ಸಣ್ಣ ಪಾತ್ರಕ್ಕೆ ದೊಡ್ಡ ಸಂಭಾವನೆ ಕೇಳಿದ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ ತೆಲುಗಿನ ಅತ್ಯಂತ ಬ್ಯುಸಿ ನಟಿ. ದೊಡ್ಡ-ದೊಡ್ಡ ಬ್ಯಾನರ್‌ಗಳಲ್ಲಿ, ದೊಡ್ಡ-ದೊಡ್ಡ ಸ್ಟಾರ್ ನಟರೊಂದಿಗೆ ನಟಿಸುತ್ತಿರುವ ಪೂಜಾ ಹೆಗ್ಡೆ ಪ್ರಸ್ತುತ ತೆಲುಗಿನ ನಂಬರ್ 1 ನಟಿ ಸಹ ಹೌದು.

'ಅಲಾ ವೈಕುಂಟಪುರಂಲೋ' ಸಿನಿಮಾ ಹಿಟ್ ಆದ ಬಳಿಕ ತಮ್ಮ ಸಂಭಾವನೆ ಏರಿಸಿಕೊಂಡಿರುವ ಈ ನಟಿ ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯೂ ಹೌದು.

ಆದರೆ ಪೂಜಾ ಹೆಗ್ಡೆ ಸಣ್ಣ ಪಾತ್ರಕ್ಕೂ ದೊಡ್ಡ ಸಂಭಾವನೆಗಾಗಿ ಬೇಡಿಕೆ ಇಟ್ಟಿರುವುದು ನಿರ್ಮಾಪಕರಿಗೆ ತಲೆನೋವು ತಂದಿದೆ. ಈ ಬೇಡಿಕೆ ಇಟ್ಟಿರುವುದು ಬೇರೆ ಯಾವುದೋ ಸಿನಿಮಾಕ್ಕಲ್ಲ ಬದಲಿಗೆ ಚಿರಂಜೀವಿ ನಟಿಸುತ್ತಿರುವ 'ಆಚಾರ್ಯ' ಸಿನಿಮಾಕ್ಕೆ.

 ಸಣ್ಣ ಪಾತ್ರಕ್ಕೆ ದೊಡ್ಡ ಸಂಭಾವನೆ ಕೇಳುತ್ತಿರುವ ಪೂಜಾ?

ಸಣ್ಣ ಪಾತ್ರಕ್ಕೆ ದೊಡ್ಡ ಸಂಭಾವನೆ ಕೇಳುತ್ತಿರುವ ಪೂಜಾ?

'ಆಚಾರ್ಯ' ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆಯದ್ದು ಸಣ್ಣ ಪಾತ್ರವಿದೆ. ರಾಮ್ ಚರಣ್ ತೇಜ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇದು ದೊಡ್ಡ ಪಾತ್ರವೇನಲ್ಲ, ಏಕೆಂದರೆ ಸಿನಿಮಾದ ನಾಯಕಿ ಬೇರೆಯೇ ಇದ್ದಾರೆ. ಆದರೆ ಈ ಸಣ್ಣ ಪಾತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿದ್ದಾರೆ ನಟಿ ಪೂಜಾ.

 ಆಚಾರ್ಯ ಸಿನಿಮಾಕ್ಕೆ ಒಂದು ಕೋಟಿ?

ಆಚಾರ್ಯ ಸಿನಿಮಾಕ್ಕೆ ಒಂದು ಕೋಟಿ?

ಪೂಜಾ ಹೆಗ್ಡೆ ತಮ್ಮ ಇತ್ತೀಚಿನ ಸಿನಿಮಾ 'ರಾಧೆ-ಶ್ಯಾಮ್' ಗಾಗಿ ಎರಡು ಕೋಟಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ನಟಿಸಿದ್ದ ಈ ಸಿನಿಮಾದ ಚಿತ್ರೀಕರಣ ಪ್ಯಾರಿಸ್‌ನಲ್ಲಿ ನಡೆದಿತ್ತು. ಈಗ 'ಆಚಾರ್ಯ' ಸಿನಿಮಾಕ್ಕೆ ಒಂದು ಕೋಟಿ ಕೇಳಿದ್ದಾರೆ ಎನ್ನಲಾಗುತ್ತಿದೆ.

ಸೆಟ್‌ ಒಂದಕ್ಕೆ ಹಲವು ಕೋಟಿ ಖರ್ಚು

ಸೆಟ್‌ ಒಂದಕ್ಕೆ ಹಲವು ಕೋಟಿ ಖರ್ಚು

'ಆಚಾರ್ಯ' ಸಿನಿಮಾದ ನಿರ್ಮಾಣ ಮಾಡಿರುವುದು ರಾಮ್ ಚರಣ್ ತೇಜ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಹ. ಈ ಸಿನಿಮಾದ ಮೇಲೆ ದೊಡ್ಡ ಬಂಡವಾಳ ಹೂಡಲಾಗಿದೆ. ಈ ಸಿನಿಮಾದ ಸೆಟ್ ಏಷ್ಯಾದಲ್ಲಿಯೇ ಅತಿ ದೊಡ್ಡ ಸಿನಿಮಾ ಸೆಟ್ ಆಗಿದೆ. ಸೆಟ್ ಒಂದಕ್ಕೆ ಹಲವು ಕೋಟಿಗಳನ್ನು ಖರ್ಚು ಮಾಡಲಾಗಿದೆ.

Recommended Video

ಟ್ರೈಲರ್ ಬಿಡುಗಡೆಯಲ್ಲೂ ಕುತೂಹಲ ಮೂಡಿಸಿದ ದರ್ಶನ್ | Filmibeat Kannada
ಕೊರಟಾಲ ಶಿವ ನಿರ್ದೇಶನ

ಕೊರಟಾಲ ಶಿವ ನಿರ್ದೇಶನ

ಚಿರಂಜೀವಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಾಯಕಿ ಆಗಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು, ಸೋನು ಸೂದ್ ಸಹ ಸಿನಿಮಾದಲ್ಲಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ತಡವಾಗಿತ್ತು.

More from Filmibeat

English summary
Actress Pooja Hegde asking big remuneration for Acharya movie. But in the movie she has very small role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X