಾಟದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಯೂ ಭಾರಿ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿತ್ತು.

More from Filmibeat

English summary
Police raid on Naga Shaurya farm house 30 people arrest. 67 lakh rs cash, 33 mobile and three cars seized.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X